ಕನ್ನಡದಲ್ಲಿ ಈಗ ಕಂಟೆಂಟ್ ಓರಿಯಂಟೆಡ್ ಚಿತ್ರಗಳು ಹೆಚ್ಚಾಗಿ ಗೆಲ್ಲುತ್ತಿದೆ. ಅಂತಹ ವಿಭಿನ್ನ ಹಾಗೂ ನೈಜಘಟನೆ ಆಧಾರಿತ ‘ಸೆಕ್ಟರ್ 7’ (Sector 7) ಚಿತ್ರದ ಮುಹೂರ್ತ ಸಮಾರಂಭ ಇತ್ತೀಚೆಗೆ ಉಲ್ಲಾಳದ ಶ್ರೀಮುನೇಶ್ವರ ದೇವಸ್ಥಾನದಲ್ಲಿ ನೆರವೇರಿತು. ಚಿತ್ರದ ಮೊದಲ ಸನ್ನಿವೇಶಕ್ಕೆ ಕೃಷ್ಣರಾಜೇ ಅರಸ್ ಆರಂಭ ಫಲಕ ತೋರಿದರು. ಶ್ರೀಕಾಂತ್ ರಾಜೇ ಅರಸ್ ಕ್ಯಾಮೆರಾ ಚಾಲನೆ ಮಾಡಿದರು. ಬೆಂಗಳೂರು ಹಾಗೂ ಊಟಿಯಲ್ಲಿ ಚಿತ್ರೀಕರಣ ನಡೆಯಲಿದೆ.
Advertisement
ನೈಜಘಟನೆ ಆಧಾರಿತ ಹಾಗೂ ಹಾರಾರ್ ಕಥಾಹಂದರ ಹೊಂದಿರುವ ಈ ಚಿತ್ರವನ್ನು ಸಂಜೀವ್ ಗವಂಡಿ ನಿರ್ದೇಶಿಸುತ್ತಿದ್ದಾರೆ. ಚಿತ್ರಕಥೆ ಹಾಗೂ ಸಂಭಾಷಣೆಯನ್ನು ಸಂಜೀವ್ ಗವಂಡಿ (Sanjeev Gavandi) ಅವರೆ ಬರೆದಿದ್ದಾರೆ. ಮಂಗಾಟ ಚಿತ್ರದ ಮೂಲಕ ನಿರ್ದೇಶನ ಆರಂಭಿಸಿದ್ದ ಸಂಜೀವ್ ಅವರಿಗೆ ಸೆಕ್ಟರ್ 7 ಐದನೇ ನಿರ್ದೇಶನದ ಚಿತ್ರ. ಎಂ.ಎಸ್ ಮೂವೀಸ್ ಲಾಂಛನದಲ್ಲಿ ಮಂಜುಳ ಅರಸ್ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಇದನ್ನೂ ಓದಿ:ಸಮಂತಾ ಮುಖ ಕಿತ್ತು ಹೋಗಿದೆ, ದುಡ್ಡಿಗಾಗಿ ಅರೆಬೆತ್ತಲೆ ಕುಣಿಯುತ್ತಾಳೆ ಎಂದು ಕುಟುಕಿದ ನಿರ್ಮಾಪಕ
Advertisement
Advertisement
ಎರಡು ಹಾಡುಗಳಿರುವ ಈ ಚಿತ್ರಕ್ಕೆ ವಿನು ಮನಸ್ಸು ಸಂಗೀತ ನೀಡುತ್ತಿದ್ದಾರೆ. ವೀರೇಶ್ ಛಾಯಾಗ್ರಹಣ, ಆದಿ ಆದರ್ಶ ಸಂಕಲನ ಹಾಗೂ ವಿ.ನಾಗೇಶ್ ಅವರ ನೃತ್ಯ ನಿರ್ದೇಶನ ಚಿತ್ರಕ್ಕಿದೆ. ನೂತನ ಪ್ರತಿಭೆ ಸುನೀಲ್ ಕುಮಾರ್ (Sunil Kumar) ಈ ಚಿತ್ರದ ನಾಯಕ. ಐಶ್ವರ್ಯ (Aishwarya) ನಾಯಕಿ. ನಿರ್ಮಾಪಕಿ ಮಂಜುಳ ಅರಸ್ ಅವರು ಸಹ ಪ್ರಮುಖಪಾತ್ರದಲ್ಲಿ ನಟಿಸುತ್ತಿದ್ದಾರೆ. ಸ್ನೇಹ, ನಾಗರಾಜು, ಹನುಮಂತೇ ಗೌಡ, ಗಿರೀಶ್ ಜತ್ತಿ, ಹೇಮಾ, ವಿನೋದ್ ಗೊಬ್ಬರಗಾಲ, ಚೇತನ್, ಮೈಕೋ ಶಿವಕುಮಾರ್ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ.