ಮುಂಬೈ: ಅಮೆರಿಕ ಹಾಗೂ ವೆಸ್ಟ್ ಇಂಡೀಸ್ ಆತಿಥ್ಯದಲ್ಲಿ ಮುಂಬರುವ ಜೂನ್ ತಿಂಗಳಲ್ಲಿ ನಡೆಯಲಿರುವ ಐಸಿಸಿ ಟಿ20 ವಿಶ್ವಕಪ್ ಟೂರ್ನಿಗಾಗಿ ಭಾರತ ತಂಡದ (Team India) 15 ಆಟಗಾರರ ಪೈಕಿ ಮೊದಲ ಬ್ಯಾಚ್ ಇಂದು (ಶನಿವಾರ) ಅಮೆರಿಕದತ್ತ (USA) ಹೊರಟಿದೆ.
ಮೇ 19ಕ್ಕೂ ಮುನ್ನವೇ 2024ರ ಐಪಿಎಲ್‌ನಿಂದ ಔಟ್ ಆದ 6 ಫ್ರಾಂಚೈಸಿಯ ಆಟಗಾರರು ಮುಂಬೈ ವಿಮಾನ ನಿಲ್ದಾಣದಿಂದ (Mumbai Airport) ಹೊರಟಿದ್ದಾರೆ. ಇನ್ನುಳಿದ ಆಟಗಾರರು ಮೇ 27 ರಂದು 2ನೇ ಬ್ಯಾಚ್‌ನಲ್ಲಿ ಅಮೆರಿಕಕ್ಕೆ ತೆರಳಲಿದ್ದಾರೆ. ಇದನ್ನೂ ಓದಿ: Malaysia Masters: ಜಿದ್ದಾ ಜಿದ್ದಿ ಕಣದಲ್ಲಿ ಗೆದ್ದು ಫೈನಲ್‌ಗೆ ಲಗ್ಗೆಯಿಟ್ಟ ಸಿಂಧು!
Advertisement
The World Cup dream is on! 🇮🇳
– Team India going to the USA to create history.pic.twitter.com/xbWT58I80T
— Mufaddal Vohra (@mufaddal_vohra) May 25, 2024
Advertisement
ಶನಿವಾರ ಯುಎಸ್‌ಗೆ ತೆರಳುತ್ತಿರುವ ಮೊದಲ ಬ್ಯಾಚ್‌ನಲ್ಲಿ ಹಾರ್ದಿಕ್ ಪಾಂಡ್ಯ (Hardik Pandya) ಹೊರತುಪಡಿಸಿ ರೋಹಿತ್ ಶರ್ಮಾ (Rohit Sharma), ವಿರಾಟ್ ಕೊಹ್ಲಿ, ರಿಷಭ್ ಪಂತ್, ಸೂರ್ಯಕುಮಾರ್ ಯಾದವ್, ಮೊಹಮ್ಮದ್ ಸಿರಾಜ್, ಅರ್ಷ್‌ದೀಪ್ ಸಿಂಗ್, ಕುಲ್ದೀಪ್ ಯಾದವ್, ಅಕ್ಷರ್ ಪಟೇಲ್, ಶಿವಂ ದುಬೆ, ರವೀಂದ್ರ ಜಡೇಜಾ ಮತ್ತು ಜಸ್ಪ್ರೀತ್ ಬುಮ್ರಾ, ಶುಭಮನ್ ಗಿಲ್ ಹೊರಟಿದ್ದಾರೆ. ಈ ವೇಳೆ ವಿರಾಟ್ ಕೊಹ್ಲಿ ಕಾಣಿಸಿಕೊಳ್ಳದೇ ಇರುವುದು ಕುತೂಹಲ ಮೂಡಿಸಿದೆ. ಉಳಿದ ಆಟಗಾರರಾದ ಯಶಸ್ವಿ ಜೈಸ್ವಾಲ್, ಸಂಜು ಸ್ಯಾಮ್ಸನ್, ಯುಜ್ವೇಂದ್ರ ಚಾಹಲ್ ಮತ್ತು ಮೀಸಲು ಆಟಗಾರರಾದ ಅವೇಶ್ ಖಾನ್, ಖಲೀಲ್ ಅಹ್ಮದ್ ಮತ್ತು ರಿಂಕು ಸಿಂಗ್ ಮೇ 27 ರಂದು 2ನೇ ಬ್ಯಾಚ್‌ನೊಂದಿಗೆ ಹೊರಡಲಿದ್ದಾರೆ. ಹಾರ್ದಿಕ್ ಪಾಂಡ್ಯ ಸಹ ಅಂದೇ ಯುಎಸ್‌ಎಗೆ ತೆರಳಲಿದ್ದಾರೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.
Advertisement
Advertisement
ಟಿ20 ವಿಶ್ವಕಪ್‌ಗೆ ಭಾರತ ತಂಡ:
ರೋಹಿತ್ ಶರ್ಮಾ (ನಾಯಕ), ಹಾರ್ದಿಕ್ ಪಾಂಡ್ಯ (ಉಪನಾಯಕ), ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ. ಸೂರ್ಯಕುಮಾರ್ ಯಾದವ್, ರಿಷಬ್ ಪಂತ್, ಸಂಜು ಸ್ಯಾಮ್ಸನ್, ಶಿವಂ ದುಬೆ, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಕುಲ್ದೀಪ್ ಯಾದವ್. ಯುಜ್ವೇಂದ್ರ ಚಹಾಲ್, ಅರ್ಷ್‌ದೀಪ್ ಸಿಂಗ್, ಮೊಹಮ್ಮದ್ ಸಿರಾಜ್, ಜಸ್ಪ್ರೀತ್ ಬುಮ್ರಾ. ಇದನ್ನೂ ಓದಿ: IPL 2024: ಫೈನಲ್ ಪಂದ್ಯಕ್ಕೆ ʻರೆಮಲ್ʼ ಚಂಡಮಾರುತದ ಆತಂಕ – ಮಳೆ ಅಡ್ಡಿಯಾದ್ರೆ ವಿಜೇತರನ್ನ ನಿರ್ಧರಿಸೋದು ಹೇಗೆ?
ಕೋಟ್ಯಂತರ ಅಭಿಮಾನಿಗಳ ಹಾರೈಕೆ:
ಟಿ20 ವಿಶ್ವಕಪ್ (T20 World Cup) ಟೂರ್ನಿಗಾಗಿ ಹೊರಟಿರುವ ಭಾರತ ತಂಡಕ್ಕೆ ಕೋಟ್ಯಂತರ ಅಭಿಮಾನಿಗಳು ಶುಭ ಹಾರೈಸಿದ್ದಾರೆ. ಸಾವಿರಾರು ಅಭಿಮಾನಿಗಳು ಮುಂಬೈ ವಿಮಾನ ನಿಲ್ದಾಣದ ಮುಂಭಾಗ, ಕೆಲ ಅಭಿಮಾನಿಗಳು ಏರ್ಪೋರ್ಟ್ ಆವರಣದಲ್ಲಿ ನಿಂತು ಶುಭಕೋರಿದ್ದಾರೆ. ಕೋಟ್ಯಂತರ ಅಭಿಮಾನಿಗಳು ತಮ್ಮ ತಮ್ಮ ಸೋಷಿಯಲ್ ಮೀಡಿಯಾ ಖಾತೆಗಳಲ್ಲಿ ಫೋಟೋ ಹಂಚಿಕೊಂಡಿದ್ದು, ʻಗೆದ್ದು ಬಾ ಭಾರತʼ ಎಂದು ಹಾರೈಸಿದ್ದಾರೆ. ಇದನ್ನೂ ಓದಿ: ಕೋಚ್ ಹುದ್ದೆಗೆ ಆಸ್ಟ್ರೇಲಿಯಾದ ಯಾವುದೇ ಆಟಗಾರರನ್ನು ಬಿಸಿಸಿಐ ಸಂಪರ್ಕಿಸಿಲ್ಲ: ಜಯ್‌ಶಾ
ವಿಶ್ವಕಪ್ ಟೂರ್ನಿ ಎಲ್ಲಿ? ಯಾವಾಗ?
ಜೂನ್ 1 ರಿಂದ ಜೂನ್ 29ರ ವರೆಗೆ ವಿಶ್ವಕಪ್ ಟೂರ್ನಿ ನಡೆಯಲಿದ್ದು, ಜೂನ್ 9ರಂದು ನ್ಯೂಯಾರ್ಕ್‌ನಲ್ಲಿ ಭಾರತ ಮತ್ತು ಪಾಕ್ ತಂಡಗಳು ಮುಖಾಮುಖಿಯಾಗಲಿವೆ. ಈ ಬಾರಿ 16 ರಿಂದ 20ಕ್ಕೆ ತಂಡಗಳ ಸಂಖ್ಯೆಯನ್ನು ಹೆಚ್ಚಿಸಿದ್ದು, ಒಟ್ಟು 4 ಗುಂಪುಗಳಲ್ಲಿ 20 ತಂಡಗಳು ಕಣಕ್ಕಿಳಿಯಲಿವೆ. ಅಲ್ಲದೇ ಸೂಪರ್-12 ಹಂತವನ್ನು ಸೂಪರ್-8ಗೆ ಇಳಿಸಲಾಗಿದೆ. ಸೂಪರ್-8 ಗುಂಪಿನಲ್ಲಿ ಅಗ್ರಸ್ಥಾನ ಪಡೆದ 4 ತಂಡಗಳು ಸೆಮಿಫೈನಲ್ ಪ್ರವೇಶಿಸಲಿವೆ. ಜೂನ್ 1 ರಿಂದ 18ರ ವರೆಗೆ ಗುಂಪು ಹಂತದ ಪಂದ್ಯಗಳು ನಡೆಯಲಿದೆ. ಜೂನ್ 19 ರಿಂದ 24ರ ವರೆಗೆ ಸೂಪರ್-8 ಪಂದ್ಯಗಳು, ಜೂನ್ 26 ಮತ್ತು ಜೂನ್ 27 ರಂದು ಸೆಮಿಫೈನಲ್ ಪಂದ್ಯಗಳು ನಡಯೆಲಿದ್ದು, ಜೂನ್ 29ರಂದು ಬಾರ್ಬಡೋಸ್ ಮೈದಾನದಲ್ಲಿ ಫೈನಲ್ ಪಂದ್ಯ ನಡೆಯಲಿದೆ.
ಯಾವ ಗುಂಪಿನಲ್ಲಿ-ಯಾವ ತಂಡಗಳು?
ಗುಂಪು-ಎ: ಭಾರತ, ಪಾಕಿಸ್ತಾನ, ಐರ್ಲೆಂಡ್, ಕೆನಡಾ, ಯುಎಸ್‌ಎ
ಗ್ರೂಪ್-ಬಿ: ಇಂಗ್ಲೆಂಡ್, ಆಸ್ಟ್ರೇಲಿಯಾ, ನಮೀಬಿಯಾ, ಸ್ಕಾಟ್‌ಲೆಂಡ್, ಒಮನ್
ಗ್ರೂಪ್-ಸಿ: ನ್ಯೂಜಿಲೆಂಡ್, ವೆಸ್ಟ್ ಇಂಡೀಸ್, ಅಫ್ಘಾನಿಸ್ತಾನ, ಉಗಾಂಡ, ಪಪುವಾ ನ್ಯೂ ಗಿನಿಯಾ
ಗ್ರೂಪ್-ಡಿ: ದಕ್ಷಿಣ ಆಫ್ರಿಕಾ, ಶ್ರೀಲಂಕಾ, ಬಾಂಗ್ಲಾದೇಶ, ನೆದರ್ಲೆಂಡ್ಸ್, ನೇಪಾಳ