ಹೈದರಾಬಾದ್‍ನಲ್ಲಿ ಮತ್ತೊಂದು ಮರ್ಯಾದಾ ಹತ್ಯೆಗೆ ಯತ್ನ- ಪ್ರೀತ್ಸಿ ಮದ್ವೆಯಾದ ಒಂದೇ ವಾರಕ್ಕೆ ಜೋಡಿ ಮೇಲೆ ಹಲ್ಲೆ

Public TV
2 Min Read
honour killing 2

ಹೈದರಾಬಾದ್: ತೆಲಂಗಾಣದಲ್ಲಿ ನಡೆದ ಮರ್ಯಾದಾ ಹತ್ಯೆಯ ಘಟನೆ ಮಾಸುವ ಮುನ್ನವೇ ಇದೀಗ ಹೈದರಾಬಾದ್‍ನಲ್ಲಿ ಮತ್ತೊಂದು ಮರ್ಯಾದಾ ಹತ್ಯೆಗೆ ಯತ್ನ ನಡೆದಿದೆ. ಕುಟುಂಬದ ಇಚ್ಛೆಗೆ ವಿರುದ್ಧವಾಗಿ ಮದುವೆ ಆಗಿದ್ದ ನವವಿವಾಹಿತರ ಮೇಲೆ ಯುವತಿಯ ತಂದೆ ಮಚ್ಚು ಬೀಸಿದ ಘಟನೆ ಹೈದರಾಬಾದ್ ನ ಎಸ್‍ಆರ್ ನಗರದಲ್ಲಿ ನಡೆದಿದೆ.

ಮಾಧವಿ ಹಾಗೂ ಸಂದೀಪ್ ಪ್ರೀತಿಸಿ ಒಂದು ವಾರದ ಹಿಂದೆಯಷ್ಟೇ ಮದುವೆಯಾಗಿದ್ದರು. ಬಳಿಕ ರಾಜಿ ಸಂಧಾನ ಎಂದು ಯುವತಿಯ ತಂದೆ ಮನೋಹರಚಾರಿ ಕರೆಸಿದ್ದನು. ಹೀಗಾಗಿ ಸಂದೀಪ್ ಹಾಗೂ ಮಾಧವಿ ಇಬ್ಬರು ಮನೋಹರಚಾರಿಯನ್ನು ಭೇಟಿಯಾಗಲು ಹೋದರು. ಈ ವೇಳೆ ಮನೋಹರಚಾರಿ ಅವರಿಬ್ಬರನ್ನು ನೋಡುತ್ತಿದ್ದಂತೆಯೇ ತನ್ನ ವಾಹನವನ್ನು ಪಾರ್ಕ್ ಮಾಡಿ, ಹೆಲ್ಮೆಟ್ ತೆಗೆದು ಒಂದು ನಿಮಿಷ ತಡ ಮಾಡದೇ ಸಂದೀಪ್ ಮೇಲೆ ಮಚ್ಚು ಬೀಸಿದ್ದಾನೆ. ಇದನ್ನೂ ಓದಿ: ಮರ್ಯಾದಾ ಹತ್ಯೆ: ಗರ್ಭಿಣಿ ಪತ್ನಿಯ ಎದುರೇ ಪತಿಯ ತಲೆಗೆ ಮಚ್ಚಿನಿಂದ ಏಟು

honour killing

ಮನೋಹರಚಾರಿ ಮೊದಲು ಸಂದೀಪ್ ಮೇಲೆ ಹಲ್ಲೆ ನಡೆಸಿ, ನಂತರ ತನ್ನ ಮಗಳು ಮಾಧವಿ ಮೇಲೆ ಹಲ್ಲೆ ನಡೆಸಿದ್ದಾನೆ. ಮನೋಹರಚಾರಿ ಇಬ್ಬರ ಮೇಲೆ ಹಲ್ಲೆ ನಡೆಸುತ್ತಿದ್ದಾಗ ಅಲ್ಲಿದ್ದ ಜನರು ಅವರನ್ನು ತಡೆಯಲು ಹೋದರು. ಆದರೆ ಯಾವುದೇ ಪ್ರಯೋಜನವಾಗಲಿಲ್ಲ. ಇಬ್ಬರ ಮೇಲೂ ಹಲ್ಲೆ ನಡೆಸಿದ ಬಳಿಕ ಆರೋಪಿ ಅಲ್ಲಿಂದ ಪರಾರಿಯಾಗಿದ್ದಾನೆ. ಮನೋಹರಚಾರಿ ಹಲ್ಲೆ ನಡೆಸುತ್ತಿರುವ ವಿಡಿಯೋ ಸ್ಥಳೀಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇದನ್ನೂ ಓದಿ: ಮರ್ಯದಾ ಹತ್ಯೆ: ಪ್ರಣಯ್ ಕೊಲ್ಲಲು 1 ಕೋಟಿಗೆ ಸುಪಾರಿ ನೀಡಿದ್ದ ಮಾವ

honour killing 4

ಹಲ್ಲೆಯಿಂದಾಗಿ ರಕ್ತದ ಮಡುವಿನಲ್ಲಿ ಬಿದ್ದಿದ್ದ ಇಬ್ಬರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಹಲ್ಲೆಗೊಳಗಾದ ಸಂದೀಪ್‍ಗೆ ಗಂಭೀರ ಗಾಯಗಳಾಗಿವೆ. ಮಾಧವಿಗೂ ಕತ್ತು ಹಾಗೂ ಕೈ ಭಾಗದಲ್ಲಿ ಗಂಭೀರ ಗಾಯವಾಗಿದ್ದು, ತೀವ್ರ ರಕ್ತಸ್ತ್ರಾವ ಆಗಿದೆ. ಹಲ್ಲೆಗೊಳಗಾದ ಮಾಧವಿ ದೈಹಿಕ ಹಾಗೂ ಮಾನಸಿಕವಾಗಿ ಶಾಕ್‍ಗೆ ಒಳಗಾಗಿದ್ದಾರೆ. ಅಲ್ಲದೇ ತೀವ್ರ ರಸ್ತಸ್ತ್ರಾವ ಆಗಿದ್ದರಿಂದ ಆಕೆಗೆ ಇನ್ಫೆಕ್ಷನ್ ಆಗುವ ಸಾಧ್ಯತೆಗಳಿವೆ. ಹಾಗಾಗಿ 24 ಗಂಟೆಗಳಿಂದ ಆಕೆಯನ್ನು ನೋಡಿಕೊಳ್ಳಲಾಗುತ್ತಿದೆ ಎಂದು ವೈದ್ಯರು ತಿಳಿಸಿದ್ದಾರೆ.

honour killing 3

ಪ್ರೀತಿ ಶುರುವಾಗಿದ್ದು ಹೇಗೆ?
ಮಾಧವಿ ಹಾಗೂ ಸಂದೀಪ್ ಒಬ್ಬರನ್ನೊಬ್ಬರು 5 ವರ್ಷದಿಂದ ಪ್ರೀತಿಸುತ್ತಿದ್ದರು. ಹೈದರಾಬಾದ್‍ನ ಬೇರೆ ಬೇರೆ ಕಾಲೇಜಿನಲ್ಲಿ ಓದ್ದುತ್ತಿದ್ದ ಇಬ್ಬರೂ ಮದುವೆಯಾಗಲು ನಿರ್ಧರಿಸಿದ್ದರು. ಆದರೆ ಮಾಧವಿ ಕುಟುಂಬ ಮೇಲ್ಜಾತಿ ಆದ ಕಾರಣ ಅವರು ಈ ಮದುವೆಯನ್ನು ವಿರೋಧಿಸಿದ್ದರು. ಹಾಗಾಗಿ ಸಂದೀಪ್ ಹಾಗೂ ಮಾಧವಿ ಕಳೆದ ಬುಧವಾರ ಸ್ನೇಹಿತರ ಸಮ್ಮುಖದಲ್ಲಿ ಆರ್ಯ ಸಮಾಜದಲ್ಲಿ ಮದುವೆಯಾಗಿದ್ದರು.

ಸಂದೀಪ್ ಹಾಗೂ ಮಾಧವಿ ಮದುವೆಯಾದ ಬಳಿಕ ಎಸ್‍ಆರ್ ಪೊಲೀಸ್ ಠಾಣೆಗೆ ಬಂದಿದ್ದರು. ಆಗ ಇಬ್ಬರ ಕುಟುಂಬದವರನ್ನು ಕರೆಸಿ ರಾಜಿ ಸಂಧಾನ ಮಾಡಿಸಲಾಗಿತ್ತು. ಸದ್ಯ ಈಗ ನಾವು ಆರೋಪಿ ಮನೋಹರಚಾರಿಯನ್ನು ಹುಡುಕುತ್ತಿದ್ದೇವೆ ಎಂದು ಪೊಲೀಸ್ ಅಧಿಕಾರಿ ವಿಜಯ್ ಕುಮಾರ್ ತಿಳಿಸಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *