Wednesday, 18th July 2018

ಚಾಲೆಂಜಿಂಗ್ ಹೀರೋ ದರ್ಶನ್ ಮುಡಿಗೆ ಮತ್ತೊಂದು ಗರಿ

ಬೆಂಗಳೂರು: ದರ್ಶನ್ ಫ್ಯಾನ್ಸ್ ಗಳಿಗೆ ಇಂದು ಗುಡ್ ನ್ಯೂಸ್. ಪ್ರೀತಿಯ ದಾಸ ದರ್ಶನ್ ಖ್ಯಾತಿ ಇದೀಗ ಇಂಗ್ಲೆಂಡ್ ತಲುಪಿದ್ದು, ಅಲ್ಲಿನ ಸರ್ಕಾರದ ಗೌರವ ಪ್ರಶಸ್ತಿ ಒಲಿದು ಬಂದಿದೆ.

ದರ್ಶನ್ ಸಿನಿಮಾ ಇಂಡಸ್ಟ್ರಿಗೆ ಬಂದು ಸುಮಾರು 20 ವರ್ಷ ಆಗುತ್ತಾ ಬಂದಿದೆ. ಇದುವರೆಗೂ ದರ್ಶನ್ ಯಾವುದೇ ಪ್ರಶಸ್ತಿಯ ಫಲಾಪೇಕ್ಷೆ ಇಲ್ಲದೆ ಅಭಿನಯಿಸುತ್ತಾ ಬಂದಿರುವ ನಟ. ಹಾಗಿದ್ರೂ ದರ್ಶನ್ ಅವರ ಕಲಾಸೇವೆಯನ್ನ ಮೆಚ್ಚಿ ಅನೇಕ ಪ್ರಶಸ್ತಿಗಳು ಬಂದಿವೆ. ಇದೀಗ ಇಂಗ್ಲೆಂಡ್ ಪಾರ್ಲಿಮೆಂಟ್ ನಿಂದ ಭಾರತೀಯರಿಗೆ ನೀಡುವ ಗೌರವಕ್ಕೆ ದರ್ಶನ್ ಭಾಜನರಾಗಿದ್ದಾರೆ.

ಲಂಡನ್ ಸರ್ಕಾರದಿಂದ ಪ್ರತಿ ವರ್ಷ ವಿವಿಧ ವಲಯಗಳಲ್ಲಿ ಸೇವೆ ಸಲ್ಲಿಸಿರುವ ಸಾಧಕರಿಗೆ ಸನ್ಮಾನಿಸಲಾಗುತ್ತದೆ. ವಿರೇಂದ್ರ ಶರ್ಮಾ ಲಂಡನ್ ಪಾರ್ಲಿಮೆಂಟ್‍ನಲ್ಲಿ ಸಂಸದರಾಗಿದ್ದು, ಈ ಹಿಂದೆ ಸಲ್ಮಾನ್ ಖಾನ್, ಅಮಿತಾಬ್ ಬಚ್ಚನ್ ಸೇರಿದಂತೆ ಹಲವರನ್ನ ಗೌರವ ಪ್ರಶಸ್ತಿ ನೀಡಿ ಸನ್ಮಾನಿಸಿದ್ದರು. ಇದೀಗ ಸೌತ್ ಇಂಡಿಯಾದಲ್ಲೇ ಮೊದಲ ಬಾರಿಗೆ ಕರ್ನಾಟಕದಿಂದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಬ್ರಿಟನ್ ಸರ್ಕಾರದ ಗೌರವ ಪ್ರಶಸ್ತಿಗೆ ಆಯ್ಕೆ ಆಗಿದ್ದಾರೆ.

ಇದೀಗ ರಾಮೋಜಿರಾವ್ ಫಿಲ್ಮ್ ಸಿಟಿಯಲ್ಲಿ ದರ್ಶನ್ ಅಭಿನಯದ ಕುರುಕ್ಷೇತ್ರ ಚಿತ್ರದ ಚಿತ್ರೀಕರಣ ನಡೆಯುತ್ತಿದೆ. ಅಲ್ಲಿಂದ ದರ್ಶನ್ 18ರಂದು ಲಂಡನ್‍ಗೆ ಪ್ರಯಾಣ ಬೆಳಸಲಿದ್ದಾರೆ. 19 ರಂದು ಲಂಡನ್ ಪಾರ್ಲಿಮೆಂಟ್ ಭವನದಲ್ಲಿಯೇ ದರ್ಶನ್‍ರನ್ನು ಸನ್ಮಾನಿಸಿ ಗೌರವ ಪ್ರಶಸ್ತಿ ನೀಡಲಾಗುತ್ತದೆ. ಕಲೆ ಮತ್ತು ಸಂಸ್ಕೃತಿ ವಿಭಾಗದಲ್ಲಿ ದರ್ಶನ್ ಕೊಡುಗೆಯನ್ನ ಆಧರಿಸಿ ಈ ಪ್ರಶಸ್ತಿ ನೀಡಲಾಗುತ್ತಿದೆ.

Leave a Reply

Your email address will not be published. Required fields are marked *