ನವದೆಹಲಿ: ಇಲ್ಲಿನ ಕೆಲವು ಶಾಲೆಗಳಿಗೆ ಬಾಂಬ್ ಬೆದರಿಕೆ (Bomb Threat) ಬಂದಿದ್ದು, ಕಳೆದ 9 ದಿನಗಳಲ್ಲಿ 5ನೇ ಬಾಂಬ್ ಬೆದರಿಕೆ ಇದಾಗಿದೆ.
ದೆಹಲಿ ಅಗ್ನಿಶಾಮಕ ದಳದ (Delhi Fire Service) ಮಾಹಿತಿಯ ಪ್ರಕಾರ, ದಕ್ಷಿಣ ದೆಹಲಿಯ ಇಂಡಿಯನ್ ಪಬ್ಲಿಕ್ ಸ್ಕೂಲ್ ಹಾಗೂ ವಾಯುವ್ಯ ದೆಹಲಿಯ ಸರಸ್ವತಿ ವಿಹಾರ್ ಪ್ರದೇಶದ ಕ್ರೆಸೆಂಟ್ ಪಬ್ಲಿಕ್ ಸ್ಕೂಲ್‌ನಿಂದ ಕರೆ ಮಾಡಿ ಇಂದು (ಡಿ.17) ಬೆಳಿಗ್ಗೆ ಬಾಂಬ್ ಬೆದರಿಕೆ ಬಂದಿರುವುದಾಗಿ ಮಾಹಿತಿ ನೀಡಿದರು.ಇದನ್ನೂ ಓದಿ: BBK 11: ಹದ್ದು ಮೀರಿದ ವರ್ತನೆ- ಉಗ್ರಂ ಮಂಜು, ರಜತ್ ನಡುವೆ ಕಿರಿಕ್
ಬಳಿಕ ಪೊಲೀಸರು, ಅಗ್ನಿಶಾಮಕ ದಳ, ಬಾಂಬ್ ನಿಷ್ಕ್ರೀಯ ದಳ ಹಾಗೂ ಶ್ವಾನ ದಳದ ಸಿಬ್ಬಂದಿ ಸ್ಥಳಗಳಕ್ಕೆ ದೌಡಾಯಿಸಿದ್ದು, ಪರಿಶೀಲನೆ ನಡೆಸಿದ್ದಾರೆ. ಇದುವರೆಗೆ ಯಾವುದೇ ರೀತಿಯ ಅನುಮಾನಾಸ್ಪದವಾದ್ದದ್ದು ಪತ್ತೆಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದಕ್ಕೂ ಮುನ್ನ ದೆಹಲಿಯ ಆರು ಶಾಲೆಗಳಿಗೆ ಡಿ.13 ರಂದು ಮುಂಜಾನೆ ಬಾಂಬ್ ಬೆದರಿಕೆ ಕರೆ ಬಂದಿತ್ತು. ಇನ್ನೂ ಡಿ.9 ರಂದು ಇದೇ ರೀತಿಯ ಬೆದರಿಕೆ ಕರೆ ಬಂದಿತ್ತು. ಕನಿಷ್ಠ 44 ಶಾಲೆಗಳು ಬಾಂಬ್ ಬೆದರಿಕೆ ಇಮೇಲ್‌ಗಳನ್ನು ಸ್ವೀಕರಿಸಿದ್ದವು. ನಂತರ, ಇದು ಹುಸಿ ಬಾಂಬ್ ಬೆದರಿಕೆ ಎಂದು ಪೊಲೀಸರು ನಿರ್ಧರಿಸಿದ್ದರು.
ಭಟ್ನಾಗರ್ ಇಂಟರ್ನ್ಯಾಷನಲ್ ಸ್ಕೂಲ್, ಪಶ್ಚಿಮ ವಿಹಾರ್, ಕೇಂಬ್ರಿಡ್ಜ್ ಶಾಲೆ, ಶ್ರೀನಿವಾಸ್ ಪುರಿ, ಡಿಪಿಎಸ್ ಅಮರ್ ಕಾಲೋನಿ, ಕೈಲಾಶ್ ಪೂರ್ವ, ದಕ್ಷಿಣ ದೆಹಲಿ ಪಬ್ಲಿಕ್ ಸ್ಕೂಲ್, ಡಿಫೆನ್ಸ್ ಕಾಲೋನಿ, ದೆಹಲಿ ಪೊಲೀಸ್ ಪಬ್ಲಿಕ್ ಸ್ಕೂಲ್, ಸಫ್ದರ್ಜಂಗ್, ವೆಂಕಟೇಶ್ವರ್ ಗ್ಲೋಬಲ್ ಸ್ಕೂಲ್, ರೋಹಿಣಿ ಬೆದರಿಕೆ ಇ-ಮೇಲ್‌ಗಳಿಗೆ ಸಂಬಂಧಿಸಿದ ಕರೆಯನ್ನು ಸ್ವೀಕರಿಸಿವೆ ಎಂದು ದೆಹಲಿ ಅಗ್ನಿಶಾಮಕ ಸೇವೆಯ ಅಧಿಕಾರಿಯೊಬ್ಬರು ತಿಳಿಸಿದ್ದರು.ಇದನ್ನೂ ಓದಿ: 2ನೇ ತ್ರೈಮಾಸಿಕದಲ್ಲಿ ದೇಶದ ಬೆಳವಣಿಗೆ ದರವು 5.4% ರಷ್ಟಿದೆ – ನಿರ್ಮಲಾ ಸೀತಾರಾಮನ್