– ಪಾದಾಯಾತ್ರೆಗೆ ಎಸ್ಟಿ ಮೋರ್ಚಾ ರಾಜಾಧ್ಯಕ್ಷ ಬಂಗಾರು ಹನುಮಂತು ಸಾಥ್
ಬಳ್ಳಾರಿ: ಮುಂದಿನ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರಬೇಕು. 150 ಸ್ಥಾನ ಗೆಲ್ಲಿಸುತ್ತೇನೆ ಎಂದು ಪಾದಯಾತ್ರೆ ಕೈಗೊಂಡಿರುವ ಮಾಜಿ ಸಚಿವ ಶ್ರೀರಾಮುಲು (Sreeramulu) ಅವರಿಗೆ ಮುಂದಿನ ಚುನಾವಣೆಯ ಆಕಾಂಕ್ಷಿ ಸೂರ್ಯಪಾಪಣ್ಣ (Surya Papanna) ನೇತೃತ್ವದಲ್ಲಿ ಮತ್ತೊಂದು ಬಿಜೆಪಿ ತಂಡ ಪ್ರತ್ಯೇಕ ಪಾದಯಾತ್ರೆ ಮಾಡುವ ಮೂಲಕ ಟಕ್ಕರ್ ನೀಡಿದೆ.
Advertisement
Advertisement
ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಯಲ್ಲಿ ಸೋತು ಕಂಗೆಟ್ಟಿರುವ ಮಾಜಿ ಸಚಿವ ಶ್ರೀರಾಮುಲು ಇದೀಗ ವಿಜಯನಗರ ಜಿಲ್ಲೆಯ ಕೂಡ್ಲಿಗಿ ಕ್ಷೇತ್ರದ ಮೇಲೆ ಕಣ್ಣಿಟ್ಟಿದ್ದಾರೆ. ಅಲ್ಲದೇ ಸ್ವತಃ ತಾವೇ ಕ್ಷೇತ್ರವನ್ನ ಸ್ವಯಂ ಘೋಷಿಸಿಕೊಂಡು, ಕೂಡ್ಲಿಗಿ ಕ್ಷೇತ್ರದಾದ್ಯಂತ ಓಡಾಡ್ತಿದ್ದಾರೆ. ಶ್ರೀರಾಮುಲು ನಡೆಗೆ ಕೂಡ್ಲಿಗಿ ಕ್ಷೇತ್ರದ ಬಿಜೆಪಿ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದು, ಯಾವುದೇ ಕಾರಣಕ್ಕೂ ರಾಮುಲು ಕೂಡ್ಲಿಗಿಗೆ ಬರುವುದು ಬೇಡ ಎಂದು ಕಡ್ಡಿ ತುಂಡಾಗುವಂತೆ ಹೇಳುತ್ತಿದ್ದಾರೆ. ಇದನ್ನೂ ಓದಿ: ಮುಸ್ಲಿಮರು ಪುರುಸೊತ್ತಿಲ್ಲದೆ ಮಕ್ಕಳು ಹುಟ್ಟಿಸುತ್ತಾರೆ ಅನ್ನೋದು ಪ್ರಚೋದನೆನಾ? – ಪ್ರತಾಪ್ ಸಿಂಹ
Advertisement
2028ರ ಚುನಾವಣೆಗೆ ಮೂರು ವರ್ಷ ಬಾಕಿಯಿರುವಾಗಲೇ ಕೂಡ್ಲಿಗಿ ಕ್ಷೇತ್ರದಿಂದ ಸ್ಪರ್ಧೆ ಮಾಡ್ತೇನೆ ಎಂದು ಶ್ರೀರಾಮುಲು ಸ್ವತಃ ತಾವೇ ಘೋಷಿಸಿಕೊಂಡಿದ್ದಾರೆ.
Advertisement
ಶ್ರೀರಾಮುಲು ಕೂಡ್ಲಿಗಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕೊಟ್ಟೂರು ಬಸವೇಶ್ವರ ಜಾತ್ರೆಗೆ ಕೂಡ್ಲಿಗಿಯಿಂದ ಕೊಟ್ಟೂರಿಗೆ ಪಾದಯಾತ್ರೆ ಮಾಡಿದ್ದರು. ಪಾದಯಾತ್ರೆ ವೇಳೆ ಮಾತನಾಡಿದ್ದ ಅವರು, ಬೇರೆ ಬೇರೆ ರೀತಿಯ ಪಾದಯಾತ್ರೆಗಳನ್ನ ಮಾಡಿದ್ದೇವೆ. ಧಾರ್ಮಿಕವಾಗಿ ಇದೇ ಪ್ರಥಮ ಬಾರಿಗೆ ನಾನು ಪಾದಯಾತ್ರೆ ಹಮ್ಮಿಕೊಂಡಿದ್ದೇನೆ. ರಾಜ್ಯದಲ್ಲಿ ಬಿಜೆಪಿ ಪಕ್ಷ ಬಲಿಷ್ಠವಾಗಬೇಕು. ಕೂಡ್ಲಿಗಿ ಸೇರಿದಂತೆ ರಾಜ್ಯದ 160 ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲಬೇಕು. 160 ಕ್ಷೇತ್ರಗಳಲ್ಲಿ ಗೆಲ್ಲಬೇಕು ಅಂತಾ ದೃಢ ಸಂಕಲ್ಪದೊಂದಿಗೆ ಪಾದಯಾತ್ರೆ ನಡೆಸುತ್ತಿದ್ದೇನೆ ಎಂದು ಹೇಳಿರುವುದು ಕೂಡ್ಲಿಗಿ ಬಿಜೆಪಿ ಮುಖಂಡರ ಕೆಂಗಣ್ಣಿಗೆ ಗುರಿಯಾಗಿದೆ. ಇದನ್ನೂ ಓದಿ: ಬಿಜೆಪಿ ರಾಜ್ಯಾಧ್ಯಕ್ಷರನ್ನ ಭೇಟಿಯಾದ ಪ್ರತಾಪ್ ಸಿಂಹ – ಕುತೂಹಲ ಮೂಡಿಸಿದ ವಿಜಯೇಂದ್ರ ಭೇಟಿ
ಶ್ರೀರಾಮುಲು ನೇತೃತ್ವದಲ್ಲಿ ಒಂದು ಗುಂಪು ಪಾದಯಾತ್ರೆ ಮಾಡಿದರೆ, ಸೂರ್ಯಪಾಪಣ್ಣ ನೇತೃತ್ವದಲ್ಲಿ ಮತ್ತೊಂದು ಬಿಜೆಪಿ ತಂಡ ಪ್ರತ್ಯೇಕ ಪಾದಯಾತ್ರೆ ಮಾಡಿದೆ. ಈ ಪಾದಾಯಾತ್ರೆಗೆ ಎಸ್ಟಿ ಮೋರ್ಚಾ ರಾಜಾಧ್ಯಕ್ಷ ಬಂಗಾರು ಹನುಮಂತು ಸಾಥ್ ನೀಡಿದರು. ಇದನ್ನೂ ಓದಿ: ಸಾಲಭಾದೆ ತಾಳಲಾರದೆ ವಿಸಿ ನಾಲೆಗೆ ಹಾರಿ ಒಂದೇ ಕುಟುಂಬದ ಮೂವರು ಆತ್ಮಹತ್ಯೆ
ಲೋಕಸಭಾ ಚುನಾವಣೆಯ ವೇಳೆ ಶ್ರೀರಾಮುಲು ಅವರು ಸ್ಥಳೀಯರಿಗೆ ಟಿಕೆಟ್ ಕೊಡಿಸುತ್ತೇನೆ ಎಂದು ಹೇಳಿದ್ದರು. ಆದರೆ ಈಗ ತಾವೇ ಅಭ್ಯರ್ಥಿ ಎಂದು ಹೇಳಿಕೊಂಡಿರುವ ಶ್ರೀರಾಮುಲು ನಡೆಗೆ ಕೂಡ್ಲಿಗಿ ಬಿಜೆಪಿ ಮುಖಂಡರು ಅಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ ರಾಮುಲು ಅವರ ಈ ದಂಧ್ವ ನಡೆಯ ಬಗ್ಗೆ ರಾಜ್ಯ ನಾಯಕರ ಗಮನಕ್ಕೆ ತರಲು ನಿರ್ಧಾರ ಮಾಡಿದ್ದಾರೆ ಎಂದು ಬಿಜೆಪಿ ಮುಖಂಡರು ತಿಳಿಸಿದ್ದಾರೆ.