ಬರ್ಲಿನ್: ವೃದ್ಧೆಯೊಬ್ಬಳು ಆಸ್ಪತ್ರೆಯಲ್ಲಿದ್ದ (Hospital) ವೆಂಟಿಲೇಟರ್ (Ventilator) ಶಬ್ದವು ಕಿರಿಕಿರಿಯಾಗುತ್ತಿದೆ ಎಂದು ಪಕ್ಕದಲ್ಲಿದ್ದ ರೋಗಿಯ ವೆಂಟಿಲೇಟರ್‍ನ್ನು ಆಫ್ ಮಾಡಿದ ಘಟನೆ ಜರ್ಮನಿಯಲ್ಲಿ ನಡೆದಿದೆ.
ಜರ್ಮನ್‍ನ (German) ನೈರುತ್ಯ ನಗರವಾದ ಮ್ಯಾನ್‍ಹೈಮ್‍ನಲ್ಲಿ ಈ ಘಟನೆ ನಡೆದಿದೆ. 72 ವರ್ಷದ ಜರ್ಮನ್ ಮಹಿಳೆ ಆಸ್ಪತ್ರೆಗೆ ದಾಖಲಾಗಿದ್ದಳು. ಈ ಸಂದರ್ಭದಲ್ಲಿ ಆಕೆಯ ಪಕ್ಕದಲ್ಲಿದ್ದ ರೋಗಿಯನ್ನು ವೆಂಟಿಲೇಟರ್‌ನಲ್ಲಿ ಇಡಲಾಗಿತ್ತು. ಆದರೆ ಆ ವೆಂಟಿಲೇಟರ್‌ನಿಂದ ತೀವ್ರ ಶಬ್ದ ಬರುತ್ತಿದೆ ಎಂದು 2 ಬಾರಿ ಆಫ್ ಮಾಡಿದ್ದಾಳೆ. ಇದನ್ನೂ ಓದಿ: ಗಡಿಪಾರು ನೋಟಿಸ್‌ಗೆ ಹೆದರಿ ಆತ್ಮಹತ್ಯೆಗೆ ಯತ್ನ – ಕ್ರಿಮಿನಲ್ ಆರೋಪಿ ಕೋಬ್ರಾ ಸುಹೇಲ್ ಸಾವು
Advertisement
Advertisement
ಆದರೆ ಅಷ್ಟರಲ್ಲಿ ವೈದ್ಯರು ಗಮನಿಸಿದ್ದು, ವೆಂಟಿಲೇಟರ್‍ನಲ್ಲಿದ್ದ ರೋಗಿಯು ಸಾವಿನ ದವಡೆಯಿಂದ ಪಾರಾಗಿದ್ದಾನೆ. ಆದರೂ ಆತನಿಗೆ ತೀವ್ರ ನಿಗಾ ಘಟಕದ ಅಗತ್ಯವಿದೆ ಎಂದು ವೈದ್ಯರು ತಿಳಿಸಿದ್ದಾರೆ. ಕೊಲೆಗೆ ಯತ್ನ ಆರೋಪದ ಅಡಿ ಜರ್ಮನಿ ಪೊಲೀಸರು ವೃದ್ಧೆಯನ್ನು ಬಂಧಿಸಿದ್ದಾರೆ. ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿದ್ದು ಈಗ ಆಕೆಯನ್ನು ಜೈಲಿಗೆ ಹಾಕಲಾಗಿದೆ. ಇದನ್ನೂ ಓದಿ: ದೆಹಲಿ ಗಲಭೆ ಕಲ್ಲು ತೂರಾಟ ಕೇಸ್‍ನಲ್ಲಿ ಉಮರ್ ಖಾಲಿದ್ ಖುಲಾಸೆ, ಬಿಡುಗಡೆ ಭಾಗ್ಯವಿಲ್ಲ