ಶಿವಮೊಗ್ಗ: ಹಲವು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ, ಪೊಲೀಸರಿಂದ ಗಡಿಪಾರು ಆದೇಶದ(Deportation Notice) ನೋಟಿಸ್‌ಗೆ ಬೆದರಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಆರೋಪಿ ಕೋಬ್ರಾ ಸುಹೇಲ್(Cobra Suhail) ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾನೆ.
ಜಿಲ್ಲೆಯ ತೀರ್ಥಹಳ್ಳಿ ನಿವಾಸಿಯಾದ ಕೋಬ್ರಾ ಸುಹೇಲ್ ತೀರ್ಥಹಳ್ಳಿ ಹಾಗೂ ಮಾಳೂರು ಠಾಣೆ ವ್ಯಾಪ್ತಿಯಲ್ಲಿ ಹಲವು ಅಪರಾಧ ಪ್ರಕರಣದಲ್ಲಿ ಭಾಗಿಯಾಗಿದ್ದ. ಈ ಕಾರಣಕ್ಕೆ ಪೊಲೀಸರು(Police) ಆರೋಪಿ ಸುಹೇಲ್‌ಗೆ ಗಡಿಪಾರು ಆದೇಶದ ನೋಟಿಸ್ ಜಾರಿಗೊಳಿಸಿದ್ದರು. ಇದನ್ನೂ ಓದಿ: ಮೈಸೂರು ರಿಂಗ್ ರಸ್ತೆ – ಬೀದಿ ದೀಪಗಳ MCBಯನ್ನೇ ಕದ್ದ ಕಳ್ಳರು
Advertisement
Advertisement
2 ವರ್ಷಗಳ ಗಡಿಪಾರು ಆದೇಶದ ನೋಟಿಸ್ ಹಿಡಿದುಕೊಂಡು ಪೊಲೀಸರು ಮನೆಯ ಬಳಿ ತೆರಳಿದ್ದರು. ಪೊಲೀಸರ ನೋಟಿಸ್ ಸ್ವೀಕರಿಸಿದ ನಂತರ ಸುಹೇಲ್ ಭಯಭೀತನಾಗಿದ್ದ. ಅಲ್ಲದೇ ಭಯದಿಂದಲೇ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ. ಆತ್ಮಹತ್ಯೆಗೆ ಯತ್ನಿಸಿದ್ದ ಸುಹೇಲ್‌ಗೆ ತೀರ್ಥಹಳ್ಳಿ ಹಾಗೂ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು. ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಕೋಬ್ರಾ ಸುಹೇಲ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ.