ಬೆಳಗಾವಿ: ಚಿಕ್ಕೋಡಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ಅಬ್ಬರ ಜೋರಾಗಿದೆ. ಮೈತ್ರಿ ಅಭ್ಯರ್ಥಿ, ಹಾಲಿ ಸಂಸದ ಪ್ರಕಾಶ್ ಹುಕ್ಕೇರಿ ವಿರುದ್ಧ ಅಣ್ಣಾಸಾಹೇಬ ಜೊಲ್ಲೆ 1,16,361 ಮತಗಳ ಅಂತರದಿಂದ ಗೆಲುವು ಕಂಡಿದ್ದಾರೆ.
ಅಣ್ಣಾಸಾಹೇಬ ಜೊಲ್ಲೆ 6,41,232 ಮತಗಳನ್ನು ಪಡೆದರೆ, ಕಾಂಗ್ರೆಸ್‍ನಿಂದ ಸ್ಪರ್ಧಿಸಿದ್ದ ಪ್ರಮೋದ್ ಮಧ್ವರಾಜ್ 5,24,871 ಮತಗಳನ್ನು ಪಡೆದು ಸೋಲು ಕಂಡಿದ್ದಾರೆ.
ಬಿಜೆಪಿ ಗೆದ್ದಿದ್ದು ಹೇಗೆ?
ಚಿಕ್ಕೋಡಿಯಲ್ಲಿ ಪ್ರಧಾನಿ ಮೋದಿ ಅಲೆ ಜೋರಾಗಿದೆ. ನಿಪ್ಪಾಣಿ ಶಾಶಕಿ ಹಾಗೂ ಪತ್ನಿ ಶಶಿಕಲಾ ಜೊಲ್ಲೆ, ಅಣ್ಣಾಜೊಲ್ಲೆಗೆ ಬಲವಾಗಿದ್ದರು. ಪಕ್ಷದಲ್ಲಿನ ಕತ್ತಿ ಸಹೋದರರ ವಿರೋಧಿಗಳ ಒಗ್ಗಟ್ಟು ಹಾಗೂ ಕಾಂಗ್ರೆಸ್‍ನ ಕೆಲ ಮುಖಂಡರ ಅಸಮಧಾನದಿಂದ ಅಣ್ಣಾಸಾಹೇಬ್ ಗೆಲುವು ಕಂಡಿದ್ದಾರೆ.
ಪ್ರಕಾಶ್ ಹುಕ್ಕೇರಿ ಸೋತಿದ್ದು ಯಾಕೆ?
ತಮ್ಮ ಮಗನ ಕ್ಷೇತ್ರದಲ್ಲಿ ಮಾತ್ರ ಅಭಿವೃದ್ಧಿ ದೃಷ್ಟಿ ಇಟ್ಟಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ರಾಜಕಾರಣದಲ್ಲಿ ಮುತ್ಸದಿಯಾದರೂ ಸಹ ಕ್ಷೇತ್ರ ಬಿಟ್ಟು ಇನ್ನು ಹೊರಬಂದಿರಲಿಲ್ಲ. ಚಿಕ್ಕೋಡಿಯಲ್ಲಿ ಇನ್ನೂ ಅಧಿಕೃತವಾಗಿ ಸಂಸದರ ಕಚೇರಿಯನ್ನು ಮಾಡಿಕೊಂಡಿಲ್ಲ. ಪ್ರಕಾಶ್ ಚಿಕ್ಕೋಡಿ ಬಿಟ್ಟು ಬೇರೆ ಮತಕ್ಷೇತ್ರಗಳತ್ತ ಗಮನ ಹರಿಸಿಲ್ಲ ಎಂಬ ಆರೋಪ ಕೇಳಿ ಬಂದಿತ್ತು.
ಚಿಕ್ಕೋಡಿ ಲೋಕಸಭಾ ಅಭ್ಯರ್ಥಿಗಳ ಪರ ಕಾಂಗ್ರೆಸ್‍ನಿಂದ ರಾಹುಲ್ ಗಾಂಧಿ ಚಿಕ್ಕೋಡಿಗೆ ಬಂದು ಪ್ರಚಾರ ಮಾಡಿದ್ದರೆ, ಬಿಜೆಪಿ ಅಭ್ಯರ್ಥಿ ಅಣ್ಣಾಸಾಹೇಬ ಜೊಲ್ಲೆ ಪರ ಪ್ರಧಾನಿ ಮೋದಿ ಚಿಕ್ಕೋಡಿಗೆ ಬಂದು ಪ್ರಚಾರ ಮಾಡಿದ್ದರು.