ಕೊಟ್ಟ ಮಾತಿನಂತೆ ರಸ್ತೆಗಳ ಅಭಿವೃದ್ಧಿಗೆ ಕ್ರಮ ಕೈಗೊಂಡ ಅಣ್ಣಾಸಾಹೇಬ ಜೊಲ್ಲೆ

Public TV
1 Min Read
annasaheb jolle 3

ಚಿಕ್ಕೋಡಿ: ಕೊಟ್ಟ ಮಾತಿನಂತೆ ಗ್ರಾಮೀಣ ಭಾಗದ ರಸ್ತೆಗಳ ಅಭಿವೃದ್ಧಿಗೆ ಚಿಕ್ಕೋಡಿ ಲೋಕಸಭೆ ಸಂಸದ ಅಣ್ಣಾಸಾಹೇಬ ಜೊಲ್ಲೆಯವರು ಒತ್ತು ನೀಡಿದ್ದಾರೆ.

ಲೋಕಸಭಾ ವ್ಯಾಪ್ತಿಯ ಶಮನೇವಾಡಿ ಗ್ರಾಮದಲ್ಲಿ ಲೋಕೋಪಯೋಗಿ ಇಲಾಖೆ ವತಿಯಿಂದ ಮಂಜೂರಾದ ಸುಮಾರು 80 ಲಕ್ಷ ರೂ. ಮೊತ್ತದಲ್ಲಿ ಚಿಕ್ಕೋಡಿ-ಇಂಚಲಕರಂಜಿ ರಸ್ತೆಯಿಂದ ಶಮನೇವಾಡಿ ಗ್ರಾಮದವರೆಗೆ 1.5 ಕಿ.ಮೀ. ರಸ್ತೆ ಅಗಲೀಕರಣ ಮತ್ತು ಸುಧಾರಣಾ ಕಾಮಗಾರಿಗಳಿಗೆ ಅಣ್ಣಾಸಾಹೇಬ ಜೊಲ್ಲೆಯವರು ಭೂಮಿ ಪೂಜೆ ನೆರವೇರಿಸಿ ಚಾಲನೆ ನೀಡಿದರು.

annasaheb jolle 2

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಈ ಭಾಗದ ಜನರ ಮನವಿಗೆ ಸ್ಪಂದಿಸಿ ಹಾಗೂ ಪ್ರಯಾಣಿಕರ ಹಿತದೃಷ್ಟಿಯಿಂದ ರಸ್ತೆಗಳನ್ನು ಅಭಿವೃದ್ಧಿ ಮಾಡುತ್ತಿದ್ದೇವೆ. ಇದೇ ರೀತಿ ಮುಂದಿನ ದಿನಗಳಲ್ಲಿ ಕ್ಷೇತ್ರದ ಮತ್ತಷ್ಟು ರಸ್ತೆಗಳಲ್ಲಿ ಪ್ರಗತಿ ಕಾರ್ಯ ಮಾಡಿ, ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸಲಾಗುವುದು ಎಂದು ಹೇಳಿದರು. ಇದನ್ನೂ ಓದಿ: ಡಿ.ಕೆ.ಶಿವಕುಮಾರ್ ವಸಿಷ್ಠರೂ ಅಲ್ಲ, ವಿಶ್ವಾಮಿತ್ರನೂ ಅಲ್ಲ: ಸಿ.ಟಿ.ರವಿ

annasaheb jolle 1

ಈ ವೇಳೆ ಹಾಲಸಿದ್ದನಾಥ ಸಕ್ಕರೆ ಕಾರ್ಖಾನೆಯ ನಿರ್ದೇಶಕರಾದ ಜಯಕುಮಾರ ಖೋತ, ಅಣ್ಣಾಸಾಹೇಬ ಭೆಂಡವಾಡೆ, ಜಯಕುಮಾರ ಹೆರಗೆ, ಜಿತೇಂದ್ರ ಖೋತ, ಪಿಂಟು ಖೋತ, ರವಿ ಸಾವಜಿ, ಭರತ ಖೋತ, ಅಭಿಷೇಕ ಖೋತ, ಮಂಜು ಕಾಂಬಳೆ, ಸಂಜನಾ ಕಾಂಬಳೆ, ಶ್ರೀ ಮಹಾವೀರ ಪೂಜಾರಿ, ಮಾಳಪ್ಪ ಗಾವಡೆ, ಅಣ್ಣಾಸಾಬ ತಾರದಾಳೆ, ಪಕ್ಷದ ಕಾರ್ಯಕರ್ತರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು. ಇದನ್ನೂ ಓದಿ: 8 ಲಕ್ಷಕ್ಕೆ ಹೆಣ್ಣು ಮಕ್ಕಳನ್ನು ಮಾರಾಟ ಮಾಡಿದ ತಂದೆ ಅರೆಸ್ಟ್

Share This Article
Leave a Comment

Leave a Reply

Your email address will not be published. Required fields are marked *