ಬೆಂಗಳೂರು: ವ್ಯಾಪಕ ಆಕ್ರೋಶದ ಬಳಿಕ ಅನ್ನಪೂರ್ಣೇಶ್ವರಿ ನಗರ ಠಾಣೆ ರಸ್ತೆ (Annapoorneshwari nagar police station) ಸಾರ್ವಜನಿಕರಿಗೆ ಮುಕ್ತವಾಗಿದೆ.
ಕೊಲೆ ಪ್ರಕರಣದಲ್ಲಿ ದರ್ಶನ್ ಬಂಧನದ ಬಳಿಕ ರಸ್ತೆಯನ್ನು ಬಂದ್ ಮಾಡಲಾಗಿತ್ತು. ನಿಷೇಧಾಜ್ಞೆ ಹೇರಿ ರಸ್ತೆ ಬಂದ್ ಮಾಡಿದ್ದ ಪೊಲೀಸರ ನಡೆಗೆ ಭಾರೀ ಆಕ್ರೋಶ ವ್ಯಕ್ತವಾಯಿತು. ಈ ಬೆನ್ನಲ್ಲೇ ಇದೀಗ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ.
ಒಂದೆಡೆ ಸಾರ್ವಜನಿಕರ ದೂರುಗಳನ್ನು ಪೊಲೀಸರು ಸ್ವೀಕರಿಸುತ್ತಿರಲಿಲ್ಲ. ಇನ್ನೊಂದೆಡೆ 200 ಮೀಟರ್ ನಿಷೇಧಾಜ್ಞೆ ಹೇರಿದ್ದರಿಂದ ಸಾರ್ವಜನಿಕರು ತೊಂದರೆ ಅನುಭವಿಸಬೇಕಾಯಿತು. ರಾತ್ರಿಯಂತೂ ವಾಹನ ಸವಾರರು ಪರದಾಡಿದ್ದರು. ಪೊಲೀಸ್ ಠಾಣೆಯ ರಸ್ತೆಗೆ ಬ್ಯಾರಿಕೇಡ್ ಅಳವಡಿಸಿದ್ದರಿಂದ ಕೆಲಸ ಮುಗಿಸಿ ಮನೆಗೆ ವಾಪಸ್ ಆಗುತ್ತಿರುವ ಸಾರ್ವಜನಿಕರು ಪೊಲೀಸರ ವಿರುದ್ಧ ರೊಚ್ಚಿಗೆದ್ದಿದ್ದರು.
ಪೊಲೀಸರ ಈ ನಡೆಗೆ ವಾಹನ ಸವಾರರ ಆಕ್ರೋಶ ಭುಗಿಲೆದ್ದಿದ್ದು, ಯಾರೋ ಒಬ್ಬರಿಗೊಸ್ಕರ ರೋಡ್ ಕ್ಲೋಸ್ ಮಾಡೋದು ಸರಿ ಅಲ್ಲ. ಇದು ಪೆÇಲೀಸ್ ಸ್ಟೇಷನಾ..? ಇಲ್ಲ ಮದುವೆ ಮನೆನಾ..?. ಪಕ್ಕದಲ್ಲಿ ಕಂದಾಯ ಭವನ ಇದೆ.. ಅಲ್ಲಿ ಮದುವೆ ಆಗುತ್ತೆ. ಠಾನೆಯಲ್ಲಿ ಪೆಂಡಾಲ್ ಹಾಕಿದ್ದಾರೆ. ಇಲ್ಲಿ ಬಹುಶಃ ಬಿಗರೂಟ ಅನ್ಸತ್ತೆ ಎಂದು ಸಾರ್ವಜನಿಕರು ಕಿಡಿಕಾರಿದ್ದರು. ಇದನ್ನೂಓದಿ: ದರ್ಶನ್ ಇರೋ ಪೊಲೀಸ್ ಠಾಣೆ ಬಳಿ 144 ಸೆಕ್ಷನ್- ವಾಹನ ಸವಾರರ ಪರದಾಟ