ಬೆಂಗಳೂರು: ಅನ್ನಭಾಗ್ಯ ಯೋಜನೆಯ (Anna Bhagya Scheme) ಹಣ ಜುಲೈ 1ರಂದೇ ಕೊಡ್ತೀವಿ ಅಂತಾ ಹೇಳಿಲ್ಲ. ಈ ತಿಂಗಳು 10ರ ನಂತರ ಕೊಡಲು ಪ್ರಾರಂಭ ಮಾಡುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ (Siddaramaiah) ಸ್ಪಷ್ಟಪಡಿಸಿದ್ದಾರೆ.
ಬೆಂಗಳೂರಿನಲ್ಲಿ (Bengaluru) ತಮ್ಮ ಸರ್ಕಾರಿ ನಿವಾಸದ ಬಳಿ ಸಿಎಂ ಸಿದ್ದರಾಮಯ್ಯ ಮಾಧ್ಯಮಗಳ ಪ್ರಶ್ನೆಗಳಿಗೆ ಉತ್ತರಿಸಿ, ಜುಲೈ ತಿಂಗಳ ಅಕ್ಕಿ ಬದಲಿಗೆ ದುಡ್ಡನ್ನು ಜುಲೈ 1ರಂದೇ ಕೊಡುತ್ತೇವೆ ಎಂದು ಹೇಳಿಲ್ಲ. ಈ ತಿಂಗಳ ಹಣವನ್ನು ಈ ತಿಂಗಳಲ್ಲಿಯೇ ನೀಡಲಾಗುವುದು. ಜುಲೈ 10ರ ನಂತರ ಹಣ ಹಾಕುವ ಪ್ರಕ್ರಿಯೆ ಆರಂಭವಾಗಲಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಅರ್ಜಿ ಹಾಕದಿದ್ರೆ ವಿದ್ಯುತ್ ಉಚಿತ ಇಲ್ಲ – ಸಚಿವ ಕೆ.ಜೆ.ಜಾರ್ಜ್
ಇನ್ನೂ ಗೃಹಜ್ಯೋತಿ (Gruhajyothi Scheme) ಯೋಜನೆಯ ಕುರಿತು ಮಾತಾಡಿದ ಸಿಎಂ, ಗೃಹಜ್ಯೋತಿ ಯೋಜನೆಯಲ್ಲಿ ವಿದ್ಯುತ್ ಬಿಲ್ ಆಗಸ್ಟ್ ತಿಂಗಳಲ್ಲಿ ನೀಡಲಾಗುವುದು. ಗೃಹಜ್ಯೋತಿ ಇಂದಿನಿಂದ ಪ್ರಾರಂಭವಾಗುತ್ತಿದೆ, ಈ ತಿಂಗಳು ಉಚಿತವಾಗಿ ನೀಡಲಾಗುವುದು ಎಂದು ಹೇಳಿದ್ದಾರೆ. ಇದನ್ನೂ ಓದಿ: ಜಿಹಾದಿ ಮನಸ್ಥಿತಿಗಳು ನಮ್ಮ ಮನೆಗೆ ಬಂದ್ರೆ, ಕೋವಿ ಹೊರಬರುತ್ತೆ ಎಂದಿದ್ದ VHP ಮುಖಂಡನ ವಿರುದ್ಧ ಕೇಸ್
ಬೆಂಗಳೂರಿನಲ್ಲಿ ವಿರೋಧ ಪಕ್ಷಗಳ ಸಭೆ ನಡೆಯುತ್ತಿರುವ ಬಗ್ಗೆ ಮಾತನಾಡಿ, ವಿರೋಧ ಪಕ್ಷ ಅವರ ಒಳಜಗಳವನ್ನು ಮೊದಲು ಸರಿಪಡಿಸಿಕೊಳ್ಳಲಿ ಎಂದು ಕುಟುಕಿದ್ದಾರೆ.
Web Stories