ನವದೆಹಲಿ: ಭಾರತದ ಆಹಾರ ನಿಗಮದ ಉಗ್ರಾಣಗಳಲ್ಲಿ ಸಾಕಷ್ಟು ಪ್ರಮಾಣ ಅಕ್ಕಿಯ ದಾಸ್ತಾನು ಇದೆ. ಯಥಿನಾಲ್ ಉತ್ಪಾದನೆಗೆ ಅಕ್ಕಿ ಪೂರೈಸುವ ಕೇಂದ್ರ ಸರ್ಕಾರ ಬಡವರಿಗೆ ತಿನ್ನಲು ನೀಡಲು ನಿರಾಕರಿಸುತ್ತಿದೆ. ಅನ್ನಭಾಗ್ಯ ಯೋಜನೆ ತಡೆಯಲು ದುರದ್ದೇಶಪೂರ್ವಕವಾಗಿಯೇ ಅಕ್ಕಿಯನ್ನು ನೀಡುತ್ತಿಲ್ಲ ಎಂದು ಕೇಂದ್ರ ಸರ್ಕಾರದ ವಿರುದ್ಧ ಸಚಿವ ಈಶ್ವರ್ ಖಂಡ್ರೆ (Eshwar Khandre) ವಾಗ್ದಾಳಿ ನಡೆಸಿದ್ದಾರೆ.
ನವದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ (Congress Government) ದ ಮಹತ್ವಾಕಾಂಕ್ಷಿ ಯೋಜನೆ ತಡೆಯಲು ಕೇಂದ್ರ ಸರ್ಕಾರ (Central Government) ದಿಂದ ಪ್ರಯತ್ನ ನಡೆಯುತ್ತಿದೆ. ಕೇಂದ್ರ ಏನೇ ಪ್ರಯತ್ನ ಮಾಡಿದರೂ ಆದರೆ ನಾವು ಯೋಜನೆ ಜಾರಿ ಮಾಡುತ್ತೇವೆ. ಬೇರೆ ರಾಜ್ಯಗಳಿಂದ ಅಕ್ಕಿ ತಂದು ಜನರಿಗೆ ನೀಡುತ್ತೇವೆ ಎಂದರು. ಇದನ್ನೂ ಓದಿ: ಇದೊಂದು ಸುಳ್ಳ, ಮಳ್ಳ ಸರ್ಕಾರ – ತಾಕತ್ತಿದ್ದರೆ ಅಕ್ಕಿ ಕೊಡಿ; ಬೊಮ್ಮಾಯಿ ಕಿಡಿ
Advertisement
Advertisement
ಭಾರತೀಯ ಆಹಾರ ನಿಗಮ ನಿಯಮ ಬದಲಾಯಿಸಿದೆ ಎಂದು ಸಬೂಬು ಹೇಳುತ್ತಿದೆ. ಈ ನಿಯಮ ಬದಲಾಗಿದ್ದು ಯಾವಾಗ? ಕರ್ನಾಟಕ ಸರ್ಕಾರ ಅಕ್ಕಿಗಾಗಿ ಮನವಿ ಮಾಡಿದ ಬಳಿಕ ನಿಯಮ ಬದಲಾಗಿದೆ. ಇದರ ಹಿಂದಿನ ಉದ್ದೇಶ ಏನು? ಯಥಿನಾಲ್ ಉತ್ಪಾದನೆಗೆ ಅಕ್ಕಿ ಪೂರೈಸುವ ಮೋದಿ ಸರ್ಕಾರ ಬಡವರಿಗೆ ನೀಡಲು ಅಕ್ಕಿ ಯಾಕೆ ಕೊಡುವುದಿಲ್ಲ ಎಂದು ಪ್ರಶ್ನಿಸಿದರು.
Advertisement
ಕೇಂದ್ರ ಸರ್ಕಾರದ ದುರುದ್ದೇಶದ ನಡೆ ಸ್ಪಷ್ಟವಾಗಿದೆ. ನಾವು ಪಂಜಾಬ್, ತೆಲಂಗಾಣ, ಛತ್ತೀಸ್‍ಗಢ ಸೇರಿ ಬೇರೆ ಬೇರೆ ರಾಜ್ಯಗಳಲ್ಲಿ ಅಕ್ಕಿ ಖರೀದಿಗೆ ಪ್ರಯತ್ನ ನಡೆಯುತ್ತಿದೆ. ಬೆಲೆ ಹೆಚ್ಚಾದರೂ ಯಾವುದಾದರೂ ಒಂದು ರಾಜ್ಯದಿಂದ ಅಕ್ಕಿ ತಂದು ಹಂಚಲಿದ್ದೇವೆ. ಇದರಲ್ಲಿ ಯಾವುದೇ ಅನುಮಾನ ಬೇಡ ಎಂದು ಸ್ಪಷ್ಟಪಡಿಸಿದ್ದಾರೆ.