ನವದೆಹಲಿ: ಈ ವರ್ಷ ಜುಲೈನಲ್ಲಿ ತನ್ನ ಫೇಸ್‌ಬುಕ್ ಗೆಳೆಯ ನಸ್ರುಲ್ಲಾನನ್ನು (Nasrullah) ಮದುವೆಯಾಗಲು ಪಾಕಿಸ್ತಾನಕ್ಕೆ (Pakistan) ಹೋಗಿದ್ದ ಮಹಿಳೆ ಅಂಜು (Anju) ಇತ್ತೀಚೆಗೆ ವಾಘಾ ಗಡಿ ಮೂಲಕ ಭಾರತಕ್ಕೆ (India) ಮರಳಿದ್ದಾಳೆ.
ಫಾತಿಮಾ (Fatima) ಎಂದು ಹೆಸರನ್ನು ಬದಲಿಸಿಕೊಂಡಿರುವ ಅಂಜು (34) ಜುಲೈನಲ್ಲಿ ಪಾಕಿಸ್ತಾನಕ್ಕೆ ತೆರಳಿ ಖೈಬರ್ ಪಖ್ತುಂಕ್ವಾದಲ್ಲಿ ವಾಸವಾಗಿದ್ದಳು. ಆಕೆ ಪಾಕಿಸ್ತಾನದಲ್ಲಿ ತನ್ನ ಫೇಸ್‌ಬುಕ್ ಗೆಳೆಯ ನಸ್ರುಲ್ಲಾನನ್ನು ಮದುವೆಯಾದ ಬಳಿಕ ಇಸ್ಲಾಂಗೆ ಮತಾಂತರವಾಗಿರುವುದಾಗಿ ಪಾಕಿಸ್ತಾನದ ಮಾಧ್ಯಮಗಳು ವರದಿ ಮಾಡಿವೆ.
Advertisement
Advertisement
ಪಾಕಿಸ್ತಾನಕ್ಕೆ ತೆರಳಿದ್ದಾಗ ಅಂಜು ಆರಂಭದಲ್ಲಿ ತನ್ನ ಗೆಳೆಯನನ್ನು ಭೇಟಿಯಾಗಲು ಹಾಗೂ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಲು ಹೋಗುವುದಾಗಿ ತಿಳಿಸಿದ್ದಳು. ಈ ವೇಳೆ ನಸ್ರುಲ್ಲಾನನ್ನು ಮದುವೆಯಾಗುವ ಯಾವುದೇ ಯೋಜನೆ ಇಲ್ಲ, ತನ್ನ ವೀಸಾ ಅವಧಿ ಮುಗಿದ ಬಳಿಕ ಆಗಸ್ಟ್ 20ಕ್ಕೆ ಭಾರತಕ್ಕೆ ಮರಳುವುದಾಗಿ ಹೇಳಿದ್ದಳು.
Advertisement
ಈ ಹೇಳಿಕೆ ನೀಡಿದ ಒಂದು ದಿನದ ಬಳಿಕ ಅಂಜು ನಸ್ರುಲ್ಲಾನನ್ನು ವಿವಾಹವಾದಳು ಹಾಗೂ ತನ್ನ ಹೆಸರನ್ನು ಫಾತಿಮಾ ಎಂದು ಬದಲಿಸಿಕೊಂಡಳು. ಆಗಸ್ಟ್‌ನಲ್ಲಿ ಪಾಕಿಸ್ತಾನ ಆಕೆಯ ವೀಸಾವನ್ನು 1 ವರ್ಷಕ್ಕೆ ವಿಸ್ತರಿಸಿತು. ನಂತರ ಸೆಪ್ಟೆಂಬರ್‌ನಲ್ಲಿ ನಸ್ರುಲ್ಲಾ ತನ್ನ ಪತ್ನಿ ಮಾನಸಿಕ ಖಿನ್ನತೆಗೆ ಒಳಗಾಗಿದ್ದಾಳೆ, ತನ್ನ ಮಕ್ಕಳನ್ನು ನೋಡಲು ಬಯಸಿದ್ದಾಳೆ ಎಂದು ಹೇಳಿಕೊಂಡಿದ್ದರು. ಇದೀಗ ಅಂಜು ಭಾರತಕ್ಕೆ ಮರಳಿದ್ದಾಳೆ. ಇದನ್ನೂ ಓದಿ: ಗ್ಯಾಸ್ ಸೋರಿಕೆಯಾಗಿ ಸಿಲಿಂಡರ್ ಬ್ಲಾಸ್ಟ್ – ಯುವಕ ಗಂಭೀರ
Advertisement
ಅಂಜು ರಾಜಸ್ಥಾನದ ಭಿವಾಡಿ ಜಿಲ್ಲೆಯ ವಿವಾಹಿತ ಮಹಿಳೆಯಾಗಿದ್ದು, ಫೇಸ್‌ಬುಕ್‌ನಲ್ಲಿ ಪರಿಚಯ ಮಾಡಿಕೊಂಡು, ಪ್ರೀತಿಸುತ್ತಿದ್ದ ಪಾಕಿಸ್ತಾನದ ವ್ಯಕ್ತಿಯನ್ನು ಭೇಟಿಯಾಗಲು ಖೈಬರ್ ಪಖ್ತುಂಕ್ವಾಗೆ ತೆರಳಿದ್ದಳು. ಕೆಲ ದಿನ ಜೈಪುರಕ್ಕೆ ಹೋಗುವುದಾಗಿ ಆಕೆ ತನ್ನ ಮೊದಲ ಪತಿ ಅರವಿಂದ್‌ಗೆ ಹೇಳಿದ್ದಳು. ಆದರೆ ಅಂಜು ಗಡಿ ದಾಟಿ ಪಾಕಿಸ್ತಾನಕ್ಕೆ ಹೋಗಿರುವುದು ಆಕೆಯ ಪತಿಗೆ ಮಾಧ್ಯಮಗಳ ಮೂಲಕ ತಿಳಿದುಬಂದಿದೆ.
ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ್ದ ಅರವಿಂದ್, ನನ್ನ ಪತ್ನಿ ವಾಟ್ಸಪ್‌ನಲ್ಲಿ ನನ್ನೊಂದಿಗೆ ಸಂಪರ್ಕದಲ್ಲಿದ್ದಾಳೆ. ಆಕೆ ಲಾಹೋರ್‌ಗೆ ತೆರಳಿದ ದಿನ ಸಂಜೆ 4 ಗಂಟೆ ಸುಮಾರಿಗೆ ಕರೆ ಮಾಡಿದ್ದು, ತಾನು ಲಾಹೋರ್‌ನಲ್ಲಿದ್ದೇನೆ ಮತ್ತು 2-3 ದಿನಗಳಲ್ಲಿ ಮರಳುತ್ತೇನೆಂದು ಹೇಳಿದ್ದಾಗಿ ತಿಳಿಸಿದ್ದರು.
ಪಾಕಿಸ್ತಾನದಲ್ಲಿ ಅಂಜು ತನ್ನ ಗೆಳೆಯನನ್ನು ಭೇಟಿಯಾಗಲು ಹೋಗಿರುವ ಬಗ್ಗೆ ಕೇಳಿದಾಗ, ಅವರಿಬ್ಬರ ಸಂಬಂಧದ ಬಗ್ಗೆ ನನಗೆ ಮೊದಲೇ ತಿಳಿದಿತ್ತು. ಆಕೆ ಮುಂದೊಂದು ದಿನ ನನ್ನ ಬಳಿಗೆ ಬರುತ್ತಾಳೆ ಎಂಬ ಭರವಸೆ ವ್ಯಕ್ತಪಡಿಸಿದ್ದರು.
ಅಂಜು ಈ ಹಿಂದೆ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡು ಅರವಿಂದ್ ಅವರನ್ನು ಮದುವೆಯಾಗಿದ್ದಳು. ದಂಪತಿಗೆ ಇಬ್ಬರು ಮಕ್ಕಳು ಇದ್ದಾರೆ. ಇದನ್ನೂ ಓದಿ: ಹಾಸನದಿಂದ ಜೀರೋ ಟ್ರಾಫಿಕ್‌ನಲ್ಲಿ ಬಂದ್ರೂ ಅರ್ಧ ಗಂಟೆ ಚಿಕಿತ್ಸೆಗೆ ವಿಳಂಬ – ನಿಮಾನ್ಸ್‌ನಲ್ಲಿ ಕಂದಮ್ಮ ಸಾವು