ನವದೆಹಲಿ: ಹೊಸ ವರ್ಷದಂದು ದೆಹಲಿಯ (Delhi) ಸುಲ್ತಾನ್‌ಪುರಿಯಲ್ಲಿ (Sultanpuri) 20ರ ಯುವತಿಯ ಭೀಕರ ಅಪಘಾತಕ್ಕೆ (Accident) ದೇಶಾದ್ಯಂತ ಜನರು ಆಘಾತ ವ್ಯಕ್ತಪಡಿಸಿದ್ದಾರೆ. ಪೊಲೀಸರು ನಡೆಸುತ್ತಿರುವ ತನಿಖೆಯಲ್ಲಿ ಪ್ರತಿದಿನ ಇನ್ನಷ್ಟು ಆಘಾತಕಾರಿ ವಿವರಗಳು ಹೊರಹೊಮ್ಮುತ್ತಲೇ ಇವೆ. ಈ ನಡುವೆ ಶವಪರೀಕ್ಷೆಯಲ್ಲಿ (Autopsy) ಆಕೆಗಾಗಿರುವ ಕ್ರೂರ ಗಾಯಗಳ ವಿವರ ಬಹಿರಂಗವಾಗಿದೆ.
ಜನವರಿ 1 ರಂದು ಮಧ್ಯರಾತ್ರಿ ಅಂಜಲಿ ಸಿಂಗ್‌ನ ಸ್ಕೂಟರ್‌ಗೆ ಕಾರು ಡಿಕ್ಕಿ ಹೊಡೆದ ಬಳಿಕ ಅಪಘಾತದ ಭೀಕರತೆ ಘಟಿಸಿ ಹೋಗಿದೆ. ಆಕೆಯ ಕಾಲು ಕಾರಿನ ಆಕ್ಸಲ್‌ಗೆ ಸಿಲುಕಿದ್ದರಿಂದ ಆಕೆ ಕಾರಿನ ಅಡಿಯಲ್ಲಿ ಸುಮಾರು 13 ಕಿ.ಮೀ ಎಳೆಯಲ್ಪಟ್ಟಿದ್ದಳು. ಇದರಿಂದ ಅಂಜಲಿ ಭೀಕರವಾಗಿ ಸಾವನ್ನಪ್ಪಿದ್ದಳು.
ಘಟನೆಯ ಬಳಿಕ ಅಂಜಲಿ ದೇಹ ಕಂಝವಾಲಾ ಪ್ರದೇಶದ ರಸ್ತೆ ಬದಿಯಲ್ಲಿ ಬೆತ್ತಲಾದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಇದರಿಂದ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಅನುಮಾನ ಹುಟ್ಟಿದ್ದರಿಂದ ಸೋಮವಾರ ಆಕೆಯ ಮರಣೋತ್ತರ ಪರೀಕ್ಷೆ ನಡೆಸಲಾಗಿತ್ತು. ಆದರೆ ಆಕೆಯ ದೇಹದಲ್ಲಿ ಲೈಂಗಿಕ ದೌರ್ಜನ್ಯವನ್ನು ಸೂಚಿಸುವ ಯಾವುದೇ ಗಾಯಗಳು ಕಂಡುಬಂದಿರಲಿಲ್ಲ. ಇದನ್ನೂ ಓದಿ: Delhi Hit-And-Run ಕುಡಿದು ಸ್ಕೂಟಿ ಚಲಾಯಿಸಿದ್ದಳು: ಅಂಜಲಿ ಸ್ನೇಹಿತೆ ಸ್ಫೋಟಕ ಹೇಳಿಕೆ
13 ಕಿ.ಮೀ ಅಂಜಲಿ ದೇಹವನ್ನು ರಸ್ತೆಯಲ್ಲಿ ಎಳೆದಿದ್ದರಿಂದ ಆಕೆಯ ದೇಹದಲ್ಲಿ ಕನಿಷ್ಠ 40 ಬಾಹ್ಯ ಗಾಯಗಳಾಗಿದ್ದವು. ಆಕೆಯ ದೇಹದ ಚರ್ಮ ಸುಲಿದಿದ್ದರಿಂದ ಬೆನ್ನಿನ ಪಕ್ಕೆಲುಬುಗಳು ಹೊರಬೀಳುವಷ್ಟು ತೀವ್ರತೆಯ ಗಾಯಗಳಾಗಿದ್ದವು. ಆಕೆಯ ತಲೆಬುರುಡೆಯ ಬುಡ ಮುರಿತವಾಗಿತ್ತು. ಮೆದುಳಿನ ಕೆಲ ಭಾಗಗಳೂ ಕಾಣೆಯಾಗಿತ್ತು ಎಂದು ಮೂಲಗಳು ತಿಳಿಸಿವೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರಿನಲ್ಲಿದ್ದ ಐವರು ಆರೋಪಿಗಳ ವಿರುದ್ಧ ನರಹತ್ಯೆ ಅಡಿ ಪ್ರಕರಣ ದಾಖಲಾಗಿದೆ. ಅವರನ್ನು ಸೋಮವಾರ 3 ದಿನಗಳ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ. ಇದನ್ನೂ ಓದಿ: ಆತ್ಮಹತ್ಯೆ ಮಾಡಿಕೊಂಡ ತುನಿಷಾ ಶರ್ಮಾ ಬಾಯ್ ಫ್ರೆಂಡ್ ಉದ್ದನೆಯ ಕೂದಲಿಗೆ ಕತ್ತರಿ