ಬೆಳಗಾವಿ: ಮಳೆಯಿಂದ ಸೇತುವೆ ಹಾನಿಗೊಳಗಾಗಿತ್ತು. ಆದರೂ ಕಿರಿದಾದ ಸೇತುವೆಯ ಮೇಲೆ ಚಾಲಕರು ಲಾರಿ ಚಲಾಯಿಸುತ್ತಿದ್ದರು. ಇದನ್ನು ನೋಡಿದ ಶಾಸಕಿ ಅಂಜಲಿ ನಿಂಬಾಳ್ಕರ್ ಅವರು ಲಾರಿ ಚಾಲಕನನ್ನು ತರಾಟೆ ತೆಗೆದುಕೊಂಡಿದ್ದಾರೆ.
ಖಾನಾಪುರ ಪಟ್ಟಣದಲ್ಲಿ ಶಾಸಕಿ ಅಂಜಲಿ ನಿಂಬಾಳ್ಕರ್ ಅವರು ಲಾರಿ ಚಾಲಕನಿಗೆ ಬೈದು ವಾಪಸ್ ಕಳುಹಿಸಿದ್ದಾರೆ. ಇಷ್ಟು ದೊಡ್ಡ ಗಾಡಿ ಕಿರಿದಾದ ಸೇತುವೆ ಮೇಲೆ ಬಂದರೆ ಸಣ್ಣ ವಾಹನಗಳು ಹೇಗೆ ಓಡಾಡುತ್ತವೆ. ನೀನು ಒಂದು ದಿನ ಅರ್ಧ ಗಂಟೆ ಬಂದು ಹೋಗುತ್ತೀಯಾ, ನಂತರ ಇಲ್ಲಿನ ಹಾಗೂ ಸುತ್ತಮುತ್ತಲಿನ ಜನರು ತೊಂದರೆ ಅನುಭವಿಸಬೇಕಾಗುತ್ತದೆ ಎಂದು ಆಕ್ರೋಶದಿಂದ ಹೇಳಿದರು. ಇದನ್ನೂ ಓದಿ: ಪಾಸ್ ಇರೋ ವಿದ್ಯಾರ್ಥಿಗಳನ್ನು ಹತ್ತಿಸದ್ದಕ್ಕೆ ಬಸ್ ಚೇಸ್ ಮಾಡಿ ಸಿಬ್ಬಂದಿಗೆ ಅಂಜಲಿ ನಿಂಬಾಳ್ಕರ್ ಕ್ಲಾಸ್!
Advertisement
Advertisement
ಈಗ ಯೂಟರ್ನ್ ತೆಗೆದುಕೊಂಡು ಖಾನಾಪುರದ ಮೇಲೆ ಬೆಳಗಾವಿಗೆ ಹೋಗು. ನನ್ನ ಎದರುಗಡೆಯೇ ಯೂಟರ್ನ್ ತೆಗೆದುಕೊಂಡು ಹೋಗು, ಇಲ್ಲದಿದ್ದರೆ ಲಾರಿಯ ಚಕ್ರದಲ್ಲಿರುವ ಗಾಳಿಯನ್ನು ತೆಗೆಯುತ್ತೇನೆ. ಮಹಾರಾಷ್ಟ್ರ-ರಾಜಸ್ಥಾನದಿಂದ ಬರುತ್ತೀರಾ, ಇಷ್ಟು ಭಾರವಾದ ವಾಹನ ಓಡಾಡಿದರೆ ಸೇತುವೆ ಹಾಳಾಗುತ್ತದೆ ಎಂದು ಚಾಲಕನಿಗೆ ಹಿಗ್ಗಾಮುಗ್ಗಾ ಬೈದಿದ್ದಾರೆ.
Advertisement
ಖಾನಾಪುರ ಮತ್ತು ಪಣಜಿ ಸಂಪರ್ಕ ಇರುವ ಸೇತುವೆ ಇದಾಗಿದ್ದು, ಅತಿಯಾದ ಮಳೆಯ ಹಿನ್ನೆಲೆಯಲ್ಲಿ ಸೇತುವೆಯ ಮೇಲೆ ಭಾರವಾದ ವಾಹನ ಚಲಾಯಿಸಬಾರದು ಎಂದು ಸೂಚನೆ ನೀಡಲಾಗಿತ್ತು. ಸೂಚನೆ ನೀಡಿದ್ದರೂ ಚಾಲಕರು ಲಾರಿ ಚಲಾಯಿಸುತ್ತಿದ್ದರು. ಇದರಿಂದ ಶಾಸಕಿ ಲಾರಿ ಚಾಲಕರನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ.