ಶಿವಾಜಿ ಮಹಾರಾಜರೇ ಹಿಂದವೀ ಸ್ವರಾಜ್ ಸ್ಥಾಪಿಸಿದ್ದಾರೆ – ಈಗ ಏನ್ ಬಿಜೆಪಿಯ ಹೊಸ ವರಸೆ: ಅಂಜಲಿ ನಿಂಬಾಳ್ಕರ್

Public TV
1 Min Read
ANJALI NIMBALKAR

ಬೆಳಗಾವಿ: ಹಿಂದೂ ಧರ್ಮವನ್ನು ಯಾರಿಂದಲೂ ಟಚ್ ಮಾಡಲು ಸಾಧ್ಯವಾಗಿಲ್ಲ. ಅಂದು ಹಿಂದೂ ಧರ್ಮ ಇತ್ತು, ಇಂದು ಸಹ ಹಾಗೇ ಇದೆ. ಶಿವಾಜಿ ಮಹಾರಾಜರು ಹಿಂದವೀ ಸ್ವರಾಜ್ ಸ್ಥಾಪನೆ ಮಾಡಿದ್ದಾರೆ. ಬಿಜೆಪಿಯವರು ಈಗ ಏನ್ ಹೊಸ ಹಿಂದೂ ರಾಷ್ಟ್ರ ಮಾಡಲು ಹೊರಟ್ಟಿದ್ದಾರೆ ಎಂದು ಖಾನಾಪೂರ ಶಾಸಕಿ ಅಂಜಲಿ ನಿಂಬಾಳ್ಕರ್ ಪ್ರಶ್ನಿಸಿದ್ದಾರೆ.

BJP FLAG

ಬೆಳಗಾವಿಯಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ದೇಶದ ಮೇಲೆ ಮೊಘಲರು, ಬ್ರಿಟಿಷರು ದಾಳಿ ಮಾಡಿದ್ದಾರೆ. ಆದರೂ ಹಿಂದೂ ಧರ್ಮವನ್ನು ಯಾರಿಂದಲೂ ಟಚ್ ಮಾಡಲು ಸಾಧ್ಯವಾಗಿಲ್ಲ. ಹಿಂದೂ ಧರ್ಮದ ಮೇಲೆ ಯಾರಿಂದಲೂ ಆಕ್ರಮಣ ಮಾಡಲು ಆಗಲ್ಲ ಎಂದು ಆರ್‌ಎಸ್‌ಎಸ್‌ ವಿರುದ್ಧ ಕಿಡಿಕಾರಿದ್ದಾರೆ. ಇದನ್ನೂ ಓದಿ: ಪುಸ್ತಕದಿಂದ ತೆಗೆದರೂ ಭಾರತೀಯರ ಹೃದಯದಲ್ಲಿ ಟಿಪ್ಪು ಸದಾ ನೆಲೆಸಿರುತ್ತಾರೆ: ಹೆಚ್.ವಿಶ್ವನಾಥ್

rss

ಬಿಜೆಪಿ ಕೇವಲ ವೋಟ್ ಬ್ಯಾಂಕ್‍ಗಾಗಿ ಧರ್ಮ, ಜಾತಿ ಆಧಾರದ ಮೇಲೆ ರಾಜಕೀಯ ಮಾಡುತ್ತಿದೆ. ಶಿವಾಜಿ ಮಹಾರಾಜರು ಹಿಂದವೀ ಸ್ವರಾಜ್ ಸ್ಥಾಪನೆ ಮಾಡಿದ್ದಾರೆ. ಈಗ ಏನ್ ಹೊಸ ಹಿಂದು ರಾಷ್ಟ್ರ ಮಾಡಲು ಹೊರಟ್ಟಿದ್ದಾರೆ. ಆರ್‌ಎಸ್‌ಎಸ್‌ನ ಹಿಂದೂ ರಾಷ್ಟ್ರವನ್ನು ನಾವು ಒಪ್ಪಲ್ಲ. ಹಿಂದೂ ಧರ್ಮದ ಬಗ್ಗೆ ಆರ್‌ಎಸ್‌ಎಸ್‌ ಮೊದಲು ತಿಳಿದುಕೊಳ್ಳಬೇಕು. ಹಿಂದೂ ಧರ್ಮದಲ್ಲಿ ಬ್ರಾಹ್ಮಣ, ದಲಿತ, ಮುಸ್ಲಿಮರು ಎಲ್ಲರೂ ಇದ್ದಾರೆ. ಹಿಂದೂ ಧರ್ಮದ ಸಂಸ್ಕೃತಿ ಬಹಳ ದೊಡ್ಡದಿದೆ. ಅದನ್ನು ತಿಳಿದುಕೊಳ್ಳುವ ಕೆಲಸ ಮಾಡಬೇಕು ಎಂದು ಟಾಂಗ್ ನೀಡಿದ್ದಾರೆ. ಇದನ್ನೂ ಓದಿ: ಅಮಿತಾಭ್, ಅಕ್ಷಯ್ ಪ್ರತಿಕೃತಿ ದಹಿಸಿ ಬೆಲೆ ಏರಿಕೆಗೆ ಕಾಂಗ್ರೆಸ್ ಪ್ರತಿಭಟನೆ

Share This Article
Leave a Comment

Leave a Reply

Your email address will not be published. Required fields are marked *