ರಾಮನಗರ: ಸಿಎಂ ಕುಮಾರಸ್ವಾಮಿ ಸ್ವಕ್ಷೇತ್ರ ಚನ್ನಪಟ್ಟಣದ ಜೆಡಿಎಸ್ ಕಚೇರಿಯಲ್ಲಿ ಬುಧವಾರ ನಡೆದಿದ್ದ ಮಾರಾಮಾರಿಗೂ ಪಕ್ಷಕ್ಕೂ ಸಂಬಂಧ ಇಲ್ಲ ಎಂದು ರಾಮನಗರ ಶಾಸಕಿ ಅನಿತಾ ಕುಮಾರಸ್ವಾಮಿ ಸ್ಪಷ್ಟನೆ ನೀಡಿದ್ದಾರೆ.
ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪಕ್ಷದ ಕಚೇರಿಯಲ್ಲಿ ನಡೆದ ವಿಚಾರ ಮುಖಂಡರ ವೈಯಕ್ತಿಕ ಮನಸ್ತಾಪಕ್ಕೆ ಉಂಟಾದ ಗಲಾಟೆಯಾಗಿದೆ. ನನಗೂ ಈ ಘಟನೆಗೂ ಸಂಬಂಧ ಇಲ್ಲ. ಗಲಾಟೆ ವಿಷಯದ ಬಗ್ಗೆ ಪಕ್ಷದ ವರಿಷ್ಠರಾದ ದೇವೇಗೌಡರ ಗಮನಕ್ಕೆ ಬಂದಿದ್ದು, ಅವರೇ ಮುಖಂಡರನ್ನು ಕರೆಸಿ ಮಾತಾಡುತ್ತಾರೆ ಎಂದರು. ಇದನ್ನು ಓದಿ : ಜೆಡಿಎಸ್ ಮುಖಂಡರಲ್ಲಿ ಭಿನ್ನಮತ- ಚೇರ್‌ನಿಂದ ಹೊಡೆದಾಡಿಕೊಂಡ ಕಾರ್ಯಕರ್ತರು
Advertisement
Advertisement
ಹಾಲಿನ ಡೈರಿ ಎಲೆಕ್ಷನ್‍ನಲ್ಲಿ ಲಿಂಗೇಶ್‍ಕುಮಾರ್ ಮತ್ತು ಜೆಡಿಎಸ್ ತಾಲೂಕು ಅಧ್ಯಕ್ಷ ಜಯಮುತ್ತು ವೈಮನಸ್ಸಿತ್ತು. ಈ ವಿಚಾರವಾಗಿ ನ್ಯಾಯಾಲಯಕ್ಕೂ ಹೋಗಿದ್ದರು. ಅವರು ಜಗಳ ಮಾಡಿಕೊಂಡರೆ ನಾವು ಹೊಣೆಯಲ್ಲ. ಇದರಿಂದ ಪಕ್ಷಕ್ಕೆ ಹಾನಿಯಾಗಲ್ಲ, ಶಮನ ಮಾಡುವಂಥದ್ದು ಏನೂ ಇಲ್ಲ. ಆದರೆ ಲಿಂಗೇಶ್ ಕುಮಾರ್ ನನ್ನ ಜೊತೆ ವಿಶ್ವಾಸವಾಗಿರೋದು ಜಯಮುತ್ತುಗೆ ಅಸಮಾಧಾನ ಇರಬಹುದು ಎಂದರು.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv