ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯರಾಗಿರುವ ಅನಿತಾ ಭಟ್ (Anita Bhatt), ಈ ವಿಷಯವಾಗಿ ಸಾಕಷ್ಟು ಕಿರಿಕಿರಿಯನ್ನು ಅವರು ಎದುರಿಸಿದ್ದಾರೆ. ಅನಿತಾ ಭಟ್ ಹಾಕಿರುವ ಕಾಸ್ಟ್ಯೂಮ್, ಮಾಡಿರುವ ಪಾತ್ರಗಳನ್ನು ಕೆಲವರು ಹುಡುಕಿ ಹುಡುಕಿ ಇವರನ್ನು ರೇಗಿಸುತ್ತಾರೆ. ಅನಿತಾ ಅವುಗಳಿಗೆ ತನ್ನದೇ ಆದ ರೀತಿಯಲ್ಲಿ ಉತ್ತರ ಕೊಡುತ್ತಾರೆ. ಅದರಲ್ಲೂ ಎಡ ಮತ್ತು ಬಲಗಳ ಚರ್ಚೆ ಇವರ ಖಾತೆಯಲ್ಲಿ ಅನೇಕ ಬಾರಿ ಆಗಿದೆ. ಈ ಬಾರಿ ಬೇರೆ ಕಾರಣಕ್ಕಾಗಿ ಅನಿತಾ ಗರಂ ಆಗಿದ್ದಾರೆ.
Advertisement
ಕೆಲವು ಖಾತೆಗಳಿಂದ ತಮಗೆ ನಿರಂತರವಾಗಿ ಅವಹೇಳನಕಾರಿ ಮಸೇಜ್ ಗಳು ಬರುತ್ತಿವೆ ಎಂದು ಸ್ವತಃ ಅನಿತಾ ಬರೆದುಕೊಂಡಿದ್ದಾರೆ. ಅದರಲ್ಲಿ ಒಬ್ಬ ತಮ್ಮನ್ನು ಅಶ್ಲೀಲ (Porn) ಚಿತ್ರಗಳ ನಟಿ (Actress) ಎಂದು ಕರೆದಿರುವ ಕುರಿತು ಹೇಳಿಕೊಂಡಿದ್ದಾರೆ. ಯಾವ ಅಶ್ಲೀಲ ಚಿತ್ರದಲ್ಲಿ ನಟಿಸಿದ್ದೇನೆ ಎಂದು ಬಹಿರಂಗ ಪಡಿಸಿ ಎಂದು ಅನಿತಾ ಸವಾಲು ಹಾಕಿದ್ದಾರೆ. ಇಂತಹ ಬೆದರಿಕೆಗೆ ಜಗ್ಗುವುದಿಲ್ಲ ಎಂದೂ ಅವರು ಹೇಳಿಕೊಂಡಿದ್ದಾರೆ. ಇದನ್ನೂ ಓದಿ: 150 ಕೋಟಿ ಮೌಲ್ಯದ ಹೊಸ ಮನೆಯನ್ನು ಪೋಷಕರಿಗೆ ಗಿಫ್ಟ್ ನೀಡಿದ ಧನುಷ್
Advertisement
Advertisement
ತಮ್ಮ ಬಗ್ಗೆ ಕೆಟ್ಟದ್ದಾಗಿ ಕಾಮೆಂಟ್ ಮಾಡುವವರು ಹೆಸರಿನ ಸಮೇತ ಟ್ವಿಟರ್ ಖಾತೆಯಿಂದಲೇ ಅನಿತಾ ಬೆಂಗಳೂರು ಪೊಲೀಸರಿಗೆ ಟ್ಯಾಗ್ ಮಾಡಿದ್ದಾರೆ. ಇದಕ್ಕೆ ಪೊಲೀಸರು ಕೂಡ ಉತ್ತರಿಸಿದ್ದು, ಹತ್ತಿರದ ಪೊಲೀಸ್ ಠಾಣೆಗೆ ದೂರು ಕೊಡುವಂತೆ ಸಲಹೆ ನೀಡಿದ್ದಾರೆ. ಲಿಖಿತ ದೂರು ನೀಡುವಂತೆ ಪೊಲೀಸರು ತಿಳಿಸಿದ್ದಾರೆ.
Advertisement
LIVE TV
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k
I am a website designer. Recently, I am designing a website template about gate.io. The boss’s requirements are very strange, which makes me very difficult. I have consulted many websites, and later I discovered your blog, which is the style I hope to need. thank you very much. Would you allow me to use your blog style as a reference? thank you!