ಬೆಂಗಳೂರು: ವ್ಯಕ್ತಿಯೊಬ್ಬರು ಒಂದು ಹಸುವಿನ ಮೂಲಕ ಪಶುಸಂಗೋಪನೆ ಆರಂಭಿಸಿ ಈಗ ಬಿಎಂಡಬ್ಲ್ಯೂ ಕಾರಿನಲ್ಲಿ ಓಡಾಟ ಮಾಡುತ್ತಿದ್ದಾರೆ.
ಬೆಂಗಳೂರಿನ ರಾಜಾಜಿನಗರ ನಿವಾಸಿ ರಾಘವೇಂದ್ರ ಅವರು ಇಂದು ಬಿಎಂಡಬ್ಲ್ಯೂ ಕಾರಿನಲ್ಲಿ ಓಡಾಡುತ್ತಿದ್ದಾರೆ. ರಾಘವೇಂದ್ರ ಅವರು ದನ ಸಾಕುತ್ತಾ ಕೇವಲ ನಾಲ್ಕೇ ವರ್ಷದಲ್ಲಿ ಬಿಎಂಡಬ್ಲ್ಯೂ ಕಾರಲ್ಲಿ ಓಡಾಡುವಷ್ಟು ಸಂಪಾದಿಸಿದ್ದಾರೆ. ನಾಲ್ಕು ವರ್ಷದ ಹಿಂದೆ ಮನೆಗೆ ಅಂತ ತಂದ ಒಂದೇ ಒಂದು ಹಸುವಿನ ಸಾಕಾಣೆಯಿಂದ ಆರಂಭವಾದ ಕೆಲಸ ಈಗ ಹಿರಿಯೂರಿನಲ್ಲಿ ಗೋಶಾಲೆ ನಿರ್ಮಿಸಿ 200 ಹಸುಗಳನ್ನು ಸಾಕುತ್ತಿದ್ದಾರೆ.
Advertisement
Advertisement
ರಾಘವೇಂದ್ರ ಅವರು ನಾಟಿ ಹಸುವಿನ ಹಾಲು, ತುಪ್ಪ, ಸಗಣಿ, ಬೆರಣಿ, ವಿಭೂತಿ ಮತ್ತು ಗೋ ಮೂತ್ರದಿಂದ ವಿವಿಧ ಔಷಧಿಗಳನ್ನ ತಯಾರಿಸಿ ಮಾರಾಟ ಮಾಡುತ್ತಿದ್ದಾರೆ. ಸೊಳ್ಳೆ ಔಷಧಿ, ಹಲ್ಲಿನ ಪುಡಿ, ಕುಡಿಯಲು ಉಪಯೋಗವಾಗುವಂತ ತರಹೇವಾರಿ ಗೋ ಮೂತ್ರದಿಂದ ಒಟ್ಟು 30 ಉತ್ಪನ್ನಗಳನ್ನ ತಯಾರಿಸುತ್ತಾರೆ. ವಿದೇಶಗಳಿಗೂ ರಫ್ತು ಮಾಡುತ್ತಾರೆ. ಇದೇ ಪ್ರಮುಖ ಆದಾಯವಾಗಿದ್ದು, ಗೋ ಮಾತೆಯನ್ನ ನಂಬಿದರೆ ಯಾವುದೇ ತೊಂದರೆ ಇಲ್ಲ ಅನ್ನೋದು ರಾಘವೇಂದ್ರ ಅವರ ಅನುಭವದ ಮಾತಾಗಿದೆ.
Advertisement
Advertisement
ಕಾರು ಖರೀದಿಸಲು ಬೆಂಗಳೂರಿನ ಶೋ ರೂಂಗೆ ಹೋದಾಗ ನಮ್ಮನ್ನ ಯಾರೂ ಮಾತನಾಡಿಸಲಿಲ್ಲ. ನಾವೇ ಈ ಕಾರಿನ ಬಗ್ಗೆ ಮಾಹಿತಿ ಕೊಡಿ ಎಂದು ಕೇಳಬೇಕಾಯಿತು. ಇದು ನನಗೆ ಬೇಸರ ತರಿಸಿತು. ನಂತರ 68 ಲಕ್ಷ ಫುಲ್ ಪೇಮೆಂಟ್ ಮಾಡಿ ಒಂದು ತಿಂಗಳು ಡೆಲಿವರಿಗಾಗಿ ಕಾದೆ. ಕೊನೆಗೆ ಶೋರೂಂ ಅವರು ಕಾಲ್ ಮಾಡಿ ಸರ್ ಯಾವಾಗ ಕಾರು ಡೆಲಿವರಿ ತಗೊತೀರಾ ಅಂತ ಕೇಳಿದ್ದಾರೆ. ಅದಕ್ಕೆ ನಾನು ದನ ಕಾಯೋನು ಅಂತ ನಮ್ಮನ್ನ ಕೀಳಾಗಿ ಕಾಣಬೇಡಿ ಅಂತ ಹೇಳಿದೆ ಎಂದು ರಾಘವೇಂದ್ರ ಅವರು ಬೇಸರ ವ್ಯಕ್ತಪಡಿಸಿದ್ರು. ನಮ್ಮ ದೇಶದ ಹಾಗೂ ರಾಜ್ಯದ ತಳಿಗಳನ್ನ ಮಾತ್ರ ಇವರು ಸಾಕುತ್ತಿದ್ದು, ಈ ಮೂಲಕ ದೇಸಿ ತಳಿಗಳನ್ನು ಉಳಿಸುವಲ್ಲಿ ಪ್ರಯತ್ನಿಸುತ್ತಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews