ಬಾಲಿವುಡ್ (Bollywood) ಖ್ಯಾತ ಗಾಯಕ ವಿಶಾಲ್ ಮಿಶ್ರಾ (Vishal Mishra) ಅವರ ಮನೆಗೆ ಹೊಸ ಅತಿಥಿಯ ಆಗಮನವಾಗಿದೆ. ಗಾಯಕ ವಿಶಾಲ್ ಮಿಶ್ರಾ ಅವರು ಐಷಾರಾಮಿ ಕಾರೊಂದನ್ನು ಖರೀದಿಸಿದ್ದಾರೆ. ದುಬಾರಿ ಕಾರಿನ ಫೋಟೋ ಶೇರ್ ಮಾಡಿದ್ದಾರೆ. ಗಾಯಕನಿಗೆ ಅಭಿಮಾನಿಗಳು ಶುಭಕೋರುತ್ತಿದ್ದಾರೆ.
View this post on Instagram
ಸಿಂಗರ್ ವಿಶಾಲ್ ಮಿಶ್ರಾ ಅವರು ತಮ್ಮ ಕುಟುಂಬದ ಜೊತೆ ಭೇಟಿ ನೀಡಿ Mercedes Benz Maybach GLS 600 ಲಕ್ಷುರಿ ಕಾರು ಖರೀದಿಸಿದ್ದಾರೆ. ವಿಶಾಲ್ ಮಿಶ್ರಾ ಅವರು ಖರೀದಿಸಿದ ಕಾರಿನ ಬೆಲೆ 3 ಕೋಟಿ ರೂ. ಆಸುಪಾಸಿನಲ್ಲಿದೆ. ನೂತನ ಕಾರಿಗೆ ವಿಶಾಲ್ ಮಿಶ್ರಾ ಅವರ ತಾಯಿ ಪೂಜೆ ಸಲ್ಲಿಸಿದ್ದಾರೆ.
- Advertisement
ವಿಶಾಲ್ ಮಿಶ್ರಾ ಅವರು ರಣಬೀರ್ ಕಪೂರ್ (Ranbirkapoor) ಅಭಿನಯದ ‘ಅನಿಮಲ್’ (Animal) ಸಿನಿಮಾದ ‘ಪೆಹಲೇ ಭಿ ಮೈ’ ಎಂಬ ಹಾಡು ಹಾಡುವ ಮೂಲಕ ಅತೀ ಹೆಚ್ಚು ಜನಪ್ರಿಯತೆ ಪಡೆದುಕೊಂಡಿದ್ದರು.