ಮೈಕಲ್ ಜಾಕ್ಸನ್ ಬಯೋಪಿಕ್ ನಿರ್ದೇಶನದ ಬಗ್ಗೆ ಕನಸು ಬಿಚ್ಚಿಟ್ಟ ಸಂದೀಪ್‌ ರೆಡ್ಡಿ ವಂಗಾ

Public TV
1 Min Read
sandeep reddy vanga

ರ್ಜುನ್ ರೆಡ್ಡಿ, ಅನಿಮಲ್ (Animal) ಸಿನಿಮಾಗಳ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಸದ್ಯ ಪ್ರಭಾಸ್ (Prabhas) ನಟನೆಯ ‘ಸ್ಪಿರಿಟ್’ ಸಿನಿಮಾ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ. ಇದರ ನಡುವೆ ಮೈಕಲ್ ಜಾಕ್ಸನ್ (Michael Jackson) ಜೀವನವನ್ನು ಸಿನಿಮಾ ರೂಪದಲ್ಲಿ ತೋರಿಸಲು ಆಸಕ್ತಿ ತೋರಿದ್ದಾರೆ. ಈ ಬಗ್ಗೆ ನಿರ್ದೇಶಕ ಓಪನ್ ಆಗಿ ಮಾತನಾಡಿದ್ದಾರೆ.

sandeep reddy vanga

ಸಂದೀಪ್ ರೆಡ್ಡಿ ವಂಗಾ (Sandeep Reddy Vanga) ಅವರ ಕಥೆ ಮತ್ತು ನಿರ್ದೇಶನಕ್ಕೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಆದರೆ ಅವರ ಸಿನಿಮಾಗಳು ಕಾಂಟ್ರವರ್ಸಿ ಮೂಲಕ ಕೂಡ ಸದ್ದು ಮಾಡಿದೆ. ಈಗ ಸಂದರ್ಶನವೊಂದರಲ್ಲಿ ಮೈಕಲ್ ಜಾಕ್ಸನ್ ಬಯೋಪಿಕ್ ಸಿನಿಮಾ ಮಾಡಿ ತೋರಿಸಬೇಕು ಎಂಬ ಆಸೆಯಿದೆ ಎಂದು ಹೇಳಿಕೊಂಡಿದ್ದಾರೆ. ಇದನ್ನೂ ಓದಿ:ಡಾಲಿ ಧನಂಜಯ್ ಈಗ ‘ಕೋಟಿ’ ಸರದಾರ

michael jackson 2

ಮೈಕಲ್ ಜಾಕ್ಸನ್ ಪಾತ್ರವನ್ನು ಯಾರು ಮಾಡ್ತಾರೆ ಎಂಬುದೇ ಪ್ರಶ್ನೆ. ಸೂಕ್ತವಾದ ನಟ ಸಿಕ್ಕರೆ ಸಿನಿಮಾ ಮಾಡಬಹುದು. ಮೈಕಲ್ ಜಾಕ್ಸನ್ ಅವರ ಜೀವನ ತುಂಬಾ ರೋಚಕವಾಗಿದೆ. ಅವರ ಬಾಲ್ಯದ ದಿನಗಳು, ಮೈ ಬಣ್ಣ ಬದಲಾಯಿಸಿಕೊಂಡಿದ್ದು ಅದೆಲ್ಲವೂ ಒಂದು ದೊಡ್ಡ ಜರ್ನಿಯಾಗಿದೆ. ಆ ಸಿನಿಮಾ ಮಾಡಿದರೆ ಎಲ್ಲರೂ ಟಿಕೆಟ್ ಖರೀದಿಸುತ್ತಾರೆ. ಯಾರೇ ನಿರ್ದೇಶನ ಮಾಡಿದರೂ ನಾನು ಕೂಡ ಟಿಕೆಟ್ ಖರೀದಿಸಿ ಸಿನಿಮಾ ನೋಡುತ್ತೇನೆ. ಯಾಕೆಂದ್ರೆ ನಾನು ಕೂಡ ಅವರ ಬಗ್ಗೆ ಹೆಚ್ಚು ತಿಳಿದುಕೊಳ್ಳಬೇಕು ಎಂದು ಸಂದೀಪ್ ರೆಡ್ಡಿ ವಂಗಾ ಹೇಳಿದ್ದಾರೆ.

‘ಅನಿಮಲ್’ ಸಿನಿಮಾ ಯಶಸ್ವಿಯಾಗಿದೆ. ಅನಿಮಲ್ ಪಾರ್ಕ್ ಮತ್ತು ಸ್ಪಿರಿಟ್ 2 ಚಿತ್ರಗಳು ಅವರ ಕೈಯಲ್ಲಿದೆ. ಅದಕ್ಕಾಗಿ ತೆರೆಮರೆಯಲ್ಲಿ ಭರ್ಜರಿ ತಯಾರಿ ಕೂಡ ನಡೆಯುತ್ತಿದೆ. ಸದ್ಯದಲ್ಲೇ ಹೆಚ್ಚಿನ ಮಾಹಿತಿ ಸಿಗಲಿದೆ.

Share This Article