ದುಬೈ: ಅಂತರಾಷ್ಟ್ರೀಯ ಕ್ರಿಕೆಟ್ ಕಮಿಟಿ ಅಧ್ಯಕ್ಷರಾಗಿ ಟೀಂ ಇಂಡಿಯಾ ಮಾಜಿ ಆಟಗಾರ, ಕನ್ನಡಿಗ ಅನಿಲ್ ಕುಂಬ್ಳೆ ಮತ್ತೊಮ್ಮೆ ಆಯ್ಕೆ ಆಗಿದ್ದಾರೆ.
ದುಬೈನಲ್ಲಿ ನಡೆದ 6 ದಿನಗಳ ಐಸಿಸಿಯ ಸಭೆಯಲ್ಲಿ ಈ ನಿರ್ಣಯವನ್ನು ಮಾಡಲಾಗಿದೆ. ಈಗಾಗಲೇ 2 ಅವಧಿಗಳಲ್ಲಿ ಐಸಿಸಿ ಸಮಿತಿಯ ಅಧ್ಯಕ್ಷರಾಗಿರುವ ಅನುಭವವನ್ನು ಕುಂಬ್ಳೆ ಪಡೆದಿದ್ದಾರೆ.
Advertisement
Advertisement
2012ರಲ್ಲಿ ಮೊದಲ ಬಾರಿಗೆ ಕುಂಬ್ಳೆ ಅವರು ಐಸಿಸಿ ಸಮಿತಿಯ ಅಧ್ಯಕ್ಷರಾಗಿ ಆಯ್ಕೆ ಆಗಿದ್ದರು. ಅದಕ್ಕೂ ಮುನ್ನ ಆ ಸ್ಥಾನವನ್ನು ವೆಸ್ಟ್ ಇಂಡೀಸ್ ಮಾಜಿ ಆಟಗಾರ ಕ್ಲೇವ್ ಲಾಯ್ಡ್ ನಿರ್ವಹಿಸಿದ್ದರು. ಸದ್ಯ ಸತತವಾಗಿ 3ನೇ ಬಾರಿಗೆ ಕುಂಬ್ಳೆ ಅವರು ಆಯ್ಕೆ ಆಗಿದ್ದಾರೆ.
Advertisement
ಕುಂಬ್ಳೆ ಅವರು ಅಧ್ಯಕ್ಷರಾಗಿರುವ ಐಸಿಸಿ ಸಮಿತಿ ಪ್ರಮುಖವಾಗಿ ನಿಯಮ ಉಲ್ಲಂಘಿಸಿದ ಆಟಗಾರರ ಮೇಲೆ ಯಾವ ಪ್ರಮಾಣದ ಶಿಸ್ತು ಕ್ರಮ ತೆಗೆದುಕೊಳ್ಳಬೇಕು ಎನ್ನುವುದನ್ನು ನಿರ್ಧರಿಸುತ್ತದೆ. ಕೆಲವು ಪ್ರಕರಣಗಳ ವಿಚಾರಣೆ ಸಹ ನಡೆಸುತ್ತದೆ. ಇತ್ತೀಚಿಗೆ ಶ್ರೀಲಂಕಾದ ಆಟಗಾರ ಸನತ್ ಜಯಸೂರ್ಯ ಭ್ರಷ್ಟಾಚಾರ ಪ್ರಕರಣದಲ್ಲಿ ಸಾಕ್ಷ್ಯವನ್ನು ನೀಡದ್ದಕ್ಕೆ ಈ ಸಮಿತಿ 2 ವರ್ಷಗಳ ಕಾಲ ನಿಷೇಧ ಹೇರಿತ್ತು.
Advertisement
18 ವರ್ಷಗಳ ಕಾಲ ಭಾರತ ತಂಡವನ್ನು ಪ್ರತಿನಿಧಿಸಿದ್ದ ಕುಂಬ್ಳೆ, 132 ಟೆಸ್ಟ್ ಪಂದ್ಯಗಳಲ್ಲಿ 619 ವಿಕೆಟ್, 271 ಏಕದಿನ ಪಂದ್ಯಗಳಲ್ಲಿ 337 ವಿಕೆಟ್ ಪಡೆದ ಹೆಮ್ಮೆ ಹೊಂದಿದ್ದಾರೆ. ವಿಶ್ವ ಕ್ರಿಕೆಟ್‍ನಲ್ಲಿ ಅತಿ ಹೆಚ್ಚುನ ವಿಕೆಟ್ ಪಡೆದ ಆಟಗಾರರ ಪಟ್ಟಿಯಲ್ಲಿ 8ನೇ ಸ್ಥಾನವನ್ನು ಪಡೆದಿದ್ದಾರೆ. ಅಲ್ಲದ ಟೆಸ್ಟ್ ಕ್ರಿಕೆಟ್ ಪಂದ್ಯದ ಇನ್ನಿಂಗ್ಸ್ ಎಲ್ಲಾ 10 ವಿಕೆಟ್ ಪಡೆದು ಮಿಂಚಿದ್ದರು.