ನವದೆಹಲಿ: 2002ರ ಗುಜರಾತ್ ಗಲಭೆಗೆ (Gujarat Riots) ಸಂಬಂಧಿಸಿದ ಬಿಬಿಸಿ (BBC) ವಿವಾದಾತ್ಮಕ ಸಾಕ್ಷ್ಯಾಚಿತ್ರದ ವಿರುದ್ಧ ಮಾತನಾಡಿ ಸ್ವಪಕ್ಷೀಯರಿಂದಲೇ ಟೀಕೆಗೆ ಗುರಿಯಾಗಿದ್ದ, ಕಾಂಗ್ರೆಸ್ ಹಿರಿಯ ನಾಯಕ ಎ.ಕೆ.ಆ್ಯಂಟನಿ (A.K.Antony) ಪುತ್ರ ಅನಿಲ್ ಕೆ.ಆ್ಯಂಟನಿ (Anil k Antony) ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ.
ಕೇರಳದಲ್ಲಿ (Kerala) ಕಾಂಗ್ರೆಸ್ನ (Congress) ಸಾಮಾಜಿಕ ಮಾಧ್ಯಮ ಕೋಶದ ಭಾಗವಾಗಿದ್ದ ಅನಿಲ್ ಆ್ಯಂಟನಿ, ಪ್ರಧಾನಿ ನರೇಂದ್ರ ಮೋದಿಗೆ ಸಂಬಂಧಿಸಿದಂತೆ ಬಿಬಿಸಿ ನಿರ್ಮಿಸಿರುವ ʼಇಂಡಿಯಾ: ದಿ ಮೋದಿ ಕ್ವೆಶ್ಚನ್ʼ (India: The Modi Question) ಸಾಕ್ಷ್ಯಚಿತ್ರವನ್ನು ನಿರ್ಬಂಧಿಸಿರುವ ಕೇಂದ್ರ ಸರ್ಕಾರದ ನಿರ್ಧಾರವನ್ನು ಸ್ವಾಗತಿಸಿ ಟ್ವೀಟ್ ಮಾಡಿದ್ದರು. ಅದಕ್ಕೆ ಕಾಂಗ್ರೆಸ್ ಪಕ್ಷದಿಂದಲೇ ವ್ಯಾಪಕ ಟೀಕೆ ವ್ಯಕ್ತವಾಗಿತ್ತು. ಇದರ ಬೆನ್ನಲ್ಲೇ ಅನಿಲ್ ಆ್ಯಂಟನಿ ಪಕ್ಷದ ತಮ್ಮ ಎಲ್ಲಾ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಇದನ್ನೂ ಓದಿ: ಮೋದಿ ಸಾಕ್ಷ್ಯಚಿತ್ರ ದಂಗಲ್ – ಜೆಎನ್ಯುನಲ್ಲಿ ಇಂಟರ್ನೆಟ್, ವಿದ್ಯುತ್ ಸ್ಥಗಿತ
Advertisement
I have resigned from my roles in @incindia @INCKerala.Intolerant calls to retract a tweet,by those fighting for free speech.I refused. @facebook wall of hate/abuses by ones supporting a trek to promote love! Hypocrisy thy name is! Life goes on. Redacted resignation letter below. pic.twitter.com/0i8QpNIoXW
— Anil K Antony (@anilkantony) January 25, 2023
Advertisement
ಟ್ವೀಟ್ ಮೂಲಕ ರಾಜೀನಾಮೆ ಘೋಷಿಸಿರುವ ಅನಿಲ್. “ನಾನು ಕಾಂಗ್ರೆಸ್ನ ಎಲ್ಲಾ ಸ್ಥಾನಗಳಿಗೂ ರಾಜೀನಾಮೆ ನೀಡಿದ್ದೇನೆ. ಬಿಬಿಸಿ ಸಾಕ್ಷ್ಯಚಿತ್ರ ವಿರುದ್ಧ ಟ್ವೀಟ್ ಮಾಡಿದ್ದಕ್ಕೆ ಅಸಹಿಷ್ಣುತೆ ಕರೆಗಳು ಮತ್ತು ಫೇಸ್ಬುಕ್ನಲ್ಲಿ ದ್ವೇಷ/ನಿಂದನೆ ಬರುತ್ತಿದೆ” ಎಂದು ತಿಳಿಸಿದ್ದಾರೆ.
Advertisement
“ಭಾರತದ ವಿರುದ್ಧ ಪೂರ್ವಾಗ್ರಹಗಳ ಸುದೀರ್ಘ ಇತಿಹಾಸ ಹೊಂದಿರುವ ರಾಜ್ಯ ಪ್ರಾಯೋಜಿತ ಚಾನೆಲ್ ಬಿಬಿಸಿ” ಎಂದು ಅನಿಲ್ ಆ್ಯಂಟನಿ ಸಾಕ್ಷ್ಯಚಿತ್ರದ ವಿರುದ್ಧ ಟ್ವೀಟ್ ಮಾಡಿ ನಿನ್ನೆ ಅಸಮಾಧಾನ ವ್ಯಕ್ತಪಡಿಸಿದ್ದರು. ಇದನ್ನೂ ಓದಿ: ಹೈದರಾಬಾದ್ ವಿವಿ ಕ್ಯಾಂಪಸ್ನಲ್ಲಿ ಮೋದಿ ಕುರಿತ ಬಿಬಿಸಿ ಸಾಕ್ಷ್ಯಚಿತ್ರ ಪ್ರದರ್ಶನ – ತನಿಖೆಗೆ ಆದೇಶ
Advertisement
ಅನಿಲ್ ಆ್ಯಂಟನಿ ತಂದೆ ಎ.ಕೆ.ಆ್ಯಂಟನಿ ಅವರು ಕಾಂಗ್ರೆಸ್ ಹಿರಿಯ ನಾಯಕರಲ್ಲಿ ಒಬ್ಬರು. ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದಾಗ ಕೇಂದ್ರ ರಕ್ಷಣಾ ಸಚಿವರಾಗಿದ್ದರು.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k