ರಿಲಯನ್ಸ್ ಎರಡು ಕಂಪನಿಯ ನಿರ್ದೇಶಕ ಸ್ಥಾನಕ್ಕೆ ಅನಿಲ್ ಅಂಬಾನಿ ರಾಜೀನಾಮೆ

Public TV
2 Min Read
Anil Ambani

ನವದೆಹಲಿ: ರಿಲಯನ್ಸ್ ಪವರ್ ಮತ್ತು ರಿಲಯನ್ಸ್ ಇನ್‍ಫ್ರಾಸ್ಟ್ರಕ್ಚರ್ ನಿರ್ದೇಶಕ ಸ್ಥಾನಕ್ಕೆ ರಿಲಯನ್ಸ್ ಗ್ರೂಪ್ ಅಧ್ಯಕ್ಷ ಅನಿಲ್ ಅಂಬಾನಿ ಅವರು ರಾಜೀನಾಮೆ ನೀಡಿದ್ದಾರೆ.

ಸೆಬಿ [ಸೆಕ್ಯುರಿಟೀಸ್ ಮತ್ತು ಎಕ್ಸ್‌ಚೇಂಜ್ ಬೋರ್ಡ್ ಆಫ್ ಇಂಡಿಯಾ] ಮಧ್ಯಂತರ ಆದೇಶವನ್ನು ಪಾಲಿಸುವ ಸಲುವಾಗಿ ಕಾರ್ಯನಿರ್ವಹಕೇತರ ನಿರ್ದೇಶಕ ಅನಿಲ್ ಡಿ ಅಂಬಾನಿ ಅವರು ರಿಲಯನ್ಸ್ ಪವರ್ ಸಂಸ್ಥೆಯ ಬೋರ್ಡ್‍ನಿಂದ ಹೊರ ಬರುತ್ತಿದ್ದಾರೆ ಎಂದು ರಿಲಯನ್ಸ್ ಪವರ್ ತನ್ನ ಬಿಎಸ್‍ಇ ಫೈಲಿಂಗ್‍ನಲ್ಲಿ ತಿಳಿಸಿದೆ.

Reliance

ಫೆಬ್ರವರಿಯಲ್ಲಿ ಸೆಬಿ ರಿಲಯನ್ಸ್ ಹೋಮ್ ಫೈನಾನ್ಸ್ ಲಿಮಿಟೆಡ್, ಕೈಗಾರಿಕೋದ್ಯಮಿ ಅನಿಲ್ ಅಂಬಾನಿ ಮತ್ತು ಇತರ ಮೂವರನ್ನು ಅವ್ಯವಹಾರದ ಆರೋಪದ ಮೇಲೆ ಸ್ಟಾಕ್ ಎಕ್ಸ್‌ಚೆಂಜ್ ಮಾರುಕಟ್ಟೆಯಿಂದ ನಿರ್ಬಂಧಿಸಿತು. ಅನಿಲ್ ಅಂಬಾನಿ ಮತ್ತು ಮೂವರನ್ನು ಸೆಬಿಯಲ್ಲಿ ನೋಂದಾಯಿತ ಯಾವುದೇ ಮಧ್ಯವರ್ತಿ, ಯಾವುದೇ ಪಟ್ಟಿ ಮಾಡಲಾದ ಸಾರ್ವಜನಿಕ ಕಂಪನಿ ಅಥವಾ ಯಾವುದೇ ಸಾರ್ವಜನಿಕ ಕಂಪನಿಯ ಕಾರ್ಯನಿರ್ವಾಹಕ ನಿರ್ದೇಶಕರು/ಪ್ರವರ್ತಕರಾಗಿ ಮುಂದುವರಿಯಬಾರದು ಎಂದು ಸೂಚಿಸಿದೆ.

anil ambani 1 1

ಇದೀಗ ಶುಕ್ರವಾರ ನಡೆಸಿದ ಸಾಮಾನ್ಯ ಸಭೆಯಲ್ಲಿ ಸದಸ್ಯರ ಅನುಮೋದನೆಯೊಂದಿಗೆ ರಿಲಯನ್ಸ್ ಪವರ್ ಮತ್ತು ರಿಲಯನ್ಸ್ ಇನ್‍ಫ್ರಾಸ್ಟ್ರಕ್ಚರ್ ಮಂಡಳಿಗಳಲ್ಲಿ ಐದು ವರ್ಷಗಳ ಅವಧಿಗೆ ಹೆಚ್ಚುವರಿ ನಿರ್ದೇಶಕರಾಗಿ ರಾಹುಲ್ ಸರಿನ್ ಅವರನ್ನು ನೇಮಿಸಲಾಗಿದೆ ಎಂದು ಎರಡು ರಿಲಯನ್ಸ್ ಗ್ರೂಪ್ ಕಂಪನಿಗಳು ತಿಳಿಸಿದೆ. ಇದನ್ನೂ ಓದಿ: ಧೋವಲ್‌ ಸಂಧಾನ – ಗಡಿಯಿಂದ ಪೂರ್ಣ ಸೇನೆ ವಾಪಸ್‌ಗೆ ಚೀನಾ ಒಪ್ಪಿಗೆ

ಕಂಪನಿಯ ನಿರ್ದೇಶಕರ ಮಂಡಳಿಯು ಅಂಬಾನಿಯವರ ನಾಯಕತ್ವದಲ್ಲಿ ಸಂಪೂರ್ಣ ನಂಬಿಕೆ ಮತ್ತು ವಿಶ್ವಾಸವನ್ನು ಹೊಂದಿದ್ದು, ಕಂಪನಿಯು ಎದುರಿಸುತ್ತಿರುವ ಆರ್ಥಿಕ ಸವಾಲುಗಳನ್ನು ಮುಂಬರುವ ದಿನಗಳಲ್ಲಿ ಸಂಭಾವ್ಯವಾಗಿ ಸಾಲದಿಂದ ಮುಕ್ತಗೊಳಿಸಲು ಅಮೂಲ್ಯವಾದ ಕೊಡುಗೆಯನ್ನು ನೀಡುತ್ತದೆ. ಜೊತೆಗೆ ಸೆಬಿ ನಿರ್ಬಂಧ ಶೀಘ್ರ ಮಕ್ತಾಯವಾಗಿ ಮತ್ತೆ ಅನಿಲ್ ಅಂಬಾನಿ ಅವರನ್ನು ಕಂಪನಿ ಬೋರ್ಡ್‍ಗೆ ಆಹ್ವಾನಿಸಲು ಎದುರು ನೋಡುತ್ತಿದ್ದೇವೆ ಎಂದು ರಿಲಯನ್ಸ್ ಪವರ್ ಮತ್ತು ರಿಲಯನ್ಸ್ ಇನ್‍ಫ್ರಾಸ್ಟ್ರಕ್ಚರ್ ಹೇಳಿವೆ.

ಕಳೆದ ಒಂದು ವರ್ಷದಲ್ಲಿ ಕಂಪನಿಯು ತನ್ನ ಸುಮಾರು 8 ಲಕ್ಷ ಷೇರುದಾರರಿಗೆ ಅಪಾರ ಮೌಲ್ಯವನ್ನು ಸೃಷ್ಟಿಸಿದೆ, ಸ್ಟಾಕ್ ಬೆಲೆಯು ಕನಿಷ್ಠ 32 ರೂ.ಯಿಂದ ಗರಿಷ್ಠ 150ರೂ.ವರೆಗೂ (469%) ಏರಿಕೆಯಾಗಿದೆ ಎಂದು ಮಂಡಳಿಗಳು ತಿಳಿಸಿದೆ. ಇದನ್ನೂ ಓದಿ: Galwan Clash ಚೀನಾದ ಸುಳ್ಳು ಬಯಲು – 38 ಪಿಎಲ್‌ಎ ಯೋಧರು ಸಾವು – ಭಾರತದ ಸೇನೆಗೆ ಹೆದರಿ ಪರಾರಿಯಾದ ಚೀನಿ ಸೈನಿಕರು

72 ವರ್ಷದ ರಾಹುಲ್ ಸರಿನ್ ಅವರು 35 ವರ್ಷಗಳ ಸಾರ್ವಜನಿಕ ಸೇವೆಯ ವಿಶಿಷ್ಟ ದಾಖಲೆ ಹೊಂದಿದ್ದು, ಭಾರತ ಸರ್ಕಾರದ ಕಾರ್ಯದರ್ಶಿಯಾಗಿ ನಿವೃತ್ತರಾದರು. ಪ್ರಸ್ತುತ ಅಫ್ಥೋನಿಯಾ ಪ್ರೈವೇಟ್ ಲಿಮಿಟೆಡ್‍ನ ನಿರ್ದೇಶಕರಾಗಿದ್ದಾರೆ.

 

Share This Article
Leave a Comment

Leave a Reply

Your email address will not be published. Required fields are marked *