Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಬೆಲೆ ಏರಿಕೆಗೆ ಬಿಜೆಪಿ ಕಾರ್ಯಕರ್ತನಿಂದಲೇ ಆಕ್ರೋಶ- ಬೂತ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | States | Karnataka | ಬೆಲೆ ಏರಿಕೆಗೆ ಬಿಜೆಪಿ ಕಾರ್ಯಕರ್ತನಿಂದಲೇ ಆಕ್ರೋಶ- ಬೂತ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ

Karnataka

ಬೆಲೆ ಏರಿಕೆಗೆ ಬಿಜೆಪಿ ಕಾರ್ಯಕರ್ತನಿಂದಲೇ ಆಕ್ರೋಶ- ಬೂತ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ

Public TV
Last updated: August 25, 2021 4:10 pm
Public TV
Share
1 Min Read
SMG BJP MUKHABANGA AV 1
SHARE

– ಬಿಜೆಪಿ ಕಾರ್ಯಕರ್ತನಿಂದಲೇ ಬಿಜೆಪಿಗೆ ಮುಖಭಂಗ

ಶಿವಮೊಗ್ಗ: ಬೆಲೆ ಏರಿಕೆ ಖಂಡಿಸಿ ಬಿಜೆಪಿ ಬೂತ್ ಅಧ್ಯಕ್ಷ ಶೇಖರ್ ಅವರು ನಾಮಫಲಕ ತಿರಸ್ಕಾರ ಮಾಡಿ, ಸ್ಥಳದಲ್ಲೇ ಪಕ್ಷಕ್ಕೆ ರಾಜೀನಾಮೆ ನೀಡಿದ ಘಟನೆ ನಡೆದಿದೆ. ಈ ಮೂಲಕ ಬಿಜೆಪಿ ಕಾರ್ಯಕರ್ತರಿಂದಲೇ ಪಕ್ಷಕ್ಕೆ ಮುಖಭಂಗ ಆದಂತಾಗಿದೆ.

bjp worker resignation letter e1629887630593

ನಗರದ ಅಶೋಕನಗರದಲ್ಲಿ ಬಿಜೆಪಿ ವತಿಯಿಂದ ವಾರ್ಡ್ ಅಧ್ಯಕ್ಷರ ಮನೆ ಬಾಗಿಲಿಗೆ ತೆರಳಿ ನಾಮಫಲಕವನ್ನು ವಿತರಿಸುವ ಕಾರ್ಯಕ್ರಮ ನಡೆಯುತ್ತಿತ್ತು. ವಾರ್ಡ್ ನಂ.26ರ ಬೂತ್ ಸಂಖ್ಯೆ 199ರ ಅಧ್ಯಕ್ಷರಾಗಿದ್ದ ಶೇಖರ್ ಅವರ ಮನೆಗೆ ನಾಮಫಲಕವನ್ನು ನೀಡುವ ಉದ್ದೇಶದಿಂದ ಬಿಜೆಪಿ ಮುಖಂಡರು ತೆರಳಿದ್ದರು. ಈ ಸಮಯದಲ್ಲಿ ನಾಮಫಲಕವನ್ನು ತಿರಸ್ಕಾರ ಮಾಡುವುದರ ಜೊತೆಗೆ ನಾಮಫಲಕ ನೀಡಲು ಬಂದವರ ಕೈಗೆ ಸ್ಥಳದಲ್ಲಿಯೇ ರಾಜೀನಾಮೆ ಪತ್ರವನ್ನು ಶೇಖರ್ ನೀಡಿದ್ದಾರೆ. ಇದರಿಂದ ಬಿಜೆಪಿ ಮುಖಂಡರಿಗೆ ಇರುಸು-ಮುರುಸು ಉಂಟಾಗಿದೆ. ಇದನ್ನೂ ಓದಿ: ಮೈಸೂರಲ್ಲಿ ನಡೆದ ಗ್ಯಾಂಗ್‍ರೇಪ್ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು: ಸಿ.ಟಿ ರವಿ

ಘಟನೆಗೆ ಸಂಭಂದಿಸಿದಂತೆ ಪ್ರತಿಕ್ರಿಯೆ ನೀಡಿರುವ ಶೇಖರ್, ಬಿಜೆಪಿ ಅಧಿಕಾರಕ್ಕೆ ಬರುವ ಮೊದಲು ಜನಸಾಮಾನ್ಯರಿಗೆ ಅಭಿವೃದ್ಧಿಯ ವಿಷಯವಾಗಿ ನೂರಾರು ಭರವಸೆಗಳನ್ನು ನೀಡಿದ್ದರು. ಆದರೆ ಅಧಿಕಾರಕ್ಕೆ ಬಂದ ನಂತರ ಬಿಜೆಪಿ ತನ್ನ ಹೇಳಿಕೆಗೆ ವ್ಯತಿರಿಕ್ತ ಎನ್ನುವ ಹಾಗೆ ಪೆಟ್ರೋಲ್, ಡೀಜಲ್, ಅಡುಗೆ ಅನಿಲ, ಸೇರಿದಂತೆ ದಿನಸಿ ವಸ್ತುಗಳ ಬೆಲೆ ಗಗನಕ್ಕೇರಿಸಿದೆ. ಈ ಕಾರಣ ನಾವು ಜನರ ಮಧ್ಯದಲ್ಲಿ ಪಕ್ಷದ ಪರವಾಗಿ ಮಾತನಾಡಲು ಹೋದಾಗ ನಾವು ಜನರಿಗೆ ಉತ್ತರ ನೀಡಲು ಕಷ್ಟವಾಗುತ್ತಿದೆ. ಅದೆಷ್ಟೋ ಬಾರಿ ಜನರಿಂದ ಅವಮಾನಕ್ಕೆ ಒಳಗಾಗಬೇಕಾಗಿದೆ. ಈ ಕಾರಣಕ್ಕೆ ನಾನು ಬಿಜೆಪಿ ಸದಸ್ಯತ್ವ ಹಾಗೂ ಬೂತ್ ಅಧ್ಯಕ್ಷ ಸ್ಥಾನಕ್ಕೆ ಬಹಿರಂಗವಾಗಿ ಜನರ ಎದುರಲ್ಲೇ ರಾಜೀನಾಮೆ ನೀಡುತ್ತಿರುವುದಾಗಿ ಪತ್ರದಲ್ಲಿ ತಿಳಿಸಿದ್ದಾರೆ.

TAGGED:activistbjpprice hikeprice risePublic TVshivamoggaಕಾರ್ಯಕರ್ತಪಬ್ಲಿಕ್ ಟಿವಿಬಿಜೆಪಿಬೆಲೆ ಏರಿಕೆಶಿವಮೊಗ್ಗ
Share This Article
Facebook Whatsapp Whatsapp Telegram

Cinema news

Daali Dhananjaya
ಮೊದಲ ಮಗುವಿನ ನಿರೀಕ್ಷೆಯಲ್ಲಿ ಡಾಲಿ ಧನಂಜಯ್‌ ದಂಪತಿ
Cinema Latest Main Post Sandalwood
Darshan
ಜಾಮೀನಿಗಾಗಿ ಎರಡನೇ ಬಾರಿ ಸುಪ್ರೀಂ ಕದ ತಟ್ಟಿದ ದರ್ಶನ್‌
Cinema Court Latest Main Post Sandalwood
yash toxic
ಜಾಗತಿಕ ಮಟ್ಟದಲ್ಲಿ ಅಬ್ಬರಿಸಲು ಸಜ್ಜಾದ ಯಶ್ – ಟಾಕ್ಸಿಕ್ ಬಿಡುಗಡೆ ದಿನಾಂಕ ಮತ್ತೆ ಮುಂದಕ್ಕೆ
Cinema Latest Main Post
Pooja Hegde Udupi
ಉಡುಪಿಯಲ್ಲಿ ನಾಗದೇವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟಿ ಪೂಜಾ ಹೆಗ್ಡೆ
Cinema Districts Karnataka Latest Top Stories Udupi

You Might Also Like

Acres of banana crop destroyed due to unseasonal rains in Hassan
Districts

ಅಕಾಲಿಕ ಮಳೆಗೆ ಎಕರೆಗಟ್ಟಲೆ ಬಾಳೆ ಬೆಳೆ ನಾಶ – ರೈತರ ಕಣ್ಣೀರು

Public TV
By Public TV
1 minute ago
West Bengal Election mamata banerjee late night high drama election commission says strong room not open
Latest

ಕೋಲ್ಕತ್ತಾದಲ್ಲಿ ತಡರಾತ್ರಿ ಮಮತಾ ಹೈಡ್ರಾಮಾ – ಸ್ಟ್ರಾಂಗ್ ರೂಮ್‌ ತೆರೆದಿಲ್ಲ ಎಂದ ಆಯೋಗ

Public TV
By Public TV
5 minutes ago
Love
Latest

ನಿನಗಾಗಿ ಕಾಯ್ದಿರಿಸಿದ ಹೃದಯವಿದು ಅಂತ ನೀನ್ಯಾಕೆ ಹೇಳ್ತಿಲ್ಲ?

Public TV
By Public TV
31 minutes ago
Commercial LPG Cylinder 19kg
Latest

ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ ಬೆಲೆ 993 ರೂ. ಏರಿಕೆ

Public TV
By Public TV
45 minutes ago
TUMBAIL 00000 00000
Latest

ಇಂದಿನಿಂದ ದೇಶದಲ್ಲಿ ಹೊಸ ಆನ್‌ಲೈನ್ ಗೇಮಿಂಗ್ ಕಾಯ್ದೆ ಜಾರಿ – ಏನಿದು ಹೊಸ ರೂಲ್ಸ್‌?

Public TV
By Public TV
53 minutes ago
RCB vs GT
Cricket

ಕೈಕೊಟ್ಟ ಬ್ಯಾಟರ್ಸ್‌, ಆರ್‌ಸಿಬಿಗೆ ಹೀನಾಯ ಸೋಲು – ಗುಜರಾತ್‌ಗೆ 4 ವಿಕೆಟ್‌ಗಳ ಅಮೋಘ ಜಯ

Public TV
By Public TV
9 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?