ನ್ಯೂಯಾರ್ಕ್: ಹಾಲಿವುಡ್ ಚಿತ್ರರಂಗದ ಖ್ಯಾತ ಬರಹಗಾರ ಮತ್ತು ಎಂಜಲ್ ಚಿತ್ರದ ನಿರ್ದೇಶಕ ವಿನ್ಸೆಂಟ್ ಓ’ನೀಲ್ (91) ನಿಧನರಾಗಿದ್ದಾರೆ. ರಾಬರ್ಟ್ ನಿದ್ರಾವಸ್ಥೆಯಲ್ಲಿ ಇದ್ದಾಗಲೇ ಪ್ರಾಣ ಬಿಟ್ಟಿದ್ದಾರೆ ಎಂದು ಸ್ಥಳಿಯ ಮಾಧ್ಯಮಗಳು ವರದಿ ಮಾಡಿವೆ.
ಓ’ನೀಲ್ ಅವರಿಗೆ ಲಾರಿ ಮತ್ತು ನಿಕೋಲ್ ಲಾಯ್ಡ್ ಇಬ್ಬರು ಅವಳಿ ಹೆಣ್ಣುಮಕ್ಕಳಿದ್ದು, ಲಾರಿ ಅವರ ಪತಿ ಆಂಡ್ರ್ಯೂ ಮತ್ತು ಮೊಮ್ಮಗಳು ಲಿಸಾ ಬಿಲ್, ಸಹೋದರ ರಾನ್ ಇವಿ, ಹಾಗೂ ಜೆಸ್ಸಿಕಾ, ಕ್ವಿನ್, ಸಾರಾ, ರಸ್ಸೆಲ್, ಜೆಸ್ ಏಳು ಮೊಮ್ಮಕ್ಕಳು ಮತ್ತು ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಅವರು ಅಗಲಿದ್ದಾರೆ. ಇದನ್ನೂ ಓದಿ: ಆರ್.ಆರ್.ಆರ್ ಸಿನಿಮಾದಲ್ಲಿ ಹೀರೋ ಯಾರು? ವಿಲನ್ ಯಾರು? : ರಾಜಮೌಳಿ ಕೊಟ್ಟರು ಉತ್ತರ
ಹಾಲಿವುಡ್-ಸೆಟ್ ವೈಸ್ ಸ್ಕ್ವಾಡ್ (1982), ದಿ ಬಾಲ್ಟಿಮೋರ್ ಬುಲೆಟ್ (1980), ಲೈಕ್ ಮದರ್ ಲೈಕ್ ಡಾಟರ್ (1969), ದಿ ಸೈಕೋ ಲವರ್ (1970), ಬ್ಲಡ್ ಮೇನಿಯಾ (1970), ವಂಡರ್ ವುಮೆನ್ (1973) ಮತ್ತು ಪ್ಯಾಕೊ (1975) ಹೀಗೆ ಹಾಲಿವುಡ್‍ನಲ್ಲಿ ಅನೇಕ ಚಿತ್ರಗಳನ್ನು ನಿರ್ದೇಶಿಸಿದ್ದ ಕೀರ್ತಿ ಇವರದ್ದು. ಇದನ್ನೂ ಓದಿ : ದಿ ಕಾಶ್ಮೀರ್ ಫೈಲ್ಸ್ ಮಾದರಿಯಲ್ಲಿ ಯಾವೆಲ್ಲ ಚಿತ್ರಗಳು ಬರಬೇಕು : ಪ್ರಕಾಶ್ ರೈ ಲಿಸ್ಟ್ ನೋಡಿ