ಬೆಂಗಳೂರು: ಅಂಗನವಾಡಿ ಸಿಬ್ಬಂದಿಗೆ ಕನಿಷ್ಠ ವೇತನದ ಕೂಗಿನ ನಡುವೆ ಮೊಟ್ಟೆ ಕಿರಿಕಿರಿ ಶುರುವಾಗಿದೆ.
ಸರ್ಕಾರ ನೀಡುವ 10 ಸಾವಿರ ಗೌರವ ಧನವೂ ಮೊಟ್ಟೆಯಿಂದ ಖಾಲಿಯಾಗುತ್ತಿದೆ. ಮೊಟ್ಟೆ ಪೆಟ್ಟಿನಿಂದ ಅಂಗನವಾಡಿ ಸಿಬ್ಬಂದಿ ಕಿಂಚಿತ್ತು ಹಣ ಪೋಲು ಮಡುವಂತಿಲ್ಲ. ಸರ್ಕಾರ ನಿಡುತ್ತಿರುವ 5 ರೂ. ನಿಂದ ಮೊಟ್ಟೆಕೊಳ್ಳಲು ಸಾಧ್ಯವಾಗುತ್ತಿಲ್ಲ. ಅಂಗಡಿಗಳಲ್ಲಿ ಮೊಟ್ಟೆ ಬೆಲೆ ಪ್ರಸ್ತುತ 5.5 ರೂ. ಅಂದರೆ 6 ರೂ. ಗೆ ಮಾರಾಟವಾಗುತ್ತಿದೆ. ಈ ಕಾರಣ ಬಾಕಿ ಮೊತ್ತ ಅಂಗನವಾಡಿ ಸಿಬ್ಬಂದಿಯೇ ನೀಡಿ ತರಬೇಕಾದ ಅನಿವಾರ್ಯತೆ ಬಂದಿದೆ. ಇದನ್ನೂ ಓದಿ: ಹಿಜಬ್ ಧರಿಸಿದ್ರೆ ನಾಳೆಯಿಂದ ಪಂಚೆ, ಶಾಲು, ರುದ್ರಾಕ್ಷಿಯೊಂದಿಗೆ ವಿದ್ಯಾರ್ಥಿಗಳು ಹಾಜರ್
Advertisement
Advertisement
ಸರ್ಕಾರವು ಶಾಲಾ ಮಕ್ಕಳಿಗೆ, ಗರ್ಭಿಣಿ ಬಾಣಂತಿಯರಿಗೆ ಮೊಟ್ಟೆ ವಿತರಣೆ ಮಾಡುತ್ತಿದೆ. ಸರ್ಕಾರ ಪ್ರತಿ ಮೊಟ್ಟೆಗೆ 5 ರೂ. ಬೆಲೆ ನೀಡುತ್ತಿದೆ. ಬಾಲ ವಿಕಾಸ ಸಮಿತಿಯ ನೇತೃತ್ವದಲ್ಲಿ ಸ್ಥಳೀಯವಾಗಿ ಮೊಟ್ಟೆ ಖರೀದಿಗೆ ಪ್ರತಿ ಮೊಟ್ಟೆಯ ಮೇಲೆ ಬೆಲೆ 5 ರೂ. ಮಾತ್ರ ಸರ್ಕಾರ ನಿಗದಿ ಪಡಿಸಿದೆ. ಆದರೆ ಪ್ರಸ್ತುತ ಬೆಲೆ 6 ರೂ. ಗೆ ಒಂದು ಮೊಟ್ಟೆ ಮಾರಾಟವಾಗುತ್ತಿದೆ. ಇದರಿಂದಾಗಿ ಅಂಗನವಾಡಿ ಸಿಬ್ಬಂದಿಗಳ ಮೇಲೆ ಹೆಚ್ಚಿನ ಹೊರೆ ಬಿದ್ದಿದೆ. ಇದನ್ನೂ ಓದಿ: ಹಿಜಬ್ ಧರಿಸಿ ಬಂದ ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ಕೊಠಡಿಯಲ್ಲಿ ವ್ಯವಸ್ಥೆ
Advertisement
ಮೊಟ್ಟೆ ಬೆಲೆಯಲ್ಲಿ 5 ರೂ. ಗಿಂತ ಹೆಚ್ಚು ಬೆಲೆ ಇದ್ದರೆ ಅಂಗನವಾಡಿ ಕಾರ್ಯಕರ್ತೆಯರೇ ಕೈಯಿಂದ ಹಣ ಹಾಕಿ ತರಬೇಕಾಗಿದೆ. ರಾಜ್ಯದಲ್ಲಿ ಅಂಗನವಾಡಿ ಕೇಂದ್ರಗಳು 62 ಸಾವಿರ ಎಲ್ಲಾ ಕೇಂದ್ರಗಳಲ್ಲೂ ಮೊಟ್ಟೆ ಬೆಲೆಯ ಏರುಪೇರಿನಿಂದಾಗಿ ಸಮಸ್ಯೆ ಎದುರಾಗಿದೆ.
Advertisement
ಗರ್ಭಿಣಿ-ಬಾಣಂತಿಯರಿಗೆ ಪ್ರತಿ ತಿಂಗಳು 25 ಮೊಟ್ಟೆ ನೀಡಬೇಕು. 3 ರಿಂದ 6 ವರ್ಷದ ಮಕ್ಕಳಿಗೆ ಪ್ರತೀ ತಿಂಗಳು ಎಂಟು ಮೊಟ್ಟೆ ನೀಡಬೇಕು. ಮೊಟ್ಟೆ ಬೆಲೆ ಏರುಗತಿಯಾಗುತ್ತಿರುವದರಿಂದ ಅಂಗನವಾಡಿ ಸಿಬ್ಬಂದಿಗೆ ಬರೆಯೆಳೆದಂತಾಗಿದೆ. ಈ ಸಮಸ್ಯೆಯನ್ನು ಸರ್ಕಾರ ಕೂಡಲೇ ಪರಿಹರಿಸುವಂತೆ ಅಂಗನವಾಡಿ ಸಿಬ್ಬಂದಿ ಬೇಡಿಕೆಯಿಟ್ಟಿದ್ದಾರೆ. ಅಂಗನವಾಡಿ ಕಾರ್ಯಕರ್ತೆಯರ ಕಾರ್ಯದರ್ಶಿ ಜಯಮ್ಮ ಕೂಡಾ ಈ ಕುರಿತು ಒತ್ತಾಯಿಸುತ್ತಿದ್ದಾರೆ.