ಕಲಬುರಗಿ: ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಮುಸ್ಲಿಮರಿಗೆ ಬಕೆಟ್ ಹಿಡಿಯುವ ವ್ಯಕ್ತಿ. ಇವರ ಪ್ರೇರಣೆಯಿಂದಾಗಿ ರಾಜ್ಯದಲ್ಲಿ ಇವತ್ತು ದೊಂಬಿಗಳು ಆಗುತ್ತಿವೆ ಎಂದು ಆಂದೋಲ ಶ್ರೀ ಗರಂ ಆಗಿದ್ದಾರೆ.
Advertisement
ಅಜಾನ್ ಮೈಕ್ ತೆರವಿಗೆ ಶ್ರೀರಾಮ್ ಸೇನೆ ಸರ್ಕಾರಕ್ಕೆ ಗಡುವು ನೀಡಿದೆ. ಈ ಬಗ್ಗೆ ವಾಗ್ದಾಳಿ ನಡೆಸಿದ್ದ ಎಚ್.ಡಿ ಕುಮಾರಸ್ವಾಮಿಗೆ ಆಂದೋಲನ ಶ್ರೀ ತೀರುಗೇಟು ನೀಡಿದ್ದು, ಮುಸ್ಲಿಮರಿಗೆ ಬೆಂಬಲ ನೀಡುವ ಇಂತಹ ರಾಜಕಾರಣಿಗಳನ್ನು ಮೊದಲು ಒಳಗಡೆ ಹಾಕಬೇಕು ಆಗಾ ಕರ್ನಾಟಕ, ಭಾರತ ಶಾಂತಿಯಿಂದ ಇರುತ್ತದೆ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ರಾಜ್ಯದ ಪ್ರತಿಯೊಂದು ನೇಮಕಾತಿಯಲ್ಲೂ ಗೋಲ್ಮಾಲ್ – ಆರೋಪಿ ಗೊತ್ತಿದ್ರೂ ಕೇಸ್ ಮುಚ್ಚಾಕಿದ್ರಾ ಪೊಲೀಸರು?
Advertisement
Advertisement
ಮುಸ್ಲಿಮರು ರಂಜಾನ್‍ಗೆ ಹಿಂದೂಗಳ ಬಳಿ ಬಟ್ಟೆ ಖರೀದಿ ಮಾಡಬೇಡಿ, ಮಸ್ಲಿಮರ ಬಳಿಯೇ ಬಟ್ಟೆ ಖರೀದಿ ಮಾಡಿ ಎಂದು ಫತ್ವಾ ಹೊರಡಿಸಿದ್ದಾರೆ. ಅವರು ಫತ್ವಾ ಹೊರಡಿಸಿದ ಮೇಲೆ ನಾವು ಸುಮ್ಮನೆ ಕೂರೋಕೆ ಆಗುತ್ತಾ, ಅಕ್ಷಯ ತೃತೀಯ ದಿನ ಸಾವಿರಾರು ಕೋಟಿ ಚಿನ್ನದ ವ್ಯವಹಾರ ನಡೆಯುತ್ತದೆ. ಹೀಗಾಗಿ ನಾವು ಹಿಂದೂಗಳಿಗೆ ವಿನಂತಿ ಮಾಡುತ್ತಿದ್ದೇವೆ. ಯಾರು ಕೂಡ ಮುಸ್ಲಿಂ ಅಂಗಡಿಯಿಂದ ಚಿನ್ನ ಖರೀದಿ ಮಾಡಬೇಡಿ ಎಂದು ತಿಳಿಸಿದರು. ಇದನ್ನೂ ಓದಿ: ಮ್ಯಾಂಗೋ ವಾರ್ ಬಳಿಕ ಇನ್ನೊಂದು ವಾರ್ ಶುರು- ಹಿಂದೂಗಳ ಬಳಿಯೇ ಚಿನ್ನ ಖರೀದಿಗಾಗಿ ಅಭಿಯಾನ
Advertisement
ಮಲಬಾರ್ ಗೋಲ್ಡ್ ಸೇರಿದಂತೆ ಮುಸ್ಲಿಮರ ಚಿನ್ನದ ಅಂಗಡಿಗಳಲ್ಲಿ ಚಿನ್ನ ಖರೀದಿ ಮಾಡಿದ್ರೆ ದೇಶದಲ್ಲಿ ಒಬ್ಬ ಶತ್ರುವನ್ನು ಬೆಳೆಸಿದಂತೆ ಆಗುತ್ತದೆ. ಹೀಗಾಗಿ ಮುಸ್ಲಿಮರ ಬಳಿ ಚಿನ್ನ ಖರೀದಿ ಮಾಡದೆ ಹಿಂದೂಗಳ ಬಳಿ ಚಿನ್ನ ಖರೀದಿ ಮಾಡಿ ಎಂದು ಶ್ರೀರಾಮ್ ಸೇನೆ ಸಂದೇಶ ನೀಡಿದೆ ಎಂದರು.