ಬೆಂಗಳೂರು: ಪಿಎಸ್‍ಐ ನೇಮಕಾತಿ ಅಕ್ರಮ ಬೆಳಕಿಗೆ ಬಂದ ಬೆನ್ನಲ್ಲೇ ರಾಜ್ಯದ ಪ್ರತಿಯೊಂದು ನೇಮಕಾತಿಯಲ್ಲೂ ಗೋಲ್ಮಾಲ್ ಆಗಿರೋದು ಒಂದರ ಹಿಂದೆ ಒಂದರಂತೆ ಬಹಿರಂಗ ವಾಗುತ್ತಿದೆ.
Advertisement
ಪಿಎಸ್‍ಐ, ಕಾನ್ಸಟೇಬಲ್, ಕೆಪಿಎಸ್‍ಸಿ ಜೊತೆ ಲೋಕೋಪಯೋಗಿ ಇಲಾಖೆ ನಡೆಸಿದ ಪರೀಕ್ಷೆಯಲ್ಲೂ ಅಕ್ರಮ ಆಗಿದೆ. 2021ರ ಡಿಸೆಂಬರ್ 13ರಲ್ಲಿ ನಡೆದ ಪಿಡಬ್ಲ್ಯೂಡಿ ಇಲಾಖೆಯ ಜೂನಿಯರ್ ಎಂಜಿನಿಯರ್ ಪರೀಕ್ಷೆಯಲ್ಲಿ ಬ್ಲೂಟೂತ್ ಮೂಲಕ ಉತ್ತರ ಬರೆಯಲಾಗಿದೆ. ಕಲಬುರಗಿಯಲ್ಲಿ ಪರೀಕ್ಷಾ ಕೇಂದ್ರದ ಸಮೀಪದ ಹೊಟೇಲ್‍ವೊಂದರಲ್ಲಿ ಕುಳಿತು ಬ್ಲೂಟೂತ್ ಡಿವೈಸ್ ಮೂಲಕ ಸರಿ ಉತ್ತರ ಹೇಳಿಕೊಟ್ಟಿರುವ ಎಕ್ಸ್‌ಕ್ಲೋಸಿವ್ ವೀಡಿಯೋವನ್ನು ಪಬ್ಲಿಕ್ ಟಿವಿ ಪ್ರಸಾರ ಮಾಡಿದೆ. ಕಿಂಗ್‍ಪಿನ್‍ಗಳು ಹೋಟೆಲ್‍ನಿಂದ ಉತ್ತರಿಸಿದ್ದಕ್ಕೂ, ಪ್ರಶ್ನೆ ಪತ್ರಿಕೆಗೂ ತಾಳೆ ಆಗಿದೆ. ಅಕ್ಟೋಬರ್‌ನಲ್ಲಿ ಸನ್‍ಫ್ಲವರ್ ಆಯಿಲ್, ವಿಜಯನಗರ ಸಾಮ್ರಾಜ್ಯ, 60 ಹೀಗೆ ಒಂದೊಂದೆ ಉತ್ತರಗಳನ್ನು ಆರೋಪಿಗಳು ಅಭ್ಯರ್ಥಿಗಳಿಗೆ ಹೇಳಿಕೊಟ್ಟಿರುವುದು ವೀಡಿಯೋದಲ್ಲಿ ಬಹಿರಂಗವಾಗಿದೆ. ಇದನ್ನೂ ಓದಿ: PSI ನೇಮಕಾತಿ ಪರೀಕ್ಷೆಗೆ ಬ್ಲೂಟೂತ್ ಮೂಲಕ ಉತ್ತರ ರವಾನೆ
Advertisement
Advertisement
ಈ ನಡುವೆ ಮುಂಗಡವಾಗಿ ಪ್ರಶ್ನೆ ಪತ್ರಿಕೆ ಹೊರಗೆ ಹೇಗೆ ಬಂತು ಎಂಬ ಪ್ರಶ್ನೆ ಎದ್ದಿದೆ. ಎಕ್ಸಾಂಗೆ ಮುನ್ನವೇ ಪೇಪರ್ ಲೀಕಾಗಿರುವ ಬಗ್ಗೆ ಭಾರೀ ಅನುಮಾನ ಮೂಡಿದೆ. ಸಣ್ಣ ನೀರಾವರಿ ಇಲಾಖೆಯ ಸಹಾಯಕ ಇಂಜಿನಿಯರ್ ಮಂಜುನಾಥ್ ಮೇಳಕುಂದಿ ಅಕ್ರಮದ ರೂವಾರಿ ಯಾಗಿದ್ದು, ಬೆಂಗಳೂರು ಠಾಣೆಯೊಂದರ ಪೊಲೀಸರು ಕಲಬುರಗಿಗೆ ಭೇಟಿ ಕೊಟ್ಟು ಕೆಲ ಮಾಹಿತಿ ಸಂಗ್ರಹಿಸಿದ್ದಾರೆ. ಅಲ್ಲದೆ, ಮಂಜುನಾಥ್ ಮೇಳಕುಂದಿಯನ್ನು ಬೆಂಗಳೂರಿಗೆ ಕರೆದೊಯ್ದು ಯಾವುದೇ ದೂರು ದಾಖಲಾಗದ ಕಾರಣ ಬಿಟ್ಟು ಕಳುಹಿಸಿದ್ದಾರೆ. ಆದರೆ, ಅಕ್ರಮದ ಜಾಲ ಹಿಡಿದರೂ ಪೊಲೀಸರೇ ಡೀಲ್ ಮಾಡಿ ಕೇಸ್ ಮುಚ್ಚಿಹಾಕಿದ್ರಾ ಅನ್ನೋ ಚರ್ಚೆ ಎದ್ದಿದೆ. ಇದೀಗ ಮಂಜುನಾಥ್ ಪತ್ತೆಗಾಗಿ ಸಿಐಡಿ ಪೊಲೀಸರ ಶೋಧ ಆರಂಭಿಸಿದ್ದು, ಸಮಗ್ರ ತನಿಖೆ ನಡೆಸಿದ್ರೆ ಪೊಲೀಸರ ಪಾತ್ರ ಕೂಡ ಹೊರಬೀಳುವ ಸಾಧ್ಯತೆ ಇದೆ. ಇದನ್ನೂ ಓದಿ: ಮ್ಯಾಂಗೋ ವಾರ್ ಬಳಿಕ ಇನ್ನೊಂದು ವಾರ್ ಶುರು- ಹಿಂದೂಗಳ ಬಳಿಯೇ ಚಿನ್ನ ಖರೀದಿಗಾಗಿ ಅಭಿಯಾನ
Advertisement