ಹೈದರಾಬಾದ್: ತನ್ನ ಜೊತೆ ಲಿವ್ ಇನ್ ರಿಲೇಷನ್ಶಿಪ್ನಲ್ಲಿದ್ದ ಗೆಳತಿ ಶ್ರದ್ಧಾ ವಾಕರ್ಳನ್ನು (Shraddha Walker) ಅಫ್ತಾಬ್ (Aftab) ಎಂಬಾತ ಹತ್ಯೆ ಮಾಡಿ, ದೇಹವನ್ನು 35 ತುಂಡುಗಳಾಗಿಸಿ ಹಲವೆಡೆ ಬಿಸಾಡಿದ್ದ ದೆಹಲಿ ಭೀಕರ ಹತ್ಯೆ ಪ್ರಕರಣ ವರದಿಯಾಗಿ ಆತಂಕ ಮೂಡಿಸಿತ್ತು. ಇದರ ಬೆನ್ನಲ್ಲೇ ಅದಕ್ಕೆ ಹೋಲಿಕೆ ಎಂಬಂತೆ ಅನೇಕ ಕುಕೃತ್ಯದ ಪ್ರಕರಣಗಳು ವರದಿಯಾಗಿತ್ತಿದೆ.
ಹೌದು, ಆಂಧ್ರಪ್ರದೇಶದ (Andhra Pradesh) ವಿಶಾಖಪಟ್ಟಣಂನ ಮನೆಯೊಂದರ (Andhra Women) ಡ್ರಮ್ನಲ್ಲಿ ಮಹಿಳೆಯ ದೇಹದ ತುಂಡುಗಳು ಇರುವುದು ಪತ್ತೆಯಾಗಿದೆ. ಒಂದು ವರ್ಷದ ಹಿಂದೆ ಮಹಿಳೆ ಕೊಲೆ ಮಾಡಿ ಡ್ರಮ್ನಲ್ಲಿ ದೇಹದ ತುಂಡುಗಳನ್ನು ಹಾಕಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಗ್ಯಾಂಗ್ ರೇಪ್ – ಮಹಿಳೆಯ ಖಾಸಗಿ ಭಾಗಕ್ಕೆ ಸಿಗರೇಟ್ನಿಂದ ಸುಟ್ಟು ವಿಕೃತಿ
ಬಾಡಿಗೆ ಮನೆಯೊಂದರಲ್ಲಿ ಈ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಬಾಡಿಗೆದಾರರು ಸತತ ಒಂದು ವರ್ಷ ಬಾಡಿಗೆ ಪಾವತಿಸಿಲ್ಲ ಎಂದು ಬೇಸತ್ತು ಮನೆಯ ಮಾಲೀಕ, ಮನೆಯ ಬಾಗಿಲು ಒಡೆದು ನೋಡಿದಾಗ ಮಹಿಳೆಯ ದೇಹದ ಭಾಗಗಳು ಪತ್ತೆಯಾಗಿವೆ.
2021ರ ಜೂನ್ನಲ್ಲಿ, ತನ್ನ ಹೆಂಡತಿ ಗರ್ಭಿಣಿ ಎಂದು ಹೇಳಿ ಬಾಡಿಗೆದಾರ ಬಾಡಿಗೆಯನ್ನೂ ಪಾವತಿಯಿಂದ ಮನೆಯಿಂದ ಹೋಗಿದ್ದ. ಆದರೆ ಆಗಾಗ ಯಾರಿಗೂ ತಿಳಿಯದಂತೆ ಹಿಂಬಾಗಿಲಿನಿಂದ ಮನೆಗೆ ಬಂದು ಹೋಗುತ್ತಿದ್ದ. ಸತತ ಒಂದು ವರ್ಷ ಮನೆ ಬಾಡಿಗೆ ನೀಡಿರಲಿಲ್ಲ. ಇದರಿಂದ ಬೇಸತ್ತ ಮಾಲೀಕ ಮನೆ ಪ್ರವೇಶಿಸಿ ಬಾಡಿಗೆದಾರನ ವಸ್ತುಗಳನ್ನು ತೆರವುಗೊಳಿಸಲು ಮುಂದಾದ. ಈ ವೇಳೆ ಡ್ರಮ್ನಲ್ಲಿ ಮಹಿಳೆಯ ದೇಹದ ಭಾಗಗಳು ಪತ್ತೆಯಾಗಿವೆ. ಇದನ್ನೂ ಓದಿ: ಪ್ರಾಂಶುಪಾಲರಿಗೆ ಜೈಶ್ರೀರಾಮ್ ಎಂದು ಘೋಷಣೆ ಕೂಗಲು ಒತ್ತಾಯಿಸಿದ ABVP ಕಾರ್ಯಕರ್ತರು
ಒಂದು ವರ್ಷದ ಹಿಂದೆ ದೇಹವನ್ನು ತುಂಡುಗಳಾಗಿ ಕತ್ತರಿಸಲಾಗಿದೆ ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಪ್ರಕರಣ ಈಗ ಬೆಳಕಿಗೆ ಬಂದಿದೆ ಎಂದು ವಿಶಾಖಪಟ್ಟಣಂ ನಗರ ಪೊಲೀಸ್ ಆಯುಕ್ತ ಶ್ರೀಕಾಂತ್ ತಿಳಿಸಿದ್ದಾರೆ.
ಆ ಮಹಿಳೆ ಬಾಡಿಗೆದಾರನ ಹೆಂಡತಿಯೇ ಇರಬಹುದು ಎಂದು ಶಂಕಿಸಲಾಗಿದೆ. ಮಾಲೀಕರು ದೂರು ನೀಡಿದ್ದು, ಅದರ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಶ್ರೀಕಾಂತ್ ಹೇಳಿದ್ದಾರೆ.