ಕುಡಿಯುವ ನೀರಿಗಾಗಿ ಆಂಧ್ರ-ತೆಲಂಗಾಣ ಕಿತ್ತಾಟ; ಅಣೆಕಟ್ಟು ಗೇಟ್‌ ತೆರೆದು ನೀರು ಬಿಟ್ಟ 700 ಆಂಧ್ರ ಪೊಲೀಸರು

Public TV
2 Min Read
Andhra Pradesh Telangana

ಹೈದರಾಬಾದ್: ಕುಡಿಯುವ ನೀರಿಗಾಗಿ ಆಂಧ್ರಪ್ರದೇಶ (Andhra Pradesh) ಮತ್ತು ತೆಲಂಗಾಣ (Telangana) ರಾಜ್ಯಗಳ ನಡುವೆ ಉದ್ವಿಗ್ನತೆ ಉಂಟಾಗಿದೆ. ಆಂಧ್ರಪ್ರದೇಶವು ನಾಗಾರ್ಜುನ ಸಾಗರ ಅಣೆಕಟ್ಟಿನ ಉಸ್ತುವಾರಿ ವಹಿಸಿಕೊಂಡು ನೀರು ಬಿಡುಗಡೆ ಮಾಡಿದೆ. ಇದು ಎರಡು ರಾಜ್ಯಗಳ ಸಂಘರ್ಷಕ್ಕೆ ಕಾರಣವಾಗಿದೆ.

ಗುರುವಾರ ಬೆಳಗಿನ ಜಾವ ತೆಲಂಗಾಣದ ಬಹುತೇಕ ಅಧಿಕಾರಿಗಳು ಮತದಾನದಲ್ಲಿ ನಿರತರಾಗಿದ್ದಾಗ ಸುಮಾರು 700 ಆಂಧ್ರ ಪೊಲೀಸರು ಬಲ ಕಾಲುವೆ ತೆರೆದು ಗಂಟೆಗೆ 500 ಕ್ಯೂಸೆಕ್ ಕೃಷ್ಣಾ ನೀರನ್ನು ಬಿಡುಗಡೆ ಮಾಡಿದ್ದಾರೆ. ಇದನ್ನೂ ಓದಿ: ರಾಮ ಮಂದಿರ ಲೋಕಾರ್ಪಣೆ – ಗಣ್ಯರ ಜೊತೆ ಸಾಮಾನ್ಯ ಜನರಿಗೆ ಆಹ್ವಾನ – ಆಹ್ವಾನ ಪತ್ರಿಕೆಯಲ್ಲಿ ಏನಿದೆ?

Andhra Pradesh Telangana 1

ನಾವು ಕುಡಿಯುವ ನೀರಿನ ಉದ್ದೇಶಕ್ಕಾಗಿ ಕೃಷ್ಣಾ ನದಿಯ ನಾಗಾರ್ಜುನಸಾಗರ ಬಲ ಕಾಲುವೆಯಿಂದ ನೀರು ಬಿಡುತ್ತಿದ್ದೇವೆ ಎಂದು ಆಂಧ್ರಪ್ರದೇಶ ರಾಜ್ಯದ ನೀರಾವರಿ ಸಚಿವ ಅಂಬಟಿ ರಾಮಬಾಬು ಗುರುವಾರ ಬೆಳಗ್ಗೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದರು. ಆದರೆ ಆಂಧ್ರಪ್ರದೇಶ ಮತ್ತು ತೆಲಂಗಾಣ ನಡುವಿನ ಒಪ್ಪಂದದ ಪ್ರಕಾರ ರಾಜ್ಯಕ್ಕೆ ಸೇರಿದ ನೀರನ್ನು ಮಾತ್ರ ತೆಗೆದುಕೊಂಡಿದ್ದೇವೆ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.

ನಾವು ಯಾವುದೇ ಒಪ್ಪಂದವನ್ನು ಉಲ್ಲಂಘಿಸಿಲ್ಲ. ಕೃಷ್ಣಾ ನೀರಿನಲ್ಲಿ 66% ಆಂಧ್ರಪ್ರದೇಶಕ್ಕೆ ಮತ್ತು 34% ಪಾಲು ತೆಲಂಗಾಣಕ್ಕೆ ಸೇರಿದೆ. ನಮಗೆ ಸೇರದ ಒಂದು ಹನಿ ನೀರನ್ನು ಸಹ ನಾವು ಬಳಸಿಲ್ಲ. ನಮ್ಮ ಸೀಮೆಯಲ್ಲಿ ನಮ್ಮ ಕಾಲುವೆಯನ್ನು ತೆರೆಯಲು ನಾವು ಪ್ರಯತ್ನಿಸಿದ್ದೇವೆ. ಈ ನೀರು ನಮ್ಮದು ಎಂದು ರಾಮಬಾಬು ತಿಳಿಸಿದ್ದಾರೆ. ಇದನ್ನೂ ಓದಿ: ಜಾತಿಗಣತಿ ನಡೆಸಲು ದೇಶದ ಮೂಲೆ ಮೂಲೆಯಿಂದ ಬೇಡಿಕೆ ಹೆಚ್ಚುತ್ತಿದೆ: ಕ್ರಮಕೈಗೊಳ್ಳಲು ಕೇಂದ್ರಕ್ಕೆ ಮಾಯಾವತಿ ಒತ್ತಾಯ

ಉದ್ವಿಗ್ನತೆ ಭುಗಿಲೆದ್ದಿರುವ ಹೊತ್ತಲ್ಲೇ ಕೇಂದ್ರವು ಮಧ್ಯಪ್ರವೇಶಿಸಿದೆ. ಹೆಚ್ಚಿನ ಘರ್ಷಣೆಯನ್ನು ತಪ್ಪಿಸಲು ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ಅಣೆಕಟ್ಟು ಮೇಲ್ವಿಚಾರಣೆ ಮಾಡುತ್ತಿದೆ. ಒಪ್ಪಂದದ ಪ್ರಕಾರ ಎರಡೂ ಕಡೆ ನೀರು ಪಡೆಯಲಾಗುತ್ತಿದೆಯೇ ಎಂದು ಮೇಲ್ವಿಚಾರಣೆ ನಡೆಸಿದೆ.

ಆಂಧ್ರಪ್ರದೇಶದ ಸುಮಾರು 500 ಶಸ್ತ್ರಸಜ್ಜಿತ ಪೊಲೀಸರು ನಾಗಾರ್ಜುನ ಸಾಗರ ಅಣೆಕಟ್ಟಿಗೆ ಬಂದು ಸಿಸಿಟಿವಿ ಕ್ಯಾಮೆರಾಗಳನ್ನು ಹಾನಿಗೊಳಿಸಿದ್ದಾರೆ. ಗೇಟ್ ಸಂಖ್ಯೆ 5 ಮತ್ತು ಹೆಡ್ ರೆಗ್ಯುಲೇಟರ್‌ಗಳನ್ನು ತೆರೆದು ಸುಮಾರು 5,000 ಕ್ಯೂಸೆಕ್ ನೀರನ್ನು ಬಿಡುಗಡೆ ಮಾಡಿದ್ದಾರೆ ಎಂದು ತೆಲಂಗಾಣ ಮುಖ್ಯ ಕಾರ್ಯದರ್ಶಿ ಸಂತಿ ಕುಮಾರಿ ಗುರುವಾರ ಆರೋಪಿಸಿದ್ದಾರೆ. ಇದನ್ನೂ ಓದಿ: ರಾಜ್ಯ ರಾಜಕೀಯ ಒತ್ತಡದ ನಡುವೆ ಕ್ಷೇತ್ರಕ್ಕೆ ಟೈಂ ಕೊಡಲು ಆಗ್ತಿಲ್ಲ: ಡಿಕೆಶಿ

ಆಂಧ್ರಪ್ರದೇಶದ ಈ ಕ್ರಮವು ತೆಲಂಗಾಣದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಅಡ್ಡಿಪಡಿಸಿದೆ. ರಾಜ್ಯ ವಿಧಾನಸಭಾ ಚುನಾವಣೆಗೆ ಮತದಾನ ನಡೆಯುತ್ತಿರುವಾಗ, ಹೈದರಾಬಾದ್ ಮತ್ತು ಸುತ್ತಮುತ್ತಲಿನ 2 ಕೋಟಿ ಜನರ ಕುಡಿಯುವ ನೀರಿನ ಪೂರೈಕೆಗೆ ಅಡ್ಡಿಪಡಿಸಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ತೆಲಂಗಾಣದ ನಲ್ಗೊಂಡ ಜಿಲ್ಲೆಯಲ್ಲಿ ಆಂಧ್ರ ಪೊಲೀಸರ ವಿರುದ್ಧ ಎರಡು ಪ್ರಕರಣಗಳು ದಾಖಲಾಗಿವೆ. 2015 ರಲ್ಲಿ ಆಂಧ್ರ ಪೊಲೀಸರು ಅಣೆಕಟ್ಟೆಗೆ ನುಗ್ಗಲು ಇದೇ ರೀತಿಯ ಪ್ರಯತ್ನ ಮಾಡಿದ್ದರು. ಆದರೆ ತೆಲಂಗಾಣ ಭದ್ರತಾ ಪಡೆಗಳು ಸ್ಥಳಕ್ಕೆ ಧಾವಿಸಿ ತಡೆದಿದ್ದವು.

Share This Article