ಹೈದರಾಬಾದ್: ಆಂಧ್ರಪ್ರದೇಶದ ಮಾಹಿತಿ ತಂತ್ರಜ್ಞಾನ ಮತ್ತು ಕೈಗಾರಿಕಾ ಸಚಿವ ಮೇಕಪತಿ ಗೌತಮ್ ರೆಡ್ಡಿ(50) ಅವರು ಹೃದಯಾಘಾತದಿಂದ ಹೈದರಾಬಾದ್‍ನ ಖಾಸಗಿ ಆಸ್ಪತ್ರೆಯಲ್ಲಿ ನಿಧರಾಗಿದ್ದಾರೆ.
ಮೇಕಪತಿ ಗೌತಮ್ ರೆಡ್ಡಿ ಅವರು ಮನೆಯಲ್ಲಿ ಕುಸಿದು ಬಿದ್ದ ನಂತರ ಅವರನ್ನು ಬೆಳಗ್ಗೆ 7.45 ಸುಮಾರಿಗೆ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಾಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ. ಇದನ್ನೂ ಓದಿ: ಕೋಮು ಬಣ್ಣ ಕಟ್ಟಿ ಯಾರನ್ನೋ ಖಳನಾಯಕ ಮಾಡುವುದು ಈಶ್ವರಪ್ಪ, ಬಿಜೆಪಿಗೆ ಹೊಸದಲ್ಲ: ಬಿ.ಕೆ ಹರಿಪ್ರಸಾದ್
Advertisement
Advertisement
ದುಬೈನಲ್ಲಿ 10 ದಿನಗಳ ಕಾಲ ಕಳೆದ ಬಳಿಕ ಮೇಕಪತಿ ಗೌತಮ್ ರೆಡ್ಡಿ ಅವರು ಒಂದೆರಡು ದಿನಗಳ ಹಿಂದೆ ಹೈದರಾಬಾದ್‍ಗೆ ಮರಳಿದರು. ಆಂಧ್ರಪ್ರದೇಶದ ಕೈಗಾರಿಕಾ ಇಲಾಖೆಯು ದುಬೈ ಎಕ್ಸ್‌ಪೋದಲ್ಲಿ ರಾಜ್ಯದ ಹೂಡಿಕೆಗಳನ್ನು ಆಕರ್ಷಿಸಲು ಸ್ಟಾಲ್ ಅನ್ನು ಸ್ಥಾಪಿಸಿದ್ದರು. ಇದನ್ನೂ ಓದಿ: 2 ವರ್ಷದ ಹಿಂದೆಯೇ 10 ಲಕ್ಷಕ್ಕೆ ಸುಪಾರಿ ಕೊಟ್ಟಿದ್ದರು: ಮೃತನ ಸಂಬಂಧಿ ಹೇಳಿಕೆ
Advertisement
Deeply anguished to know that Lata Mangeshkar ji is no more with us. Her melodious voice will continue to echo for eternity. May her soul rest in peace.
— YS Jagan Mohan Reddy (@ysjagan) February 6, 2022
Advertisement
ಇದೀಗ ಆಂಧ್ರಪ್ರದೇಶದ ಮುಖ್ಯಮಂತ್ರಿ ವೈಎಸ್ ಜಗನ್ ಮೋಹನ್ ರೆಡ್ಡಿ ಅವರು ಮೇಕಪತಿ ಗೌತಮ್ ರೆಡ್ಡಿ ಕುಟುಂಬ ಸದಸ್ಯರಿಗೆ ಸಂತಾಪ ಸೂಚಿಸಿದ್ದಾರೆ. ಮೇಕಪತಿ ರಾಜಮೋಹನ್ ರೆಡ್ಡಿ ಅವರ ಪುತ್ರರಾಗಿರುವ ಮೇಕಪತಿ ಗೌತಮ್ ರೆಡ್ಡಿ ಅವರು ಪತ್ನಿ, ಓರ್ವ ಪುತ್ರ ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.