– ಒಂದೇ ದಿನದಲ್ಲಿ ಹೀರೋ ಆಗಿದ್ದ ನಿವೃತ್ತ ಸರ್ಕಲ್ ಇನ್‍ಸ್ಪೆಕ್ಟರ್
ಹೈದರಾಬಾದ್: ಸಂಸದರಾಗಿ ಆಯ್ಕೆಯಾದ ನಿವೃತ್ತ ಸರ್ಕಲ್ ಇನ್‌ಸ್ಪೆಕ್ಟರ್‌ಗೆ ಡಿವೈಎಸ್‍ಪಿ ಸೆಲ್ಯೂಟ್ ಮಾಡಿದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಆಂಧ್ರಪ್ರದೇಶದ ಕದಿರಿಯಲ್ಲಿ ಗೋರಂಟ್ಲಾ ಮಾಧವ್ ಅವರು ಸರ್ಕಲ್ ಇನ್‍ಸ್ಪೆಕ್ಟರ್ ಆಗಿ ಸೇವೆಸಲ್ಲಿಸುತ್ತಿದ್ದರು. ಆದರೆ ಈಗ ಹಿಂದೂಪುರ ಕ್ಷೇತ್ರದ ಸಂಸದರಾಗಿ ಆಯ್ಕೆಯಾಗಿದ್ದಾರೆ.
Advertisement
ಮಾಧವ್ ಅವರಿಗೆ ಹಿಂದಿನ ಮುಖ್ಯಸ್ಥ, ಸಿಐಡಿ ಉಪ ಅಧೀಕ್ಷಕ ಮೆಹಬೂಬ್ ಬಾಷಾ ಅವರು ಸೆಲ್ಯೂಟ್ ಮಾಡಿದ್ದಾರೆ. ಸ್ಥಳದಲ್ಲಿಯೇ ಇದ್ದ ಕೆಲವರು ಈ ದೃಶ್ಯವನ್ನು ಸೆರೆ ಹಿಡಿದು, ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಈ ಮೂಲಕ ಮಾಧವ್ ಅವರ ಸಾಧನೆಯ ಬಗ್ಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.
Advertisement
Advertisement
ಮಾಧವ್ ಅವರು ಹಿಂದೂಪುರ್ ಲೋಕಸಭಾ ಕ್ಷೇತ್ರದಿಂದ ವೈಎಸ್‍ಆರ್ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಚುನಾವಣಾ ಕಣಕ್ಕೆ ಇಳಿದಿದ್ದರು. ಈ ಮೂಲಕ ಅಲ್ಲಿನ ಸಂಸದರಾಗಿದ್ದ ತೆಲುಗು ದೇಶಂ ಪಾರ್ಟಿ (ಟಿಡಿಪಿ) ಸಂಸದ ಕ್ರಿಸ್ತಪ್ಪ ನಿಮ್ಮಾಲಾ ಅವರ ವಿರುದ್ಧ 1,40,748 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ.
Advertisement
ಸಂಸದರಾಗಲು ಪ್ರೇರಣೆ ಏನು?
ಸರ್ಕಲ್ ಇನ್‍ಸ್ಪೆಕ್ಟರ್ ಆಗಿದ್ದ ಮಾಧವ್ ಅವರ ಕುಟುಂಬದಲ್ಲಿ ಯಾರೊಬ್ಬರೂ ರಾಜಕಾರಣಿಗಳಿಲ್ಲ. ಅಷ್ಟೇ ಅಲ್ಲದೆ ಅವರು ಚುನಾವಣೆಗೆ ನಿಲ್ಲಬೇಕೆಂದು ಬಯಸಿದವರಲ್ಲ. ಅಷ್ಟೇ ಅಲ್ಲದೆ ಚುನಾವಣಾ ಖರ್ಚು ನಿಭಾಯಿಸುವಷ್ಟು ಹಣವೂ ಅವರ ಬಳಿ ಇರಲಿಲ್ಲ. ಆದರೂ ಓರ್ವ ರಾಜಕಾರಣಿಯ ಅಸಭ್ಯ ವರ್ತನೆ ಅವರನ್ನು ಚುನಾವಣಾ ಕಣಕ್ಕೆ ತಂದು ನಿಲ್ಲಿಸಿತ್ತು. ಈಗ ಅವರು ಭರ್ಜರಿ ಗೆಲುವು ಸಾಧಿಸಿ, ತಿರುಗೇಟು ಕೊಟ್ಟಿದ್ದಾರೆ.
ರಾಜಕಾರಣಿ ಜೆ.ಸಿ.ದಿವಾಕರ ರೆಡ್ಡಿ ಅವರು ಪ್ರಕರಣವೊಂದರ ವಿಚಾರವಾಗಿ ಪೊಲೀಸರ ಬಗ್ಗೆ ಅಸಭ್ಯ ಪದ ಬಳಸಿದ್ದರು. ಪೊಲೀಸರು ‘ಹಿಜಡಾ’ಗಳಿಗಿಂತ ಕಡೆ ಎಂದು ದಿವಾಕರ ರೆಡ್ಡಿ ಜರಿದಿದ್ದರು. ಈ ಮಾತುಗಳು ಮಾಧವ್ ಅವರ ಕೋಪಕ್ಕೆ ಕಾರಣವಾಗಿತ್ತು.
ಜೆ.ಸಿ.ದಿವಾಕರ ರೆಡ್ಡಿ ಅವರ ಹೇಳಿಕೆ ವಿಚಾರವಾಗಿ ಮಾಧವ್ ಅವರು ಸುದ್ದಿಗೋಷ್ಠಿ ಕರೆದಿದ್ದರು. ಈ ವೇಳೆ ಪೊಲೀಸರ ಬಗ್ಗೆ ಕಿಳುಮಟ್ಟದ ಪದ ಬಳಕೆ ಮಾಡಿದ ಜೆ.ಸಿ.ದಿವಾಕರ ರೆಡ್ಡಿ ವಿರುದ್ಧ ಕಿಡಿಕಾರಿದ್ದರು. ಪೊಲೀಸ್ ಭಾಷೆಯಲ್ಲಿಯೇ ರೆಡ್ಡಿ ಅವರ ವಿರುದ್ಧ ಕಿಡಿ ಕಾರಿ ಮೀಸೆಯನ್ನು ತಿರುವಿ ಸವಾಲು ಹಾಕಿದ್ದರು.
ಮಾಧವ್ ಅವರ ಸುದ್ದಿಗೋಷ್ಠಿಯ ವಿಡಿಯೋ ಆಂಧ್ರಪ್ರದೇಶದಲ್ಲಿ ವೈರಲ್ ಆಗಿತ್ತು. ಅಸಭ್ಯ ಪದ ಬಳಕೆ ಮಾಡುವ ರಾಜಕಾರಣಿಗಳಿಗೆ ಫುಲ್ ಕ್ಲಾಸ್ ತೆಗೆದುಕೊಂಡ ಮಾಧವ್ ಅವರಿಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿತ್ತು. ಈ ಮೂಲಕ ಮಾಧವ್ ಒಂದೇ ದಿನದಲ್ಲಿ ಜನಪ್ರಿಯತೆ ಗಳಿಸಿದರು. ಈ ವಿಡಿಯೋವನ್ನು ನೋಡಿದ ವೈಎಸ್‍ಆರ್ ಕಾಂಗ್ರೆಸ್ ಪಕ್ಷದ ನಾಯಕ ಜಗನ್‍ಮೋಹನ್ ರೆಡ್ಡಿ ಅವರು ಮಾಧವ್ ಅವರನ್ನು ಭೇಟಿಯಾಗಿ ಹಿಂದೂಪುರ್ ಟಿಕೆಟ್ ನೀಡಿದರು. ಇದರಿಂದಾಗಿ ಪೊಲೀಸ್ ವೃತ್ತಿಗೆ ರಾಜೀನಾಮೆ ನೀಡಿ ರಾಜಕೀಯ ಪ್ರವೇಶ ಮಾಡಿ ಮಾಧವ್ ಅವರು ಭರ್ಜರಿ ಗೆಲುವು ಸಾಧಿಸಿ ಸಂಸತ್ ಪ್ರವೇಶಿಸಿದ್ದಾರೆ.