ಹೈದರಾಬಾದ್: ಆಂಧ್ರಪ್ರದೇಶದ (Andhra Pradesh) ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ (YS Jagan Mohan Reddy) ಅವರ ಸಹೋದರಿ ವೈ.ಎಸ್. ಶರ್ಮಿಳಾ (YS Sharmila) ಅವರನ್ನು ವಾರಂಗಲ್‍ನಲ್ಲಿ ಪೊಲೀಸರು ಬಂಧಿಸಿದ್ದಾರೆ.
ತೆಲಂಗಾಣದಲ್ಲಿ ಶರ್ಮಿಳಾ ಅವರು ವೈಎಸ್‍ಆರ್ ತೆಲಂಗಾಣ ಪಕ್ಷವನ್ನು (YSRTP) ಸಂಘಟಿಸುತ್ತಿದ್ದರು. ಈ ಹಿನ್ನೆಲೆಯಲ್ಲಿ ರಾಜ್ಯದಾದ್ಯಂತ ಪಾದಾಯಾತ್ರೆಯನ್ನು ಹಮ್ಮಿಕೊಂಡಿದ್ದರು. ಅಷ್ಟೇ ಅಲ್ಲದೇ ಈವರೆಗೆ ಸುಮಾರು 3,500 ಕಿ.ಮೀವರೆಗೆ ಪಾದಯಾತ್ರೆ ನಡೆಸಿದ್ದರು.
Advertisement
Advertisement
ನಿನ್ನೆ ನರಸಂಪೇಟೆಯಲ್ಲಿದ್ದ ಅವರು ಸ್ಥಳೀಯ ಟಿಆರ್‌ಎಸ್ ಶಾಸಕ ಪೆದ್ದಿ ಸುದರ್ಶನ್ ರೆಡ್ಡಿ ಅವರನ್ನು ಟೀಕಿಸಿದರು. ಇದರಿಂದಾಗಿ ಕೋಪಗೊಂಡ ಟಿಆರ್‌ಎಸ್ (Telangana Rashtra Samithi) ಕಾರ್ಯಕರ್ತರು ಶರ್ಮಿಳಾ ಅವರ ವಾಹನದ ಮೇಲೆ ದಾಳಿ ಮಾಡಿ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗೆಳತಿಗೆ ಹತ್ತಿರವಾಗಿದ್ದ ಹುಡುಗನ ವಿರುದ್ಧ ಸೇಡು – ಮೋದಿಗೆ ಬೆದರಿಕೆ ಹಾಕಿದ್ದ ಟೆಕ್ಕಿ ಅರೆಸ್ಟ್
Advertisement
https://t.co/76sRne8P8f
వైయస్ షర్మిల గారి బస్సును తగలబెట్టి, పార్టీ శ్రేణులపై దాడులకు పాల్పడిన టీఆర్ఎస్ గూండాలను వదిలి.. ప్రజా సమస్యలపై నిరంతరం పోరాడుతున్న వైయస్ షర్మిల గారిని పోలీసులు అరెస్ట్ చేయడం హేయమైన చర్య. అక్రమ అరెస్టులతో పోరాటాన్ని ఆపలేరు.#PrajaPrasthanam #YSSharmila
— YSR Telangana Party (@YSRTelangana) November 28, 2022
Advertisement
ಇದರಿಂದಾಗಿ ವೈ.ಎಸ್. ಶರ್ಮಿಳಾ ಬೆಂಬಲಿಗರಿಗೂ ಸಿಟ್ಟಿಗೆದ್ದಿದ್ದಾರೆ. ಈ ವೇಳೆ ಶರ್ಮಿಳಾ ಬೆಂಬಲಿಗರಿಗೂ ಹಾಗೂ ಟಿಆರ್‌ಎಸ್ (TRS) ಕಾರ್ಯಕರ್ತರಿಗೂ ಮಾರಾಮಾರಿ ನಡೆದಿದೆ. ಈ ವೇಳೆ ಪೊಲೀಸರು ಮಧ್ಯಪ್ರವೇಶಿಸಿ ಶರ್ಮಿಳಾ ಅವರನ್ನು ಬಂಧಿಸಿದ್ದಾರೆ. ಈ ವೇಳೆ ಶರ್ಮಿಳಾ ಅವರು ನನನ್ನು ಯಾಕೆ ಬಂಧಿಸುತ್ತಿದ್ದೀರಿ? ಇಲ್ಲಿ ನಾನು ಸಂತ್ರಸ್ತೆ, ನಾನು ಆರೋಪಿಯಲ್ಲ ಎಂದು ಕೂಗಾಡಿದ್ದಾರೆ. ಈಗಿರುವ ಆರ್‌ಎಸ್‌ಎಸ್ ಕಳ್ಳರ ಆರ್‌ಎಸ್‌ಎಸ್ : ಪರಿಷತ್ ಸದಸ್ಯ ರಾಜೇಂದ್ರ ಕಿಡಿ