– ಯುವತಿಯ ವಿಚಾರವಾಗಿ ಶುರುವಾದ ಜಗಳ ಸಾವಿನಲ್ಲಿ ಅಂತ್ಯ
ಅಮರಾವತಿ: ನ್ಯೂ ಇಯರ್ ಪಾರ್ಟಿಗೆಂದು (New Year Party) ಗೋವಾಗೆ (Goa) ತೆರಳಿದ್ದ ಆಂಧ್ರ (Andhra Pradesh) ಮೂಲದ ಯುವಕನಿಗೆ ರೆಸ್ಟೋರೆಂಟ್ ಮಾಲೀಕನ ಪುತ್ರ ಹಾಗೂ ಸಿಬ್ಬಂದಿ ಹಲ್ಲೆ ನಡೆಸಿದ ಪರಿಣಾಮ ಚಿಕಿತ್ಸೆ ಫಲಿಸದೇ ಯುವಕ ಸಾವನ್ನಪ್ಪಿದ್ದಾನೆ.
Advertisement
ರವಿತೇಜ ಮೃತ ಯುವಕ. ರವಿತೇಜ ಸೇರಿದಂತೆ ಆಂಧ್ರಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಯ ತಾಡೆಪಲ್ಲಿಗುಡೆಮ್‌ನ ಸ್ನೇಹಿತರ ಗುಂಪು ಹೊಸ ವರ್ಷದ ಸಂಭ್ರಮಾಚಾರಣೆಯ ಸಲುವಾಗಿ ಗೋವಾಗೆ ತೆರಳಿತ್ತು. ಸ್ನೇಹಿತರ ಗುಂಪಿನಲ್ಲಿದ್ದ ಮಹಿಳೆಯೊಬ್ಬರ ಜೊತೆ ರೆಸ್ಟೋರೆಂಟ್ ಮಾಲೀಕನ ಪುತ್ರ ಅನುಚಿತವಾಗಿ ವರ್ತಿಸಿದ್ದನ್ನು ರವಿತೇಜ ಪ್ರಶ್ನಿಸಿದ್ದಾನೆ. ಈ ವೇಳೆ ಜಗಳ ಶುರುವಾಗಿದೆ. ಬಳಿಕ ಜಗಳ ತಾರಕಕ್ಕೇರಿ ರೆಸ್ಟೋರೆಂಟ್ ಮಾಲೀಕನ ಪುತ್ರ ಹಾಗೂ ಸಿಬ್ಬಂದಿ ರವಿತೇಜನ ಮೇಲೆ ಹಲ್ಲೆ ನಡೆಸಿದ್ದಾರೆ. ಹಲ್ಲೆ ವೇಳೆ ರವಿತೇಜಗೆ ಗಂಭೀರ ಗಾಯಗಳಾಗಿತ್ತು. ಕೂಡಲೇ ಆತನನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ರವಿತೇಜ ಮೃತಪಟ್ಟಿದ್ದಾನೆ. ಇದನ್ನೂ ಓದಿ: ಕಾಂಗ್ರೆಸ್‌ನ ಪಾಪದ ಕೊಡ ತುಂಬಿದೆ, ದೇವರೇ ಶಿಕ್ಷೆ ಕೊಡ್ತಾನೆ: ಕುಮಾರಸ್ವಾಮಿ
Advertisement
Advertisement
ಘಟನೆಯ ಬಳಿಕ ತಾಡೆಪಲ್ಲಿಗುಡೆಂ ಶಾಸಕ ಬೋಳಿಸೆಟ್ಟಿ ಶ್ರೀನಿವಾಸ್ ಗೋವಾ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿ ಬಳಿಕ ವಿಶೇಷ ವಿಮಾನದ ಮೂಲಕ ಮೃತದೇಹವನ್ನು ಹುಟ್ಟೂರಿಗೆ ಸಾಗಿಸಲು ಅನುಕೂಲ ಮಾಡಿಕೊಟ್ಟರು. ತಾಡೆಪಲ್ಲಿಗುಡೆಂನಲ್ಲಿ ರವಿತೇಜ ಅಂತಿಮ ವಿಧಿವಿಧಾನಗಳನ್ನು ನೆರವೇರಿಸಲಾಗಿದೆ. ಇದನ್ನೂ ಓದಿ: ಡಿಕೆಶಿಗೂ ಶಾಕ್, ಪವರ್ ಶೇರ್ ಕುತೂಹಲಿಗಳಿಗೂ ಶಾಕ್ – ಸಿಎಂ ಡಿನ್ನರ್ ಸಭೆ ಇನ್‌ಸೈಡ್ ಸ್ಟೋರಿ
Advertisement