ಹೈದರಾಬಾದ್: ತಮ್ಮ ಹೊಲದ ಮೇಲೆ ಯಾರ ಕಣ್ಣು ಬೀಳಬಾರದು ಎಂದು ಬೆದರು ಬೊಂಬೆ ಹಾಕುವುದು ಸಾಮಾನ್ಯ. ಆದರೆ ಇಲ್ಲೊಬ್ಬ ರೈತ ತನ್ನ ಹೊಲದ ಮೇಲೆ ಯಾರ ಕಣ್ಣು ಬೀಳಬಾರದು ಎಂದು ಸನ್ನಿ ಲಿಯೋನ್ ಪೋಸ್ಟರ್ ಹಾಕಿ ಸುದ್ದಿಯಾಗಿದ್ದಾರೆ.
ಆಂಧ್ರ ಪ್ರದೇಶದ ನೆಲ್ಲೂರಿನಲ್ಲಿ ಚೆಂಚಿ ರೆಡ್ಡಿ ಎಂಬ ರೈತರೊಬ್ಬರು ಸನ್ನಿ ಲಿಯೋನ್ ಪೋಸ್ಟರ್ ನನ್ನು ಹಾಕಿದ್ದಾರೆ. ಸನ್ನಿ ಕೆಂಪು ಬಿಕಿನಿ ಹಾಕಿರುವ ಫೋಟೋವೊಂದಕ್ಕೆ ‘ಹೇ, ನನ್ನನ್ನು ಕಂಡು ಮರುಗಬೇಡ ಹಾಗೂ ಅಳಬೇಡ’ ಎಂದು ತೆಲುಗುವಿನಲ್ಲಿ ಬರೆದು ಪೋಸ್ಟರ್ ಹಾಕಿದ್ದಾರೆ.
Advertisement
Advertisement
ನನ್ನ 10 ಎಕರೆ ಜಮೀನಿನಲ್ಲಿ ಈ ವರ್ಷ ಅತ್ಯುತ್ತಮ ಬೆಳೆ ಬೆಳೆದಿದೆ. ಗ್ರಾಮಸ್ಥರು ನನ್ನ ಜಮೀನಿನ ಮೇಲೆ ಕಣ್ಣು ಹಾಕುತ್ತಿದ್ದಾರೆ. ಅವರ ಕೆಟ್ಟ ದೃಷ್ಟಿ ಬೀಳದಿರಲಿ ಎಂದು ನಾನು ಸನ್ನಿ ಲಿಯೋನ್ ಪೋಸ್ಟರ್ ಗಳನ್ನು ಹಾಕಲು ನಿರ್ಧರಿಸಿದೆ. ಈಗ ನನ್ನ ಈ ಉಪಾಯ ಯಶಸ್ವಿಯಾಗಿದ್ದು, ನನ್ನ ಜಮೀನಿನ ಮೇಲೆ ಈಗ ಯಾರು ಕಣ್ಣು ಹಾಕುವುದಿಲ್ಲ ಎಂದು ರೈತ ಚೆಂಚಿ ರೆಡ್ಡಿ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ್ದಾರೆ.
Advertisement
Advertisement
ಚೆಂಚಿ ರೆಡ್ಡಿ ತನ್ನ ಹೊಲದಲ್ಲಿ ಎಲೆಕೋಸು, ಹೂಕೋಸು ಹಾಗೂ ಮೆಣಸಿನಕಾಯಿಯನ್ನು ಬೆಳೆಯುತ್ತಿದ್ದಾರೆ. ಕಳೆದ ವರ್ಷ ನನ್ನ ಬೆಳೆಗಳೆಲ್ಲ ಹಾನಿಯಾಗಿತ್ತು. ಕೆಲವು ಬಾರಿ ಬೆಳೆಗಳು ಚೆನ್ನಾಗಿದ್ದರೆ, ಇನ್ನೂ ಕೆಲವು ಬಾರಿ ಅದು ಹಾನಿಯಾಗುತ್ತಿತ್ತು ಎಂದು ಚೆಂಚಿ ರೆಡ್ಡಿ ಹೇಳಿದ್ದಾರೆ. ಸದ್ಯ ಈ ಪೋಸ್ಟರ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಈ ಹಿಂದೆ 2016ರಲ್ಲಿ ಕೇರಳದ ಕೊಲ್ಲಂ ಜಿಲ್ಲೆಯಲ್ಲಿರುವ ಶ್ರೀ ನಾರಾಯಣ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಹೊಸ ಬ್ಯಾಚ್ ವಿದ್ಯಾರ್ಥಿಗಳನ್ನು ಸ್ವಾಗತ ಮಾಡಲು ಸನ್ನಿ ಲಿಯೋನ್ ಹಾಗೂ ಮಿಯಾ ಕಲೀಫಾ ಪೋಸ್ಟರ್ ನನ್ನು ಹಾಕಿ ಅದಕ್ಕೆ ‘ವೆಲ್‍ಕಮ್ ಫ್ರೆಶರ್’ ಎಂದು ಮಲೆಯಾಳಂನಲ್ಲಿ ಬರೆದು ಹಾಕಿದ್ದರು.