ಹೈದರಾಬಾದ್: ಆಫ್‍ಲೈನ್ ತರಗತಿಗೆ ಹಾಜರಾಗುವಂತೆ ಪೋಷಕರು ಒತ್ತಾಯಿಸಿದ್ದಕ್ಕೆ ಹುಡುಗಿಯೊಬ್ಬಳು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ.
ಆಂಧ್ರಪ್ರದೇಶದ ವಿಜಯನಗರದ ರಾಜೀವ್ ಗಾಂಧಿ ಯೂನಿವರ್ಸಿಟಿ ಆಫ್ ನಾಲೆಡ್ಜ್ ಟೆಕ್ನಾಲಜೀಸ್‍ನಲ್ಲಿ (ಐಐಐಟಿ-ಶ್ರೀಕಾಕುಲಂ) ಓದುತ್ತಿದ್ದ ಹುಡುಗಿ ಫೆಬ್ರವರಿ 16 ರಂದು ತನ್ನ ಹಾಸ್ಟೆಲ್ ಕೋಣೆಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಬಾಲಕಿ ಕೊಠಡಿ ಒಳಗಿನಿಂದ ಬಾಗಿಲು ಲಾಕ್ ಆಗಿದ್ದನ್ನು ಗಮನಿಸಿದ ಕೆಲವು ಹುಡುಗಿಯರು ನಂತರ ಕಾಲೇಜು ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.
Advertisement
Advertisement
ಕಾಲೇಜಿನ ಅಧಿಕಾರಿಗಳು ಬಾಗಿಲು ಒಡೆದು ನೋಡಿದಾಗ ಹುಡುಗಿ ನೇಣಿಗೆ ಶರಣಾಗಿರುವುದು ಕಂಡು ಬಂದಿದೆ. ಆಕೆಯ ಇಚ್ಛೆಯ ವಿರುದ್ಧ ಬಾಲಕಿಗೆ ಆಫ್‍ಲೈನ್ ತರಗತಿಗೆ ಹಾಜರಾಗುವಂತೆ ಪೋಷಕರು ಒತ್ತಾಯಿಸಿದ್ದರಿಂದ ಹುಡುಗಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದು ಬಂದಿದೆ. ಇದನ್ನೂ ಓದಿ: ನಮಗೆ ಆಜಾದಿ ಬೇಕು ಅಂತಾ ಘೋಷಣೆ ಕೂಗ್ತಿಯಾ? ನಿನ್ನನ್ನು ಅಟ್ಟಾಡಿಸಿ ಹೊಡೀತಿವಿ: ಸೀಮಾ ಇನಾಂದಾರ್‌ಗೆ ಜೀವ ಬೆದರಿಕೆ
Advertisement
ಮೃತ ದುರ್ದೈವಿಯನ್ನು ಕೊಂಡಪಲ್ಲಿ ಮನೀಶಾ ಅಂಜು ಎಂದು ಗುರುತಿಸಲಾಗಿದ್ದು, ಈಕೆ ವಿಜಯನಗರದ ನೆಲ್ಲಿಮಾರ್ಲ ನಿವಾಸಿಯಾಗಿದ್ದಾಳೆ. ಐಐಟಿ-ಶ್ರೀಕಾಕುಲಂನ ಮೊದಲ ವರ್ಷದ ವಿದ್ಯಾರ್ಥಿನಿಯಾಗಿದ್ದಳು. ಶೈಕ್ಷಣಿಕ ವರ್ಷ ಪ್ರಾರಂಭವಾದಾಗಿನಿಂದ ಆನ್‍ಲೈನ್ ಕ್ಲಾಸ್‍ಗೆ ಹಾಜರಾಗುತ್ತಿದ್ದಳು. ಆದರೆ ಕೋವಿಡ್-19 ಪ್ರಕರಣಗಳು ಕಡಿಮೆಯಾದ ಬಳಿಕ, ಕಾಲೇಜು ಅಧಿಕಾರಿಗಳು ಆನ್‍ಲೈನ್ ಕ್ಲಾಸ್ ಮುಂದುವರಿಸಬಹುದು ಅಥವಾ ಆಫ್‍ಲೈನ್ ಕ್ಲಾಸ್‍ಗೆ ಬರಬಹುದು ಎಂದು ವಿದ್ಯಾರ್ಥಿಗಳಿಗೆ ತಿಳಿಸಿದ್ದರು. ಹೀಗಾಗಿ ಬಾಲಕಿ ಆನ್‍ಲೈನ್ ಕ್ಲಾಸ್ ಮುಂದುವರೆಸಲು ಬಯಸಿದರೂ, ಆಕೆಯ ಪೋಷಕರು ಆಫ್‍ಲೈನ್ ಕ್ಲಾಸ್‍ಗೆ ಹಾಜರಾಗುವಂತೆ ಒತ್ತಾಯಿಸಿದ್ದಾರೆ.
Advertisement
ಇದರಿಂದ ಪೋಷಕರ ವಿರುದ್ಧ ಕೋಪಗೊಂಡ ಹುಡುಗಿ ತನ್ನ ಮೊಬೈಲ್ ಫೋನ್ ಅನ್ನು ಬಸ್ಸಿನಲ್ಲಿ ಎಸೆದಿದ್ದಳು. ಹೀಗಾಗಿ ಮರುದಿನ ಪೋಷಕರು ಆಕೆಗೆ ಹೊಸ ಫೋನ್ ನೀಡಲು ಖರೀದಿದ್ದರು. ಆದರೆ ಅಷ್ಟೋತ್ತಿಗೆ ಹುಡುಗಿ ನೇಣಿಗೆ ಶರಣಾಗಿದ್ದಾಳೆ. ಸದ್ಯ ಈ ಸಂಬಂಧ ಅಪರಾಧ ಪ್ರಕ್ರಿಯಾ ಸಂಹಿತೆಯ (ಸಿಆರ್‍ಪಿಸಿ) ಕಲಂ 174 (ಅನುಮಾನಾಸ್ಪದ ಸಾವು) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಎಚ್ಚರ್ಲ ಸಬ್‌ಇನ್ಸ್‌ಪೆಕ್ಟರ್ ಕೆ. ರಾಮು ತಿಳಿಸಿದ್ದಾರೆ. ಇದನ್ನೂ ಓದಿ: ಮುಸ್ಲಿಂ ವೇಶ ಧರಿಸಿ ಅನುಮಾಸ್ಪದ ರೀತಿಯಲ್ಲಿ ಓಡಾಟ: ಐವರನ್ನು ವಶಕ್ಕೆ ಪಡೆದ ಪೊಲೀಸರು