ಲಂಡನ್: ಲಾರ್ಡ್ಸ್ ಅಂಗಳದಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ದ್ವಿತೀಯ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‍ನಲ್ಲಿ ಭಾರತ 107 ರನ್‍ಗಳಿಗೆ ಆಲೌಟ್ ಆಗುವ ಮೂಲಕ ಎರಡನೇ ದಿನದಾಟ ಕೊನೆಗೊಂಡಿದೆ.
ಮಳೆಯಿಂದಾಗಿ ಗುರುವಾರ ಮೊದಲ ದಿನದ ಆಟ ರದ್ದಾಗಿತ್ತು. ಎರಡನೇ ದಿನ ಟಾಸ್ ಗೆದ್ದ ಆಂಗ್ಲ ನಾಯಕ ಜೋ ರೂಟ್, ಭಾರತ ತಂಡವನ್ನು ಬ್ಯಾಟಿಂಗ್‍ಗೆ ಆಹ್ವಾನಿಸಿದರು. ಆದರೆ ಆರಂಭದಲ್ಲೇ ವೇಗಿ ಆ್ಯಂಡರ್ಸನ್ ದಾಳಿಗೆ ಭಾರತ ತತ್ತರಿಸಿತ್ತು. 35.2 ಓವರ್ ಆಡಿದ ಟೀಂ ಇಂಡಿಯಾ 107 ರನ್‍ಗಳ ಅತ್ಯಲ್ಪ ಮೊತ್ತಕ್ಕೆ ಆಲೌಟ್ ಆಯಿತು.
Advertisement
Only 35.2 overs of play were possible, but what a 35.2 overs for you if you're an England fan, a Jimmy Anderson swing masterclass helping dismiss India for 107.#ENGvIND REPORT ➡️ https://t.co/3cAhSjw1Ws pic.twitter.com/5Db1zVrnJs
— ICC (@ICC) August 10, 2018
Advertisement
ಆರಂಭಿಕರಾಗಿ ಕಣಕ್ಕೆ ಇಳಿದ ಮುರಳಿ ವಿಜಯ್ ಶೂನ್ಯಕ್ಕೆ ಔಟಾಗಿ ಮೊದಲ ಆಘಾತ ಎದುರಿಸಿದರೆ, ಈ ಪಂದ್ಯದಲ್ಲಿ ಬ್ಯಾಟಿಂಗ್ ಮುಂಬಡ್ತಿ ಪಡೆದು ಕಣಕ್ಕೆ ಇಳಿದ ಕೆಎಲ್ ರಾಹುಲ್ 8 ರನ್ ಗಳಿಸಿ ನಿರ್ಗಮಿಸಿ ನಿರಾಸೆ ಮೂಡಿಸಿದರು. ಈ ವೇಳೆ ಪಂದ್ಯಕ್ಕೆ ಮಳೆ ಅಡ್ಡಿಪಡಿಸಿದ ಕಾರಣ ಪಂದ್ಯ ಊಟದ ವಿರಾಮದ ಬಳಿಕ ಆರಂಭವಾಯಿತು. ಬಳಿಕ ಚೇತೇಶ್ವರ ಪೂಜಾರ ಬಹುಬೇಗ ವಿಕೆಟ್ ಒಪ್ಪಿದರು. ಈ ವೇಳೆ ಭಾರತ 15 ರನ್ ಗೆ 3 ವಿಕೆಟ್ ಕಳೆದು ಕೊಂಡು ಸಂಕಷ್ಟ ಎದುರಿಸಿತ್ತು. ಮಳೆಯ ಕಣ್ಣಾಮುಚ್ಚಲೆಯೊಂದಿಗೆ ಮತ್ತೆ ಸ್ಥಗಿತಗೊಂಡು ಆರಂಭವಾದ ಪಂದ್ಯದಲ್ಲಿ ಕೊಹ್ಲಿ (23), ಹಾರ್ದಿಕ್ ಪಾಂಡ್ಯ (11), ದಿನೇಶ್ ಕಾರ್ತಿಕ್ (1), ರಹಾನೆ, ಕುಲ್ ದೀಪ್ ಯಾದವ್ ಸೇರಿದಂತೆ ಆಟಗಾರರು ಬಂದ ವೇಗದಲ್ಲೇ ಹಿಂದಿರುಗಿದರು.
Advertisement
Washed out opening days at Lord's in Test cricket…
1954: Eng v Pak (first three days washed out!) Drawn
1964: #Ashes match (first two days washed out!) Drawn
1978: Eng v Pak (Eng won)
1997: Ashes match Drawn
2001: Eng v Pak (Eng won)
2018: #EngvInd
— Mohandas Menon (@mohanstatsman) August 9, 2018
Advertisement
ಈ ವೇಳೆ ತಂಡಕ್ಕೆ ಆಸರೆಯಾದ ರವಿಚಂದ್ರನ್ ಅಶ್ವಿನ್ ಉಪಯುಕ್ತ 29 ರನ್ ಕಾಣಿಕೆ ನೀಡಿದರು. ಬಳಿಕ ಬಂದ ಮಹಮ್ಮದ್ ಶಮಿ 10 ರನ್ ಗಳಿಸಿ ಅಜೇಯರಾಗಿ ಉಳಿದರೆ ಇಶಾಂತ್ ಶರ್ಮಾ ಶೂನ್ಯಕ್ಕೆ ಔಟಾಗುವುದರೊಂದಿಗೆ ಟೀಂ ಇಂಡಿಯಾ 107 ರನ್ ಗೆ ಸರ್ವಪತನ ಕಂಡಿತು.
ಆ್ಯಂಡರ್ ಸನ್ ದಾಖಲೆ:
ಇಂಗ್ಲೆಂಡ್ ಪರ ಮಾರಕ ದಾಳಿ ನಡೆಸಿದ ಆ್ಯಂಡರ್ ಸನ್ 20 ರನ್ ನೀಡಿ 5 ವಿಕೆಟ್ ಪಡೆದರು. ಈ ಮೂಲಕ ಭಾರತದ ವಿರುದ್ಧ ಟೆಸ್ಟ್ ಪಂದ್ಯದಲ್ಲಿ ಅತೀ ಹೆಚ್ಚು ವಿಕೆಟ್ ಪಡೆದ ಆಟಗಾರ ಎನಿಸಿಕೊಂಡರು. ಈ ಪಂದ್ಯದಲ್ಲಿ ವೋಕ್ಸ್ 2, ಕುರ್ರಾನ್ ಹಾಗೂ ಬೋರ್ಡ್ ತಲಾ 1 ವಿಕೆಟ್ ಪಡೆದು ಮಿಂಚಿದರು. ಭಾರತದ ಪರ ಈ ಹಿಂದೆ ಹೆಚ್ಚು ವಿಕೆಟ್ ಪಡೆದ ಆಟಗಾರ ಎಂಬ ಹೆಗ್ಗಳಿಕೆಗೆ ಪಾಕಿಸ್ತಾನದ ಇಮ್ರಾನ್ ಖಾನ್ (95) ಪಾತ್ರರಾಗಿದ್ದರು. ನಂತರದ ಸ್ಥಾನದಲ್ಲಿ ವೆಸ್ಟ್ ಇಂಡೀಸ್ ನ ಮಾರ್ಷಲ್ 76 ವಿಕೆಟ್ ಗಳಿಸಿ ಸ್ಥಾನ ಪಡೆದಿದ್ದರು.
Indian batsmen run out in Tests since 2016:
Pujara – 5 times
All others – 5 times
1 each for Vijay, Rahul, Pandya, Karthik, Nair.#EngvInd
— Bharath Seervi (@SeerviBharath) August 10, 2018