ಕನ್ನಡದ ನಿರೂಪಕಿ ಅಪರ್ಣಾ (Aparna) ನಿಧನದ ಬಗ್ಗೆ ನಟ ಸೃಜನ್ ಲೋಕೇಶ್ ಸಂತಾಪ ಸೂಚಿಸಿದ್ದಾರೆ. ನಟಿಯ ಅಂತಿಮ ದರ್ಶನದ ಬಳಿಕ ಮಾಧ್ಯಮಕ್ಕೆ ಪ್ರತಿಕ್ರಿಯಿಸಿ, ಅಪರ್ಣಾ ಇನ್ನಿಲ್ಲ ಅನ್ನೋ ನೋವು ಯಾವಾಗಲೂ ಕಾಡುತ್ತಲೇ ಇರುತ್ತದೆ ಎಂದು ಸೃಜನ್ (Srujan Lokesh) ಮಾತನಾಡಿದ್ದಾರೆ.
ಅಪರ್ಣಾ ನಿಧನ ನಿಜಕ್ಕೂ ಬೇಸರ ಆಗಿದೆ. ಪುಟ್ಟಣ್ಣ ಕಣಗಲ್ ನಿರ್ದೇಶನದಲ್ಲಿ ಅಪರ್ಣಾ ನಟಿಸಿದ್ದಾರೆ. ನಾವು ಯಾವಾಗಲೂ ಅವರಿಗೆ ರೇಗಿಸುತ್ತಿದ್ವಿ. ಊರು ಹುಟ್ಟೋಕ್ಕೂ ಮುಂಚೆ ಹುಟ್ಟಿದವರು ನೀವು ಅಂತ. ಅಂದಿನ ಕಾಲದಿಂದಲೂ ಆ್ಯಕ್ಟಿಂಗ್ ಮಾಡ್ತಿದ್ದಾರೆ. ಎಷ್ಟೊಂದು ವರ್ಷಗಳ ಸಾಧನೆ ಅವರದ್ದು. ನಮ್ಮ ಚಿತ್ರರಂಗದಲ್ಲಿ ಲೆಜೆಂಡರಿ ಕಲಾವಿದೆ ಅಪರ್ಣಾ ಎಂದು ಸೃಜನ್ ಲೋಕೇಶ್ ಭಾವುಕರಾಗಿದ್ದಾರೆ. ಇದನ್ನೂ ಓದಿ:ಹೂವು, ಹಾರ ತರದಂತೆ ಮನವಿ ಮಾಡಿದ ಅಪರ್ಣಾ ಪತಿ ನಾಗರಾಜ್ ವಸ್ತಾರೆ
ಮೆಟ್ರೋದಲ್ಲೂ, ಫೋನ್‌ನಲ್ಲೂ ಎಲ್ಲಾ ಕಡೆ ಅಪರ್ಣಾದೇ ವಾಯ್ಸ್ ಕೇಳಿಸುತ್ತೆ. ಅವರು ಯಾವಾಗಲೂ ನಮ್ಮ ಜೊತೆಯೇ ಇರುತ್ತಾರೆ. ಅವರು ಎಂದಿಗೂ ಲೆಜೆಂಡಿರಿ ಅಭಿನೇತ್ರಿ, ನಿರೂಪಕಿ ಎಂದಿದ್ದಾರೆ. ನಮಗೆಲ್ಲಾ ಮಾರ್ಗದರ್ಶನ ಕೊಟ್ಟವರು. ನಾವು ಅವರನ್ನು ಮಿಸ್ ಮಾಡಿಕೊಳ್ಳುತ್ತೇನೆ ಸೃಜನ್ ಭಾವುಕರಾಗಿದ್ದಾರೆ.
ಕಳೆದ ವಾರ ಅಷ್ಟೇ ಅವರ ಜೊತೆ ಮಾತನಾಡಿದ್ದೇ. ನಾನು ಮಜಾ ಟಾಕೀಸ್ ನೋಡಿದಾಗಲೆಲ್ಲಾ ನಾನು ಖುಷಿಯಾಗಿ ಇರುತ್ತೇನೆ ಎಂದು ಅಪರ್ಣಾ ನನ್ನ ಬಳಿ ಹೇಳಿಕೊಂಡಿದ್ದರು. ಅವರು ಇನ್ನಿಲ್ಲ ಅನ್ನೋ ನೋವು ಯಾವಾಗಲೂ ನಮ್ಮನ್ನು ಕಾಡುತ್ತಲೇ ಇರುತ್ತದೆ ಎಂದು ಸೃಜನ್ ಲೋಕೇಶ್ ಮಾತನಾಡಿದ್ದಾರೆ.
ಅಂದಹಾಗೆ, ಬಹಳ ದಿನಗಳಿಂದಲೂ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಅಪರ್ಣಾ ಅವರು ಜು.11ರಂದು ಬನಶಂಕರಿ 2ನೇ ಹಂತದಲ್ಲಿರುವ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ. ಬೆಂಗಳೂರು ದೂರದರ್ಶನದಲ್ಲಿ ಸೀನಿಯರ್ ಗ್ರೇಡ್ ನಿರೂಪಕಿಯಾಗಿದ್ದ ಅಪರ್ಣಾ, ಆಕಾಶವಾಣಿ ನಿರೂಪಕಿಯಾಗಿ ಕೆಲಸ ನಿರ್ವಹಿಸಿದ್ದರು. ಅಲ್ಲದೇ ಮಜಾ ಟಾಕೀಸ್ ಕಾರ್ಯಕ್ರಮದಲ್ಲೂ ಅಭಿನಯಿಸಿದ್ದರು. ಕನ್ನಡದ ಯಶಸ್ವಿ ನಿರೂಪಕಿಯಾಗಿ 3 ದಶಕಗಳನ್ನು ಪೂರೈಸಿದ್ದಾರೆ.