ಸ್ಯಾಂಡಲ್‌ವುಡ್‌ನ ಖ್ಯಾತ ನಿರೂಪಕಿ ಅನುಶ್ರೀಗೆ ಹಸೆಮಣೆ ಏರೋದಕ್ಕೆ ಸಜ್ಜಾಗಿದ್ದಾರೆ. ಮದುವೆಯಾಗಲೂ ಇದೀಗ ಮನಸ್ಸು ಮಾಡಿದ್ದಾರೆ. ಹಾಗಂತ ಸ್ವತಃ ಅನುಶ್ರೀ ಅವರೇ ಹೇಳಿಕೊಂಡಿದ್ದಾರೆ.


ಅನುಶ್ರೀ ಅವರಿಗೆ ಮದುವೆಯಾಗಲು ಮನಸ್ಸು ಮಾಡಿದ್ದಾರೆ. ಮದುವೆ ಆಗುವುದಕ್ಕೆ ಆಸೆಯಾಗುತ್ತಿದೆ ಅಂತೆ ಹಾಗಂತ ಸ್ವತಃ ತಮ್ಮ ಮನದಾಳದ ಮಾತನ್ನ ಖಾಸಗಿ ಶೋವೊಂದರಲ್ಲಿ ಅನುಶ್ರೀ ಹೇಳಿಕೊಂಡಿದ್ದಾರೆ. ಖಾಸಗಿ ವಾಹಿನಿವೊಂದರಲ್ಲಿ ಜೋಡಿಗಳ ರಿಯಾಲಿಟಿ ಶೋ ನಡೆಯುತ್ತಿದ್ದು, ಆ ಜೋಡಿಗಳ ಪ್ರೀತಿ, ಬಾಂಧವ್ಯ ನೋಡಿ ಶೋನಲ್ಲಿ ತಾನು ಕೂಡ ಮದುವೆಯಾಗಬೇಕು ಅಂತಾ ಆಸೆಯಾಗುತ್ತದೆ ಅಂತಾ ಅನುಶ್ರೀ ಮುಕ್ತವಾಗಿ ಹಂಚಿಕೊಂಡಿದ್ದಾರೆ.

ಹಸೆಮಣೆ ಏರೋದಕ್ಕೆ ಮನಸ್ಸು ಮಾಡಿರುವ ಈ ನಟಿಗೆ ಈಗಾಗಲೇ ಹುಡುಗ ಸಿಕ್ಕಿದ್ದಾನ, ಇಲ್ವಾ ಹಾಗೇ ಮಾತಿಗೆ ಹೇಳಿರೋದಾ ಅಂತಾ ಕಾದುನೋಡಬೇಕಿದೆ. ಒಟ್ನಲ್ಲಿ ನಿರೂಪಕಿ ಅನುಶ್ರೀ ಅವರು ಮದುವೆಯತ್ತ ಮನಸ್ಸು ಮಾಡಿರೋದಕ್ಕೆ ಪಡ್ಡೆಹುಡುಗರು ಖುಷಿಯಾಗಿದ್ದಾರೆ. ಸದ್ಯದಲ್ಲೇ ಅಭಿಮಾನಿಗಳಿಗೆ ಅನುಶ್ರೀ ಗುಡ್ ನ್ಯೂಸ್ ಕೊಡತ್ತಾರಾ ಅಂತಾ ಕಾದುನೋಡಬೇಕಿದೆ.

