ಸ್ಯಾಂಡಲ್‌ವುಡ್‌ನ (Sandalwood) ಪಟಪಟ ಮಾತನಾಡೋ ಸುಂದರಿ ನಿರೂಪಕಿ ಅನುಶ್ರೀ (Anchor Anushree) ಅವರು ಸದಾ ಅವರಿಗೆ ಮದುವೆ (Wedding) ಬಗ್ಗೆಯೇ ಪ್ರಶ್ನೆ ಎದುರಾಗುತ್ತದೆ. ಇದೀಗ ಫ್ಯಾನ್ಸ್, ಹೊಸ ವಿಚಾರಕ್ಕೆ ಅನುಶ್ರೀ ಹಿಂದೆ ಬಿದ್ದಿದ್ದಾರೆ. ಮದುವೆಯಲ್ಲ, ಬದಲಾಗಿ ಹೊಸ ವಿಚಾರವಾಗಿ ಅನುಶ್ರೀಗೆ ಬೇಡಿಕೆ ಇಟ್ಟಿದ್ದಾರೆ. ಇದನ್ನೂ ಓದಿ:ದಕ್ಷಿಣದ ಸಿನಿಮಾಗಳಲ್ಲಿ ಸಂಜಯ್ ದತ್ ಬ್ಯುಸಿ
ರಿಯಾಲಿಟಿ ಶೋಗಳ ನಿರೂಪಣೆ ಮತ್ತು ಕನ್ನಡ ಸಿನಿಮಾಗಳ ಪ್ರಿ ರಿಲೀಸ್ ಈವೆಂಟ್‌ನ ನಿರೂಪಣೆ ಅಂತಾ ಸದಾ ಒಂದಲ್ಲಾ ಒಂದು ಕಾರ್ಯಕ್ರಮಗಳ ಮೂಲಕ ಮಾತಿನ ಮಲ್ಲಿ ಅನುಶ್ರೀ ಸದ್ದು ಮಾಡುತ್ತಾರೆ. ಇದೀಗ ಇತ್ತೀಚಿಗೆ ತಮ್ಮ ಖಾಸಗಿ ಇನ್ಸ್ಟಾಗ್ರಾಂ ಖಾತೆಯಲ್ಲಿ ಲೈವ್ ಬಂದ ನಿರೂಪಕಿಗೆ ಅಭಿಮಾನಿಗಳಿಂದ ಪ್ರಶ್ನೆಯೊಂದು ಎದುರಾಗಿದೆ.
ಸದಾ ಮದುವೆ ಯಾವಾಗ ಎಂದು ಕೇಳುತ್ತಿದ್ದ ಅಭಿಮಾನಿಗಳು ಈಗ ನೀವು ಯಾವಾಗ ಮತ್ತೆ ಸಿನಿಮಾ (Films) ಮಾಡ್ತೀರಾ ಅಂತಾ ಪ್ರಶ್ನೆ ಮಾಡಿದ್ದಾರೆ. ಅದಕ್ಕೆ ನಟಿ ಪ್ರತಿಕ್ರಿಯಿಸಿ, ಒಳ್ಳೆಯ ಕಥೆ ಮತ್ತು ತಂಡ ಬಂದಾಗ ಮತ್ತೆ ಸಿನಿಮಾ ಮಾಡ್ತೀನಿ ಎಂದು ಖುಷಿಯಿಂದ ಅಭಿಮಾನಿಯ ಪ್ರಶ್ನೆಗೆ ಉತ್ತರಿಸಿದ್ದಾರೆ.
ಇದೇ ರೀತಿ ಪ್ರತಿಸಲವೂ ಅನುಶ್ರೀಯವರಿಗೆ ಎದುರಾಗುವ ಪ್ರಶ್ನೆಯೆಂದರೆ ಅದು ಮದುವೆಯ ಕುರಿತು. ಮದುವೆಯ ಪ್ರಶ್ನೆ ನಂ.1 ಸ್ಥಾನ ಪಡೆದುಕೊಂಡರೆ, 2ನೇ ಪ್ರಶ್ನೆ ಇರುವುದು ಸಿನಿಮಾ ಕುರಿತು. ಇದಾಗಲೇ ನಟಿ ತಮ್ಮ ಮದುವೆಯ ಬಗ್ಗೆ ಸಾಕಷ್ಟು ಬಾರಿ ಹೇಳಿಕೊಂಡಿದ್ದಾರೆ. ನಟಿ ಮದುವೆ ಬಗ್ಗೆ ಕೇಳಿದ್ದಕ್ಕೆ ಕೊರಗಜ್ಜನ ಮೇಲೆ ಬಿಡ್ತೀನಿ ಎಂದ ನಿರೂಪಕಿ ಅನುಶ್ರೀ ಇನ್ನಾದರೂ ತಮ್ಮ ಮದುವೆಯ ಬಗ್ಗೆ ಪ್ರಶ್ನೆ ಮಾಡೋದನ್ನು ನಿಲ್ಲಿಸಿ ಎನ್ನೋ ಅರ್ಥದಲ್ಲಿ ಹೇಳಿದ್ದರು. ಮದುವೆ ಮಾಡಿಕೊಳ್ಳುವ ತುಂಬಾ ಸಮಯವಿದೆ. ಮೊದಲು ಕೆಲಸ ಮಾಡೋಣ ಎಂದಿದ್ದ ಅವರು, ಮದುವೆ ಅನ್ನೋದು ಒಂದು ಸುಂದರ ಅನುಭವ. ಯಾರ್ಯಾರನ್ನೋ ಮದುವೆ ಮಾಡಿಕೊಳ್ಳಲು ಆಗಲ್ಲ ಎಂದು ಈ ಹಿಂದೆ ಹೇಳಿದ್ದರು.