ಮಾತಿನ ಮಲ್ಲಿ ಮದುವೆಗೆ ಪ್ರತಿಭಟನೆ, ಬೆಣ್ಣೆನಗರಿ ಬಾಯ್ಸ್ ಆಗ್ರಹಕ್ಕೆ ಒಪ್ಪಿಕೊಂಡ್ರಾ ಅನುಶ್ರೀ?

Public TV
1 Min Read
ANUSHREE 3

ಲ್ರೂ ಮದುವೆ ಆಗ್ತಿದ್ದಾರೆ.ಆದರೆ ಅನುಶ್ರೀಅಕ್ಕ ಮಾತ್ರಾ ಮದುವೆಯಾಗ್ತಿಲ್ಲ(Wedding)  ಯಾಕೆ? ಆ್ಯಂಕರ್ ಅನುಶ್ರೀ (Anchor Anushree) ಮದುವೆ ಆಗ್ಲೇಬೇಕು ಹೀಗಂತ ಹುಡುಗರು ಪ್ರತಿಭಟನೆ ಮಾಡಿದ್ದಾರೆ. ಹುಡುಗರ ಆಗ್ರಹಕ್ಕೆ ಮಣಿದ ಅನುಶ್ರೀ ಕೊನೆಗೂ ಮದುವೆಯಾಗಲು ಒಪ್ಪಿಕೊಂಡಿದ್ದಾರೆ. ಅಷ್ಟಕ್ಕೂ ಈ ಹುಡುಗರು ಯಾರು? ಈ ಘಟನೆ ನಡೆದಿದ್ದಾದ್ರೂ ಎಲ್ಲಿ?

anushree

ಆ್ಯಂಕರ್ ಅನುಶ್ರೀ ಮದುವೆ ವಿಚಾರವಾಗಿ ಆಗಾಗ ಪ್ರಶ್ನೆ ಬರುತ್ತಾನೆ ಇರುತ್ತೆ. ಆಗ್ತೀನಿ ಆಗ್ತೀನಿ ಅಂತಾನೇ ಕಾಲ ದೂಡ್ತಿರೋ ಅನುಶ್ರೀ ಮೇಲೆ ಇದೀಗ ದಾವಣೆಗೆರೆ ಹುಡುಗರಂತೂ ಪ್ರತಿಭಟನೆಗೆ ಇಳಿದುಬಿಟ್ಟಿದ್ದಾರೆ. ಜಾತ್ರೆ ಕಲ್ಯಾಣೋತ್ಸವ ಸಮಾರಂಭದಲ್ಲಿ ದಾಖಲೆಯ ಪುಟ ಸೇರುವಂಥಹ ಬೆಣ್ಣೆದೋಸೆ ಹಿಡಿದು ಬಂದ ಹುಡುಗರು ವಿನೂತನವಾಗಿ ಪ್ರತಿಭಟಿಸಿದ್ದಾರೆ. ಇದನ್ನೂ ಓದಿ:ಟೈಗರ್ ಶ್ರಾಫ್ ಜೊತೆ ಬ್ರೇಕಪ್? ಹೊಸ ಬಾಯ್‌ಫ್ರೆಂಡ್ ಬಗ್ಗೆ ಬಾಯ್ಬಿಟ್ಟ ದಿಶಾ

anushree 2

ದಾವಣಗೆರೆಯಲ್ಲಿ ಹುಡುಗರು ಬೆಣ್ಣೆದೋಸೆ ಹೊತ್ಕೊಂಡು ಬಂದು ಸೀರಿಯಲ್ ತಾರೆಯರಿಗೆ ತಿನ್ನಿಸಿದ್ದಾರೆ. ಜೀ ಸೀರಿಯಲ್‌ನಲ್ಲಿ ಮದುವೆ ರ‍್ವ ನಡೆಯುತ್ತಿದೆ. ಆದರೆ ಅನುಶ್ರೀಗೆ ಮಾತ್ರಾ ಮದುವೆಯಾಗ್ತಿಲ್ಲ ಅನ್ನೋದು ಅನುಶ್ರೀ ಅಭಿಮಾನಿಗಳ ಕೊರಗು. ಹೀಗಾಗಿ ದಾವಣೆಗೆರೆ ಬಾಯ್ಸ್ ವಿಡಂಬನಾತ್ಮಕವಾಗಿ ಪ್ರತಿಭಟಸಿದ್ದು.

ಅಷ್ಟಕ್ಕೂ ಅನುಶ್ರೀಗೆ ಮದುಯಾಗೋಕೆ ಟೈಂ ಸಿಕ್ತಿಲ್ವಂತೆ. ಮಾತಿನ ಪಟಾಕಿ ಅನುಶ್ರೀ ಮದುವೆ ವಿಚಾರವಾಗಿ ಇಲ್ಲಸಲ್ಲದ ವದಂತಿ ಹಬ್ಬುತ್ತಲೇ ಇರುತ್ತೆ. ಹೀಗಾಗಿ ಅನುಶ್ರೀ ಟ್ರೋಲಿಗರಿಗೆ ಮಾತಲ್ಲೇ ತಿವಿದಿದ್ದಾರೆ. ಸದ್ಯಕ್ಕೆ ಮದುವೆಗೆ ಅನುಶ್ರೀ ನೋ ಎಂದಿದ್ದಾರೆ. ಒಳ್ಳೆಯ ವರ ಸಿಗೋವವರೆಗೂ ಎಲ್ಲಾ ಕೊರಗಜ್ಜನ ದಯೆ ಅಂತಾ ಮೆತ್ತಗೆ ಜಾರಿಕೊಂಡಿದ್ದಾರೆ. ಟೋಟಲಿ ಅನುಶ್ರೀ ಅಭಿಮಾನಿಗಳ ಸಂಘದ ವಿನೂತನ ಪ್ರತಿಭಟನೆ ನೋಡಲು ರಂಜನೀಯವಾಗಿದೆ. ಅನುಶ್ರೀ ಕರ‍್ಯಕ್ರಮವೊಂದಕ್ಕೆ ಹಾಜರಿ ಹಾಕ್ತಾರೆ ಅಂದರೆ ಅಲ್ಲಿ ಆಕೆಯ ಮದುವೆ ಪ್ರಸ್ತಾಪ ಇದ್ದೆ ಇರುತ್ತೆ. ಗಂಡ್ ಹೈಕ್ಳ ನೋವಿಗೆ ಅನುಶ್ರೀ ಮುಲಾಮು ಹಚ್ತಾರಾ ಅಂತಾ ಮುಂದಿನ ದಿನಗಳವರೆಗೂ ಕಾದುನೋಡಬೇಕಿದೆ.

Share This Article