– ಅನುಶ್ರೀಗಾಗಿ ಬಿರಿಯಾನಿ, ಫಿಶ್ ಫ್ರೈ ಮಾಡ್ತಾರಂತೆ ಪತಿ ರೋಷನ್
ನಟಿ ನಿರೂಪಕಿ, ಮಾತಿನ ಮಲ್ಲಿ ಅನುಶ್ರೀ (Anchor Anushree) ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಅನುಶ್ರೀ ಮದುವೆಯಾದ ಹುಡುಗ ರೋಷನ್ ಬಗ್ಗೆ ಈ ಹಿಂದೆ ಸಾಕಷ್ಟು ಸುದ್ದಿಗಳು ವೈರಲ್ ಆಗಿದ್ದವು. ಅದರಲ್ಲಿ ಪ್ರಮುಖವಾಗಿ ನಟಿ ಅನುಶ್ರೀ ಮದುವೆಯಾಗಿರುವ ರೋಷನ್ ನೂರಾರು ಕೋಟಿಯ ಒಡೆಯ. ದೊಡ್ಡ ಬ್ಯುಸಿನೆಸ್ ಮ್ಯಾನ್ ಎಂದೆಲ್ಲ ಸುದ್ದಿಯಾಗಿತ್ತು. ಈ ಬಗ್ಗೆ ಅನುಶ್ರಿಜ ಹಾಗೂ ರೋಷನ್ ಕ್ಲ್ಯಾರಿಟಿ ಕೊಟ್ಟಿದ್ದಾರೆ.
ಇಂದು ಆ.28 ರಂದು ಮದುವೆ ಬಳಿಕ ನವಜೋಡಿ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದೆ. ಈ ವೇಳೆ 300 ಕೋಟಿ, 600 ಕೋಟಿ ಒಡೆಯ ರೋಷನ್ ಅನ್ನೋ ವಿಚಾರದ ಬಗ್ಗೆ ಕ್ಲ್ಯಾರಿಟಿ ಕೊಟ್ಟಿದ್ದಾರೆ. ರೋಷನ್ ಅವರು ಐಟಿ ಉದ್ಯೋಗಿಯಾಗಿದ್ದು, ಸಾಮಾನ್ಯ ಕುಟುಂಬದಿಂದ ಬಂದವರು ಎಂದು ಹೇಳಿದ್ದಾರೆ. ಇನ್ನು ರೋಷನ್ ಮಾತಾಡಿ ನಿಮ್ಮ ಹರಕೆಯಿಂದ ನಾನು ಕೋಟಿ ಕೋಟಿ ಒಡೆಯ ಆಗಲಿ ಎಂದು ಹೇಳಿದ್ದಾರೆ. ಇದನ್ನೂ ಓದಿ: ಮಾತಿನ ಮಲ್ಲಿ ಅನುಶ್ರೀ ಹೊಸ ಗಾಯನ.. ನವಜೋಡಿಗೆ ಹಾರೈಸಿದ ತಾರಾಗಣ..!
ರೋಷನ್ ಮೂಲತಃ ಕೊಡಗಿನ ಕುಶಾಲನಗರದವರಾಗಿದ್ದು, ಬೆಂಗಳೂರಿನ ಐಟಿಬಿಟಿ ಕಂಪನಿಯ ಉದ್ಯೋಗಿಯಾಗಿದ್ದಾರೆ. ಅನುಶ್ರೀಗಾಗಿ ಬಿರಿಯಾನಿ, ಫಿಶ್ ಪ್ರೈ ಜೊತೆಗೆ ವಿವಿಧ ಖಾದ್ಯಗಳನ್ನ ಮಾಡಿ ಕೊಡ್ತಾರಂತೆ. ಈ ಬಗ್ಗೆ ಅನುಶ್ರೀ ಹೇಳಿಕೊಂಡಿದ್ದಾರೆ. ಏಕಾಂಗಿ ನಿರೂಪಣೆಯ ನಂತರ ಅರ್ಧಾಂಗಿಯಾಗುವ ಹೊಸ ಮನ್ವಂತರಕ್ಕೆ ಅನುಶ್ರೀಯ ಉತ್ತರ ಸಿಕ್ಕಿದೆ. ಬೆಂಗಳೂರಿನ ಹೊರವಲಯದಲ್ಲಿ ಅನುಶ್ರೀ-ರೋಷನ್ ಮದುವೆ ಸರಳವಾಗಿ ನೆರವೇರಿದೆ.