ಅಂಬಾನಿ ಮಗನ ಅದ್ಧೂರಿ ಪ್ರೀ-ವೆಡ್ಡಿಂಗ್‌ನಲ್ಲಿ ಮಿಂಚಿದ ಸೆಲೆಬ್ರಿಟಿಗಳು

Public TV
2 Min Read
anant ambani

ವಿಶ್ವದ ಟಾಪ್ ಶ್ರೀಮಂತರಲ್ಲಿ ಒಬ್ಬರಾದ ಮುಖೇಶ್ ಅಂಬಾನಿ (Mukesh Ambani) ಕುಟುಂಬದಲ್ಲಿ ಸಂಭ್ರಮ ಮನೆ ಮಾಡಿದೆ. ಅದಕ್ಕೆ ಕಾರಣ, ಮಗನ ವಿವಾಹ ಪೂರ್ವ ಕಾರ್ಯಕ್ರಮ. ಸದ್ಯ ಗುಜ್‌ರಾತ್‌ನ ಜಾಮ್‌ನಗರದಲ್ಲಿ ಅದ್ಧೂರಿಯಾಗಿ ಪ್ರೀ-ವೆಡ್ಡಿಂಗ್ ಫಂಕ್ಷನ್‌ಗಳು ನಡೆಯುತ್ತಿವೆ. ಈ ಸಂಭ್ರಮಕ್ಕೆ ದೇಶ-ವಿದೇಶದಿಂದ ಅನೇಕ ಸೆಲೆಬ್ರಿಟಿಗಳು ಆಗಮಿಸಿದ್ದಾರೆ. ಹೀಗಿದೆ ನೋಡಿ ಕಾರ್ಯಕ್ರಮದ ಝಲಕ್.

kareena kapoor

ಅನಂತ್- ರಾಧಿಕಾ (Radhika Merchant) ಹಲವು ವರ್ಷಗಳಿಂದ ಪರಿಚಿತರು. ಆ ಪರಿಚಯವೇ ಪ್ರೀತಿಗೆ ತಿರುಗಿ ಇದೀಗ ಮದುವೆಯ ಮುದ್ರೆ ಒತ್ತಲು ಈ ಜೋಡಿ ಸಜ್ಜಾಗಿದ್ದಾರೆ. ಗುರುಹಿರಿಯರ ಸಮ್ಮತಿಯ ಮೇರೆಗೆ ಈ ಜೋಡಿ ಮದುವೆಯಾಗುತ್ತಿದ್ದಾರೆ. ಇದನ್ನೂ ಓದಿ:‘ಒಬ್ಬನೇ ಶಿವ ಒಬ್ಬನೇ ಯುವ’ ಎಂದು ರಗಡ್ ಆಗಿ ಎಂಟ್ರಿ ಕೊಟ್ಟ ದೊಡ್ಮನೆ ಮಗ

janhvi kapoor

ಅನಂತ್ (Anant Ambani) ಮತ್ತು ರಾಧಿಕಾ ಮದುವೆ ಇದೇ ಜೂನ್ 12ಕ್ಕೆ ಫಿಕ್ಸ್ ಆಗಿದೆ. ಮಾರ್ಚ್ 1ರಂದು ಶುರುವಾಗಿದ್ದು, ಮಾರ್ಚ್‌ 3ರವರೆಗೆ ವಿವಾಹ ಪೂರ್ವ ಕಾರ್ಯಕ್ರಮ ನಡೆಯಲಿದೆ. ಅದಕ್ಕಾಗಿ ಗುಜರಾತ್‌ನ ಜಾಮ್‌ನಗರವನ್ನು ಸಿಂಗರಿಸಲಾಗಿದೆ. ಅನಂತ್ ಪ್ರೀ-ವೆಡ್ಡಿಂಗ್‌ಗೆ ಸಂಗೀತ, ನೃತ್ಯ ಹೀಗೆ ವಿವಿಧ ರೀತಿಯ ಪ್ರದರ್ಶನಗಳು ಇರಲಿದೆ.

rani

ಈ ಪ್ರೀ-ವೆಡ್ಡಿಂಗ್‌ನ ಮುಖ್ಯ ಆಕರ್ಷಣೆ ಎಂದರೆ ಸುಪ್ರಸಿದ್ಧ ಗಾಯಕಿ ರಿಯಾನಾ ಅವರ ಸಂಗೀತ ಕಾರ್ಯಕ್ರಮ. ಅನಂತ್-ರಾಧಿಕಾ ಪ್ರೀ-ವೆಡ್ಡಿಂಗ್ ಕಾರ್ಯಕ್ರಮದ ಸುಂದರ ಸಂಜೆಗೆ ರಿಯಾನಾ ಗಾಯನ ಕಿಕ್ ಕೊಟ್ಟಿತ್ತು. ಕಾರ್ಯಕ್ರಮದಲ್ಲಿ ರಿಯಾನಾ ಹಾಡಲು ಬರೋಬ್ಬರಿ 74 ಕೋಟಿ ರೂ.ಸಂಭಾವನೆ ಪಡೆದಿದ್ದಾರೆ.

sonali bendre

ಅನಂತ್ ಅಂಬಾನಿ ಮದುವೆಯಾಗಿ ಅದ್ಧೂರಿ ದೇಗುಲ ನಿರ್ಮಿಸಲಾಗಿದೆ. ಸೊಗಸಾಗಿ ಕೆತ್ತನೆ ಮಾಡಿದ ಸ್ಥಂಭಗಳು, ಕಲಾಕೃತಿಗಳು ಹಾಗೂ ಕರಕುಶಲವಸ್ತುಗಳು ಇಲ್ಲಿ ಕಾಣಬಹುದು.

suhana

ಮದುವೆಯ ಪೂರ್ವ ಸಂಭ್ರಮದಲ್ಲಿ ಶಾರುಖ್ ಖಾನ್, ಗೌರಿ ಖಾನ್, ಸಲ್ಮಾನ್ ಖಾನ್, ಬಿಲ್ ಗೇಟ್ಸ್, ಮಾರ್ಕ್ ಜುಕರ್‌ಬರ್ಗ್, ಸದ್ಗುರು, ಅಕ್ಷಯ್ ಕುಮಾರ್, ಮುಂತಾದ ಸೆಲೆಬ್ರಿಟಿಗಳು ಭಾಗವಹಿಸಿದ್ದರು. ಆಲಿಯಾ ಭಟ್, ದೀಪಿಕಾ ಪಡುಕೋಣೆ, ರಣವೀರ್ ಸಿಂಗ್, ರಣಬೀರ್ ಕಪೂರ್, ನೀತು ಕಪೂರ್, ಅನನ್ಯಾ ಪಾಂಡೆ, ಜಾಹ್ನವಿ ಕಪೂರ್, ಶನಯಾ ಕಪೂರ್, ಶ್ರದ್ಧಾ ಕಪೂರ್, ಸೋನಮ್ ಕಪೂರ್ ಅಹುಜಾ, ಅನಿಲ್ ಕಪೂರ್ ಭಾಗಿಯಾಗಿದ್ದರು.

radhika 1

ಡೇವಿಡ್ ಧವನ್, ಎಂಎಸ್ ಧೋನಿ, ರೋಹಿತ್ ಶರ್ಮಾ, ಹಾರ್ದಿಕ್ ನೆಹ್ವಾಲ್, ಹಾರ್ದಿಕ್ ಪಾಂಡ್ಯ ಜಾಫ್ರಿ, ಅಮೀರ್ ಖಾನ್, ಸುಹಾನಾ ಖಾನ್, ರಿಯಾ ಕಪೂರ್, ಕರೀನಾ ಕಪೂರ್ ಖಾನ್, ಸೈಫ್ ಅಲಿ ಖಾನ್, ಸಾರಾ ಅಲಿ ಖಾನ್, ಇಬ್ರಾಹಿಂ ಅಲಿ ಖಾನ್, ಜಾನ್ ಅಬ್ರಹಾಂ, ಕರಿಷ್ಮಾ ಕಪೂರ್, ಅಟ್ಲೀ, ರಾಮ್ ಚರಣ್, ಮನೀಶ್ ಮಲ್ಹೋತ್ರಾ, ಮಾಧುರಿ ದೀಕ್ಷಿತ್ ನೇನೆ, ಕಿಯಾರಾ ಅಡ್ವಾಣಿ ಮತ್ತು ಸಿದ್ಧಾರ್ಥ್ ಮಲ್ಹೋತ್ರಾ ಇತರರ ಇದ್ದರು.

Share This Article