ಸ್ವರ್ಗವನ್ನು ಧರೆಗಿಳಿಸಿದ ಅಂಬಾನಿ ಮಗನ ಪ್ರೀ-ವೆಡ್ಡಿಂಗ್‌ನಲ್ಲಿ ಸಿನಿತಾರೆಯರ ದಂಡು

Public TV
2 Min Read
anant ambani 1 1

ವಿಶ್ವದ ಟಾಪ್ ಶ್ರೀಮಂತರಲ್ಲಿ ಒಬ್ಬರಾಗಿರುವ ಮುಖೇಶ್ ಅಂಬಾನಿ (Mukesh Ambani) ಪುತ್ರ ಅನಂತ್ ಅಂಬಾನಿ (Anant Ambani) ಪ್ರೀ-ವೆಡ್ಡಿಂಗ್ ಕಾರ್ಯಕ್ರಮವು ಜಾಯ್‌ನಗರದಲ್ಲಿ ಅದ್ಧೂರಿಯಾಗಿ ನಡೆಯುತ್ತಿದೆ. ಸ್ವರ್ಗವನ್ನು ಧರೆಗಿಳಿಸಿದ ಅಂಬಾನಿ ಕುಟುಂಬದ ಮದುವೆಯಲ್ಲಿ ಯಾರೆಲ್ಲಾ ಹಾಜರಿ ಹಾಕಿದ್ದರು. ಇಲ್ಲಿದೆ ನೋಡಿ ಸಂಭ್ರಮದ ಝಲಕ್.

radhika

ಅನಂತ್- ರಾಧಿಕಾ (Radhika Merchant) ಹಲವು ವರ್ಷಗಳಿಂದ ಪರಿಚಿತರು. ಆ ಪರಿಚಯವೇ ಪ್ರೀತಿಗೆ ತಿರುಗಿ ಇದೀಗ ಮದುವೆಯ ಮುದ್ರೆ ಒತ್ತಲು ಈ ಜೋಡಿ ಸಜ್ಜಾಗಿದ್ದಾರೆ. ಗುರುಹಿರಿಯರ ಸಮ್ಮತಿಯ ಮೇರೆಗೆ ಈ ಜೋಡಿ ಮದುವೆಯಾಗುತ್ತಿದ್ದಾರೆ.

radhika 1

ಅನಂತ್ ಮತ್ತು ರಾಧಿಕಾ ಮದುವೆ ಇದೇ ಜೂನ್ 12ಕ್ಕೆ ಫಿಕ್ಸ್ ಆಗಿದೆ. ಮಾರ್ಚ್ 1ರಿಂದ 3ರವರೆಗೆ ವಿವಾಹ ಪೂರ್ವ ಕಾರ್ಯಕ್ರಮ ಜರುಗಲಿದೆ. ಅದಕ್ಕಾಗಿ ಗುಜರಾತ್‌ನ ಜಾಮ್‌ನಗರವನ್ನು ಸಿಂಗರಿಸಲಾಗಿದೆ. ಅನಂತ್ ಪ್ರೀ-ವೆಡ್ಡಿಂಗ್ ಕಾರ್ಯಕ್ರಮದಲ್ಲಿ ಸಂಗೀತ, ನೃತ್ಯ ಹೀಗೆ ವಿವಿಧ ರೀತಿಯ ಪ್ರದರ್ಶನಗಳಿತ್ತು. ದೇಶ-ವಿದೇಶದ ಸೆಲೆಬ್ರಿಟಿಗಳು ಭಾಗಿಯಾಗಿದ್ದರು.

FotoJet 3 1

ಅದರಲ್ಲಿ ‘ಆರ್‌ಆರ್‌ಆರ್’ (RRR) ಚಿತ್ರದ ನಾಟು ನಾಟು ಹಾಡಿಗೆ ಸಲ್ಮಾನ್ ಖಾನ್ (Salman Khan), ಆಮೀರ್ ಖಾನ್, ಶಾರುಖ್ (Sharukh Khan) ಹೆಜ್ಜೆ ಹಾಕಿರೋದು ಕಾರ್ಯಕ್ರಮದ ಹೈಲೆಟ್ ಆಗಿತ್ತು.

salman khan

ಅದಷ್ಟೇ ಅಲ್ಲ, ಈ ಕಾರ್ಯಕ್ರಮದಲ್ಲಿ ‘ಆರ್‌ಆರ್‌ಆರ್’ ಚಿತ್ರದ ನಟ ರಾಮ್ ಚರಣ್ (Ramcharan) ಕೂಡ ಭಾಗಿಯಾಗಿದ್ದರು. ಅವರು ಕೂಡ ಸಲ್ಮಾನ್ ಖಾನ್, ಆಮೀರ್ ಖಾನ್, ಶಾರುಖ್ ಖಾನ್ ಜೊತೆ ಸೇರಿ ನಾಟು ನಾಟು ಹಾಡಿಗೆ ಡ್ಯಾನ್ಸ್ ಮಾಡಿದ್ದಾರೆ.

ram charan

ಬಾಲಿವುಡ್ ಬೆಸ್ಟ್ ಕಪಲ್ ರಣ್‌ವೀರ್ ಸಿಂಗ್- ದೀಪಿಕಾ ಪಡುಕೋಣೆ (Deepika Padukone) ಕೂಡ ಹಿಂದಿ ರೊಮ್ಯಾಂಟಿಕ್ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ತಾಯಿಯಾಗುತ್ತಿರುವ ಗುಡ್ ನ್ಯೂಸ್ ಹೇಳಿದ ಬಳಿಕ ಅಂಬಾನಿ ಮನೆ ಕಾರ್ಯಕ್ರಮದಲ್ಲಿ‌ ನಟಿ ಕಾಣಿಸಿಕೊಂಡಿದ್ದಾರೆ.

deepika

‘ಅನಿಮಲ್’ (Animal) ಸೂಪರ್ ಸ್ಟಾರ್ ರಣ್‌ಬೀರ್ ಕಪೂರ್ ಮತ್ತು ರಣ್‌ವೀರ್ ಸಿಂಗ್ (Ranveer Singh) ತಮ್ಮ ನೃತ್ಯದ ನಂತರ ನವಜೋಡಿಗೆ ವಿಶ್ ಮಾಡಿದ್ದಾರೆ. ಮದುವೆ, ಪ್ರೀತಿಯ ಬಗ್ಗೆ ಸಲಹೆ ನೀಡಿದ್ದಾರೆ.

FotoJet 4

ಬಾಲಿವುಡ್ ಬೆಡಗಿ ಆಲಿಯಾ ಭಟ್- ರಣ್‌ಬೀರ್ ಕಪೂರ್ ಜೋಡಿ ಅಂಬಾನಿ ಮನೆ ಕಾರ್ಯಕ್ರಮದಲ್ಲಿ ಮಗಳು ರಾಹಾ ಜೊತೆ ಭಾಗಿಯಾಗಿ ಎಂಜಾಯ್ ಮಾಡಿದ್ದಾರೆ.

aliaa bhat

ಮಹೀಂದ್ರ ಗ್ರೂಪ್ ಚೇರ್‌ಮೇನ್ ಆನಂದ್ ಮಹೀಂದ್ರ (Anand Mahindra) ಅವರು ಕೂಡ ತಮ್ಮ ಪತ್ನಿ ಅನುರಾಧಾ ಜೊತೆ ಅಂಬಾನಿ ಮಗನ ಕಾರ್ಯಕ್ರಮದಲ್ಲಿ ಮಿಂಚಿದ್ದರು.

anand

ನ್ಯೂಜಿಲೆಂಡ್ ಅಂತರಾಷ್ಟ್ರೀಯ ಕ್ರಿಕೆಟಿಗ ಟ್ರೆಂಟ್ ಬೌಲ್ಟ್ (Trent Boult) ಅವರು ಅಂಬಾನಿ ಕುಟುಂಬದಲ್ಲಿ ಭಾಗಿಯಾಗಿದ್ದಾರೆ. ಇದನ್ನೂ ಓದಿ:ಅಂಬಾನಿ ಮಗನ ಅದ್ಧೂರಿ ಪ್ರೀ-ವೆಡ್ಡಿಂಗ್‌ನಲ್ಲಿ ಮಿಂಚಿದ ಸೆಲೆಬ್ರಿಟಿಗಳು

Trent Alexander Boult

ಬಿಲ್ ಗೇಟ್ಸ್, ಮಾರ್ಕ್ ಜುಕರ್‌ಬರ್ಗ್, ಸದ್ಗುರು, ಡೇವಿಡ್ ಧವನ್, ಎಂಎಸ್ ಧೋನಿ, ರೋಹಿತ್ ಶರ್ಮಾ, ಹಾರ್ದಿಕ್ ಪಾಂಡ್ಯ, ಅಮೀರ್ ಖಾನ್, ಸುಹಾನಾ ಖಾನ್, ರಿಯಾ ಕಪೂರ್ ಭಾಗಿಯಾಗಿದ್ದರು.

fotojet 1 1

ಕರೀನಾ ಕಪೂರ್ ಖಾನ್, ಸೈಫ್ ಅಲಿ ಖಾನ್, ಸಾರಾ ಅಲಿ ಖಾನ್, ಇಬ್ರಾಹಿಂ ಅಲಿ ಖಾನ್, ಜಾನ್ ಅಬ್ರಹಾಂ, ಕರಿಷ್ಮಾ ಕಪೂರ್, ಅಟ್ಲೀ, ಮನೀಶ್ ಮಲ್ಹೋತ್ರಾ, ಮಾಧುರಿ ದೀಕ್ಷಿತ್ ನೇನೆ, ಕಿಯಾರಾ ಅಡ್ವಾಣಿ ಮತ್ತು ಸಿದ್ಧಾರ್ಥ್ ಮಲ್ಹೋತ್ರಾ ಭಾಗಿಯಾಗಿದ್ದಾರೆ.

FotoJet 2 1

ಅನಂತ್-ರಾಧಿಕಾ ಪ್ರೀ-ವೆಡ್ಡಿಂಗ್ ಕಾರ್ಯಕ್ರಮದ ಸುಂದರ ಸಂಜೆಗೆ ರಿಯಾನಾ ಗಾಯನ ಕಿಕ್ ಕೊಟ್ಟಿದೆ. ಕಾರ್ಯಕ್ರಮದಲ್ಲಿ ಹಾಡಲು ರಿಯಾನಾ ಬರೋಬ್ಬರಿ 74 ಕೋಟಿ ರೂ.ಸಂಭಾವನೆ ಪಡೆದಿರೋದು ವಿಶೇಷ.

kareena kapoor

ಅನಂತ್ ಅಂಬಾನಿ ಪ್ರೀ-ವೆಡ್ಡಿಂಗ್‌ಗೆ ಅದ್ಧೂರಿ ದೇಗುಲ ನಿರ್ಮಿಸಲಾಗಿದೆ. ಸೊಗಸಾಗಿ ಕೆತ್ತನೆ ಮಾಡಿದ ಸ್ತಂಭಗಳು, ಕಲಾಕೃತಿಗಳು ಹಾಗೂ ಕರಕುಶಲವಸ್ತುಗಳು ಇಲ್ಲಿ ಕಾಣಬಹುದು.

Share This Article