ಬೆಂಗಳೂರು: ಶಾಸಕ ಆನಂದ್ ಸಿಂಗ್ ಅವರ ತಲೆಗೆ ಪೆಟ್ಟಾಗಿದ್ದು, ವೈದ್ಯರು 12 ಹೊಲಿಗೆ ಹಾಕಿದ್ದಾರೆ ಎಂಬ ಮಾಹಿತಿ ಅಪೋಲೋ ಆಸ್ಪತ್ರೆಯ ಮೂಲಗಳು ಪಬ್ಲಿಕ್ ಟಿವಿಗೆ ತಿಳಿಸಿವೆ.
ಆನಂದ್ ಸಿಂಗ್ ಅವರಿಗೆ ಆಸ್ಪತ್ರೆಗೆ ದಾಖಲಾಗಿರುವ ಬಗ್ಗೆ ಮೊದಲಿನಿಂದಲೂ ಭಿನ್ನ ಹೇಳಿಕೆ ನೀಡುತ್ತಿರುವ ಕಾಂಗ್ರೆಸ್ ಶಾಸಕರು ಸತ್ಯವನ್ನು ಮುಚ್ಚಿಡಲು ಪ್ರಯತ್ನ ನಡೆಸುತ್ತಿದ್ದಾರೆ ಎನ್ನುವ ವಿಚಾರ ಮತ್ತಷ್ಟು ಬಲಗೊಂಡಿದೆ. ಇದನ್ನು ಓದಿ: ಆನಂದ್ ಸಿಂಗ್ ಎದೆ ನೋವಿನಿಂದ ಆಸ್ಪತ್ರೆಗೆ ದಾಖಲು: ಸಂಸದ ಡಿಕೆ ಸುರೇಶ್
Advertisement
Advertisement
ಮೊದಲು ಸಚಿವ ಡಿಕೆ ಶಿವಕುಮಾರ್ ಅವರು ಮಾತನಾಡಿ ಆನಂದ್ ಸಿಂಗ್ ರಾತ್ರಿ ಮದುವೆಗೆ ತೆರಳಿದ್ದು, ಆ ಬಳಿಕ ಎಲ್ಲರೂ ಮಾತನಾಡಿ ತೆರಳಿದ್ದಾರೆ. ಯಾವುದೇ ಗಲಾಟೆ ಆಗಿಲ್ಲ ಎಂದು ಸ್ಪಷ್ಟನೆ ನೀಡಿದ್ದರು. ಆ ಬಳಿಕ ಆಸ್ಪತ್ರೆಗೆ ಭೇಟಿ ನೀಡಿ ಮಾತನಾಡಿದ ಸಂಸದ ಡಿಕೆ ಸುರೇಶ್ ಅವರು ಆನಂದ್ ಸಿಂಗ್ ಎದೆನೋವು ಕಾಣಿಸಿಕೊಂಡ ಕಾರಣ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರ ತಲೆಗೆ ಯಾವುದೇ ಗಾಯ ಆಗಿಲ್ಲ ಎಂದು ಎಂದಿದ್ದರು. ಆದರೆ ಈಗ ಆಸ್ಪತ್ರೆಯ ದಾಖಲೆಯಲ್ಲಿ ಬೇರೆಯೇ ಮಾಹಿತಿ ದಾಖಲಿಸಿದ್ದಾರೆ. ಇದನ್ನು ಓದಿ: ಬಾಟ್ಲಿ ಪೆಟ್ಟು ತಿಂದು ಅಪೋಲೋ ಆಸ್ಪತ್ರೆ ಸೇರಿದ ಆನಂದ್ ಸಿಂಗ್?
Advertisement
Advertisement
ಆಸ್ಪತ್ರೆ ದಾಖಲೆ ಮಾಹಿತಿ ಪ್ರಕಾರ ಆನಂದ್ ಸಿಂಗ್ ಅವರು ಕಾರಿಗೆ ಹತ್ತುವ ವೇಳೆ ಜಾರಿ ಬಿದ್ದು ತಲೆಗೆ ಗಾಯವಾಗಿದೆ. ಆದ್ದರಿಂದ ಅವರ ತಲೆಗೆ 12 ಹೊಲಿಗೆ ಹಾಕಲಾಗಿದೆ. ಅಲ್ಲದೇ ಗಾಯದ ಬಗ್ಗೆ ತಲೆಗೆ ಸಿಟಿ ಸ್ಕ್ಯಾನ್ ತಪಾಸಣೆ ನಡೆದಿದ್ದು, ವರದಿಗಳು ಬಂದ ಬಳಿಕ ಹೆಚ್ಚಿನ ಮಾಹಿತಿ ನೀಡಲಾಗುತ್ತಿದೆ ಎಂಬ ಮಾಹಿತಿ ಲಭಿಸಿದೆ. ಇದನ್ನು ಓದಿ: ಗುರು ಆನಂದ್ ಸಿಂಗ್ ಮೇಲೆ ಶಿಷ್ಯ ಗಣೇಶ್ ಅಟ್ಯಾಕ್?-ಇದು ಇನ್‍ಸೈಡ್ ಸ್ಟೋರಿ
ಈ ಕುರಿತು ಪಬ್ಲಿಕ್ ಟಿವಿಗೆ ಮಾಹಿತಿ ನೀಡಿದ ಅಪೋಲೋ ಆಸ್ಪತ್ರೆ ವೈದ್ಯ ಯತೀಶ್ ಅವರು, ಶಾಸಕರೊಬ್ಬರು ಆಸ್ಪತ್ರೆಗೆ ದಾಖಲಾಗಿರುವ ಬಗ್ಗೆ ನನಗೆ ಮಾಹಿತಿ ಲಭಿಸಿದೆ. ಅವರ ಆರೋಗ್ಯದಿಂದ ಇದ್ದಾರೆ ಎಂಬ ಮಾಹಿತಿ ಲಭಿಸಿದೆ. ಆದರೆ ಅವರು ಆಸ್ಪತ್ರೆಗೆ ದಾಖಲಾದ ವೇಳೆ ಯಾವ ಸ್ಥಿತಿಯಲ್ಲಿ ಇದ್ದರು ಎಂಬ ಬಗ್ಗೆ ಮಾಹಿತಿ ಲಭಿಸಿಲ್ಲ. ಮಾಹಿತಿಯನ್ನು ತಿಳಿದುಕೊಂಡು ಪ್ರತಿಕ್ರಿಯೆ ನೀಡುತ್ತೇನೆ ಎಂದು ತಿಳಿಸಿದರು.
https://www.youtube.com/watch?v=9xgPiNXdmxU
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv