10 ವರ್ಷ ಕಟ್ಟಪಟ್ಟು ದುಡಿದು ಒಂದೊಂದು ರೂಪಾಯಿಯನ್ನು ಕೂಡಿ ಹಾಕಿ ಎಸ್‍ಯುವಿ ಕಾರು ಕಾರಿದಿಸಿದ ಅಭಿಮಾನಿಗೆ ಮಹೀಂದ್ರಾ ಗ್ರೂಪ್‍ನ ಅಧ್ಯಕ್ಷರಾದ ಕೈಗಾರಿಕೋದ್ಯಮಿ ಆನಂದ್ ಮಹೀಂದ್ರಾ ಅವರು ಶುಭ ಕೋರಿರುವ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡುತ್ತಿದೆ.
ಸಾಮಾನ್ಯವಾಗಿ ಪ್ರತಿಯೊಬ್ಬರಿಗೂ ತಾವು ಕಷ್ಟಪಟ್ಟು ಸಂಪಾದಿಸಿದ ಹಣದಿಂದ ಕಾರು, ತಮ್ಮ ಕನಸಿನ ಮನೆ ಖರೀದಿಬೇಕು ಎಂಬ ಆಸೆ ಇರುತ್ತದೆ. ಆದರೆ ಮಾಧ್ಯಮವರ್ಗದ ಎಷ್ಟೋ ಜನರಿಗೆ ಇದು ದೂರದ ಕನಸಾಗಿಯೇ ಉಳಿದು ಬಿಡುತ್ತದೆ. ನಿತ್ಯ ಜೀವನದ ಖರ್ಚುಗಳನ್ನೇ ನಿಭಾಯಿಸಲು ಪರದಾಡುವಾಗ ಲಕ್ಷಗಟ್ಟಲೆ ಹಣ ನೀಡಿ ಕಾರು (SUV) ಖರೀದಿಸುವುದು ಬಹಳಷ್ಟು ಸಲ ಅವರ ಜೀವಮಾನದ ಪೂರ್ತಿ ಉಳಿಕೆಯಾಗಿರುತ್ತದೆ. ಆದರೆ ಇಲ್ಲೊಬ್ಬ ವ್ಯಕ್ತಿ 10 ವರ್ಷ ಕಷ್ಟಪಟ್ಟು ಕೆಲಸ ಮಾಡಿ ಒಂದೊಂದು ರೂಪಾಯಿಯನ್ನು ಕೂಡಿ ಹಾಕಿ ಚಂದದೊಂದು ಎಸ್‍ಯುವಿ ಕಾರನ್ನು ಖರೀದಿಸಿ, ತಮ್ಮ ಕನಸ್ಸನ್ನು ನನಸಾಗಿಸಿಕೊಂಡಿದ್ದಾರೆ. ಇದನ್ನೂ ಓದಿ: ಅಲ್‌ಖೈದಾ ಮುಖ್ಯಸ್ಥನ ಹತ್ಯೆಗೆ ಬಳಸಿದ್ದು ಬ್ಲೇಡ್ ಬಾಂಬ್ – ಇದು ಸ್ಫೋಟಿಸಲ್ಲ, ಛಿದ್ರಿಸುತ್ತೆ!
Advertisement
Advertisement
ಹೌದು, ಅಶೋಕ್‍ಕುಮಾರ್ ಅವರು ತಮ್ಮ ಕನಸಿನ ಮಹೀಂದ್ರಾ ಎಸ್‍ಯುವಿ ಕಾರನ್ನು ಖರೀದಿಸಿದ್ದು, ಹೂವಿನ ಹಾರದಿಂದ ಅಲಂಕರಿಸಿದ್ದ ತಮ್ಮ ಹೊಚ್ಚಹೊಸ ಬಿಳಿ ಎಸ್‍ಯುವಿ ಕಾರಿನ ಪಕ್ಕ ನಿಂತು ಫೋಟೋವನ್ನು ಕ್ಲಿಕ್ಕಿಸಿಕೊಂಡು ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. 10 ವರ್ಷಗಳ ಕಠಿಣ ಪರಿಶ್ರಮದ ನಂತರ ಹೊಸ ಮಹೀಂದ್ರಾ ಎಕ್ಸ್‍ಯುವಿ 700 ಖರೀದಿಸಿದೆ, ಸರ್ ನನಗೆ ನಿಮ್ಮ ಆಶೀರ್ವಾದ ಬೇಕು ಎಂದು ಆನಂದ್ ಮಹೀಂದ್ರಾ ಅವರನ್ನು ಪೋಸ್ಟ್‌ನಲ್ಲಿ ಟ್ಯಾಗ್ ಮಾಡಿದ್ದರು.
Advertisement
@anandmahindra After 10 years hard work buy new Mahindra #XUV700 need ur blessing sir..???? pic.twitter.com/tdXiBqajK4
— C Ashokkumar (@itsakdmk) July 31, 2022
Advertisement
ಇದೀಗ ಈ ಪೋಸ್ಟ್‌ಗೆ ಆನಂದ್ ಮಹೀಂದ್ರಾ ಅವರು ಪ್ರತಿಕ್ರಿಯಿಸಿದ್ದು, ಅವರ ಕಂಪನಿ ನಿರ್ಮಿಸಿದ ಕಾರನ್ನು ಆಯ್ಕೆ ಮಾಡಿದ್ದಕ್ಕಾಗಿ ಅವರಿಗೆ ಧನ್ಯವಾದಗಳನ್ನು ಅರ್ಪಿಸಿದರು. ಧನ್ಯವಾದಗಳು. ನಮ್ಮ ಕಾರು ಖರೀದಿಸಿ ನೀವೇ ನಮಗೆ ಆಶೀರ್ವಾದ ಮಾಡಿದ್ದೀರಿ. ನಿಮ್ಮ ಯಶಸ್ಸಿಗೆ ಅಭಿನಂದನೆಗಳು. ಅದು ಕಠಿಣ ಪರಿಶ್ರಮದಿಂದ ಬಂದಿದೆ. ಹ್ಯಾಪಿ ಮೋಟಾರಿಂಗ್ ಎಂದು ಅವರು ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: ಆರೋಗ್ಯ ಸಚಿವರಿಂದ ಛೀಮಾರಿ – ಪಂಜಾಬ್ ಮಾಜಿ ಸಿಎಂ ಅತ್ತಿಗೆ ರಾಜೀನಾಮೆ
ಸದ್ಯ ಆನಂದ್ ಮಹೀಂದ್ರಾ ಅವರ ಟ್ವೀಟ್ ನೋಡಿ ಸಂತಸಗೊಂಡ ಅಭಿಮಾನಿ ಪ್ರತ್ಯುತ್ತರವಾಗಿ, ಮಹೀಂದ್ರಾಗೆ ತುಂಬಾ ಧನ್ಯವಾದಗಳು ಸರ್ ಎಂದು ಟ್ವೀಟ್‍ನಲ್ಲಿ ಬರೆದಿದ್ದಾರೆ. ಇದೀಗ ಅಭಿಮಾನಿಯ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿರುವ ಆನಂದ್ ಮಹೀಂದ್ರಾ ಅವರ ಟ್ವೀಟ್ ನೆಟ್ಟಿಗರನ್ನು ಆಕರ್ಷಿಸುತ್ತಿದೆ.
ಮಹೀಂದ್ರಾ ಅವರು ಟ್ವಿಟ್ಟರ್‌ನಲ್ಲಿ ಪ್ರತಿಕ್ರಿಯೆ ನೀಡುತ್ತಿರುವುದು ಇದೇ ಮೊದಲೇನಲ್ಲ. ಹಿಂದಿನಿಂದಲೂ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟಿವ್ ಆಗಿರುತ್ತಾರೆ. ಹಾಗೆಯೇ ಅವರ ಅನುಯಾಯಿಗಳೊಂದಿಗೂ ಕೂಡ ಸಂವಹನ ನಡೆಸುತ್ತಲೇ ಇರುತ್ತಾರೆ.