CrimeInternationalLatestLeading NewsMain Post

ಅಲ್‌ಖೈದಾ ಮುಖ್ಯಸ್ಥನ ಹತ್ಯೆಗೆ ಬಳಸಿದ್ದು ಬ್ಲೇಡ್ ಬಾಂಬ್ – ಇದು ಸ್ಫೋಟಿಸಲ್ಲ, ಛಿದ್ರಿಸುತ್ತೆ!

ವಾಷಿಂಗ್ಟನ್: ಅಫ್ಘಾನಿಸ್ತಾನದ ಕಾಬೂಲ್‌ನ ತನ್ನ ಮನೆಯ ಬಾಲ್ಕನಿಯಲ್ಲಿ ನಿಂತಿದ್ದ ಝವಾಹಿರಿಯನ್ನು ಕೊಲ್ಲಲು ಅಮೆರಿಕ ಬಳಸಿದ ಕಪಣಿ ಸ್ಫೋಟಿಸಿಲ್ಲ. ಆತನ ಮನೆಯವರಿಗೂ ಯಾವುದೇ ಹಾನಿಯಾಗಿಲ್ಲ. ಏಕೆಂದರೆ ಇದು ಸಾಮಾನ್ಯ ಕ್ಷಿಪಣಿಯಲ್ಲ. ಅಮೆರಿಕದ ಅತ್ಯಂತ ನೆಚ್ಚಿನ, ಸ್ಫೋಟಗೊಳ್ಳದ ಬ್ಲೇಡ್ ಕ್ಷಿಪಣಿ.

ನೂರಾರು ಜನರ ಮಧ್ಯೆಯಿದ್ದರು, ತನ್ನ ನಿರ್ದಿಷ್ಟ ಗುರಿಯನ್ನು ತಲುಪಿ ಹೊಡೆದು ಛಿದ್ರ ಛಿದ್ರ ಮಾಡುತ್ತದೆ. ಅಕ್ಕ ಪಕ್ಕದಲ್ಲಿರುವವರಿಗೆ ಒಂದಿಷ್ಟು ಹಾನಿ ಮಾಡುವುದಿಲ್ಲ ಎಂದು ವರದಿಯಾಗಿದೆ. ಇದನ್ನೂ ಓದಿ:  ಹರೀಶ್ ರಾಜ್ ಸಿನಿಪಯಣಕ್ಕೆ ಬೆಳ್ಳಿಹಬ್ಬದ ಸಂಭ್ರಮ: ಅಭಿಮಾನಿಗಳಿಗೆ ಋಣಿ ಎಂದ ನಟ

ಅಲ್‌ಖೈದಾ ಮುಖ್ಯಸ್ಥನ ಹತ್ಯೆಗೆ ಬಳಸಿದ್ದು ಬ್ಲೇಡ್ ಬಾಂಬ್ - ಇದು ಸ್ಫೋಟಿಸಲ್ಲ, ಛಿದ್ರಿಸುತ್ತೆ!

`ಹೆಲ್‌ಫೈರ್ ಆರ್-9 ಎಕ್ಸ್’ ಎಂಬ ಈ ಕ್ಷಿಪಣಿ ಅಣ್ವಸ್ತ್ರ ಸಿಡಿತಲೆಯನ್ನು ಹೊಂದಿಲ್ಲ. 5 ಅಡಿ ಉದ್ದ, 15 ಕೆಜಿ ತೂಕದ ಇದು ತನ್ನ ಒಡಲಿನಲ್ಲಿ ಆರು ರೇಜರ್ ನಂತರ ಬ್ಲೇಡ್‌ಗಳನ್ನು ಹೊಂದಿರುತ್ತದೆ. ತನ್ನ ಗುರಿ ಸಮೀಪಿಸುತ್ತಿದ್ದಂತೆ ಆ ಬ್ಲೇಡ್‌ಗಳು ತೆರೆದುಕೊಂಡು ನಿರ್ದಿಷ್ಟ ವ್ಯಕ್ತಿಯನ್ನ ನಿರ್ದಿಷ್ಟ ಜಾಗದಲ್ಲೇ ಕತ್ತರಿಸಿ ಹಾಕಿಬಿಡುತ್ತವೆ. ಇದನ್ನೂ ಓದಿ: ನಾಲ್ಕು ಭಾಷೆಗಳಲ್ಲಿ ರಿಲೀಸ್ ಆಯ್ತು ‘ವಿಜಯಾನಂದ’ ಟ್ರೈಲರ್

2017ರಲ್ಲಿ ಅಲ್‌ಖೈದಾ ನಾಯಕ ಅಬು ಆಲ್ ಖಯರ್ ಅಲ್ ಮಸ್ತಿಯನ್ನು ಕೊಲ್ಲಲು ಅಮೆರಿಕ ಇದೇ ಕ್ಷಿಪಣಿ ಬಳಸಲಾಗಿತ್ತು. ಸಿರಿಯಾದ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಅಬುವನ್ನು ಗುರಿಯಾಗಿಸಿ, `R9X Hellfire‘ ಉಡಾವಣೆ ಮಾಡಲಾಗಿತ್ತು. ಆ ಕಾರಿನ ಹಿಂಭಾಗ ಹಾಗೂ ಮುಂಭಾಗಕ್ಕೆ ಏನೂ ಆಗಿರಲಿಲ್ಲ. ಆದರೆ ಕಾರಿನ ಚಾವಣಿ, ಒಳಾಂಗಣ, ಕಾರಿನೊಳಗಿದ್ದವರು ಸಂಪೂರ್ಣ ಛಿದ್ರ-ಛಿದ್ರವಾಗಿದ್ದರು. ಈಗ ಈ ಕ್ಷಿಪಣಿಯ ಬಗ್ಗೆ ಭಾರೀ ಚರ್ಚೆಯಾಗಿತ್ತು. ಇದೇ ಕ್ಷಿಪಣಿಯನ್ನು ಅಲ್‌ಖೈದಾ ಮುಖ್ಯಸ್ಥನ ಹತ್ಯೆಗೆ ಬಳಸಲಾಗಿದೆ ಎಂದು ಮೂಲಗಳು ತಿಳಿಸಿವೆ.

Live Tv

Leave a Reply

Your email address will not be published. Required fields are marked *

Back to top button