ಚಿಕ್ಕೋಡಿ (ಬೆಳಗಾವಿ): ಹನುಮಂತನಿಗೆ (Aanjaneya) ಅಪಮಾನ ಮಾಡಿದ ಆರೋಪ ಹಿನ್ನೆಲೆಯಲ್ಲಿ ಮಳೆನೂ ಬರಲ್ಲ. ನದಿಗೆ ನೀರು ಜಾಸ್ತಿ ಆಗಲ್ಲ ಅಂತ ಸ್ವಾಮೀಜಿ ಶಪಥ ಮಾಡಿರೋ ವಿಚಿತ್ರ ಘಟನೆ ಬೆಳಗಾವಿ ಜಿಲ್ಲೆಯಲ್ಲಿ ನಡೆದಿದೆ.
ಬೆಳಗಾವಿ (Belagavi) ಜಿಲ್ಲೆಯ ಖಾನಾಪುರ ತಾಲೂಕಿನ ಹಬ್ಬಾನಟ್ಟಿ ಗ್ರಾಮ ಹನುಮಂತ ದೇವರ ಅರ್ಚಕ ಸ್ವಾಮೀಜಿ ದೇವೆಂದ್ರ ನದಿಯಲ್ಲಿಯೇ ಶಪಥ ಮಾಡಿ ಅಲ್ಲಿಯೇ ಕುಳಿತಿದ್ದಾರೆ. ಇದನ್ನೂ ಓದಿ: ದಕ್ಷಿಣ ಕನ್ನಡದಲ್ಲಿ ರೆಡ್ ಅಲರ್ಟ್ – ಜುಲೈ 5ರಂದು ಶಾಲೆ, ಕಾಲೇಜುಗಳಿಗೆ ರಜೆ ಘೋಷಣೆ
Advertisement
Advertisement
ಕಳೆದ 15 ದಿನಗಳಿಂದ ಶಪಥ ಮಾಡಿ ತಪಸ್ಸಿಗೆ ಕುಳಿತಿರುವ ಸ್ವಾಮೀಜಿ, ನಾನು ನದಿಯಿಂದ ಏಳುವವರೆಗೆ ಮಳೆ ಪ್ರಮಾಣ ಕಡಿಮೆಯೇ ಆಗಿರುತ್ತೆ. ನದಿ ನೀರು ಸಹ ಈಗೆಷ್ಟಿದೆಯೋ ಅಷ್ಟೆ ಇರುತ್ತೆ ಎಂದು ನದಿಯಲ್ಲೇ ತಪಸ್ಸಿಗೆ ಕುಳಿತಿದ್ದಾರೆ. ಅಲ್ಲದೆ ದೇವಸ್ಥಾನದ ಕಮೀಟಿಯವರು ಹನುಂತನಿಗೆ ಅಪಮಾನ ಮಾಡಿದ್ದಾರೆ. ಕಮಿಟಿಯಲ್ಲಿರುವ ಇಬ್ಬರು ಜನರನ್ನು ತೆಗೆಯಬೇಕು ಎಂದು ಸ್ವಾಮೀಜಿ ವಾದಿಸುತ್ತಿದ್ದಾರೆ.
Advertisement
Web Stories